ಶ್ವಾನ ದಾಳಿಗೆ ಮೂವರು ಗಂಭೀರ

ಶ್ವಾನ  ದಾಳಿಗೆ 2 ಮಕ್ಕಳು ಸೇರಿದಂತೆ  ಒರ್ವ ಮಹಿಳೆ ಗಂಭೀರ  ಗಾಯಗೊಂಡ ಘಟನೆ ಕುಂದಾಪುರ ತಾಲೂಕಿನ ಕಂಡ್ಲೂರು ಸೇತುವೆ ಬಳಿಯ ತೊಪ್ಲು ಎಂಬಲ್ಲಿ ನಡೆದಿದೆ .

ಮನೆಯ ಬಳಿ ಆಟವಾಡುತ್ತಿದ್ದ ಮಕ್ಕಳಾದ ಅದ್ವಿತ್ (4) ಆಯೆಜಾ (3 )  ಮೇಲೆ ನಾಲ್ಕೈದು ಶ್ವಾನಗಳು ದಾಳಿ ಮಾಡಿದೆ ಇದೆ ಸಂದರ್ಭದಲ್ಲಿ ಬೀದಿನಾಯಿಗಳು  ದಾಳಿಯಿಂದ ಮಕ್ಕಳನ್ನು ಕಾಪಾಡಲು ಯತ್ನಿಸಿದ ಕನಕ ಪೂಜಾರ್ತಿ (48 ) ರವರು ಗಂಭೀರ ಗಾಯಗೊಂಡಿದ್ದಾರೆ .

ಗಾಯಗೊಂಡವರು ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ  ಪಡೆಯುತ್ತಿದ್ದಾರೆ ಈ ಪ್ರದೇಶದಲ್ಲಿ ಬೀದಿನಾಯಿಗಳ  ಹಾವಳಿ ಹೆಚ್ಚಾಗಿದ್ದು ಇದುವರೆಗೆ ಯಾವುದೇ ಕ್ರಮಗಳು ಕೈಗೊಂಡಿಲ್ಲ ಈ ಘಟನೆಯ ನಂತರವಾದರು ಸಂಬಧಪಟ್ಟವರು ಎಚ್ಚೆತ್ತುಗೊಂಡು   ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ ,

Leave a Reply

Your email address will not be published. Required fields are marked *

error: Content is protected !!