ಬುದ್ಧಿವಂತರ ಜಿಲ್ಲೆಯ ಕಾಪಾಡಿದ ಆ ಚತುರ ಯಾರು..?

‘ಕೊರೊನಾ’ ಅಟ್ಟಹಾಸ ನಮಗೆಲ್ಲರಿಗೂ ತಿಳಿದಿರುವಂತಹದೇ. ಚೀನಾದಿಂದ ಶುರುವಿಟ್ಟು ಇವತ್ತು ಜಗತ್ತಿನ ಬಲಶಾಲಿ ರಾಷ್ಟ್ರಗಳನ್ನೆಲ್ಲಾ ತನ್ನ ಕಾಲ ಕೆಳಗೆ ಅದುಮಿ ಅಪ್ಪಚ್ಚಿ ಮಾಡಿದ ಮಹಾಮಾರಿ. ಯಾವಾಗ ನಮ್ಮ ದೇಶಕ್ಕೂ ಕಾಲಿಡುವ ಸೂಚನೆ ಸಿಕ್ಕಿತ್ತೋ, ನಮ್ಮವರು ಉಳಿದವರಂತೆ ಅಸಡ್ಡೆ ಮಾಡಿದ್ದಂತೂ ನಿಜ. ಆವತ್ತೇ ಹೊರದೇಶದಿಂದ ಬಂದವರು/ ಬರುತ್ತಿರುವರೆಲ್ಲರನ್ನೂ ಕೂಡಿಹಾಕಿ ‘ಕ್ವಾರಂಟೈನ್’ ಮಾಡಿದ್ದಿದ್ರೆ ಇವತ್ತಿನ ‘ಲಾಕ್-ಡೌನ್’ ಪರಿಸ್ಥಿತಿ ಬರುತ್ತಿರಲಿಲ್ಲಾ. ಏನೇ ಇರಲಿ, ಕೆಲವೊಮ್ಮೆ ಕಾಲ ಮಿಂಚಿಹೋದ ಮೇಲೆ ಎಚ್ಚರವಾಗುವುದಿದೆ. ಎಚ್ಚರಗೊಂಡ  ನಂತರ ತೆಗೆದುಕೊಂಡ ಕ್ರಮಗಳು ನಿಜಕ್ಕೂ ಶ್ಲಾಘನೀಯ. ನಮ್ಮ ದೇಶದ ಪ್ರಧಾನಿಯವರು ಒಮ್ಮಿಂದೊಮ್ಮೆಲೆ ‘ಲಾಕ್-ಡೌನ್’ ಘೋಷಿಸುವಾಗ ಜನರೂ ಗಲಿಬಿಲಿಗೊಂಡದ್ದಂತೂ ನಿಜ. ಯಾಕೆಂದರೇ ಇಂತಹ ಒಂದು ಪರಿಸ್ಥಿತಿ ಜೀವನದಲ್ಲೇ ಮೊದಲ ಬಾರಿಗೆ ಅನುಭವಿಸುವಂತಹದು. ಮನೆಯಿಂದ ಹೊರಗಡೆ ಹೋಗದೇ ಬದುಕುವುದು ಹೇಗೆ ಎಂಬುದನ್ನು ಕಲಿಸಿಕೊಟ್ಟ ದಿನಗಳಿವು. ಈ ರೋಗದ ಬಗ್ಗೆ ಅರಿವು ಇಲ್ಲದಿರುವುದು; ಲಾಕ್-ಡೌನ್‍ನ ನೀತಿ ನಿಯಮಗಳನ್ನು ತಿಳಿದಿಲ್ಲವಿರುವುದು ಇನ್ನೊಂದು ವಿಷಯವಾದರೇ; ಯಾವುದು ಸರಿ ಯಾವುದು ತಪ್ಪು ಎನ್ನುವುದೇ ತಿಳಿಯದ ಸಂಧಿಗ್ದ ಸನ್ನಿವೇಷ ಏರ್ಪಟ್ಟಿತ್ತು.


ಇಂತಹ ಸಮಯದಲ್ಲಿ ನಮ್ಮ ಜಿಲ್ಲೆಯ ಜನರಿಗೆ ಅಪಂತ್ಭಾಂಧವರಾಗಿ ನೆರವಾಗಿ ಧಾವಿಸಿದ ಸರಕಾರಿ ಅಧಿಕಾರಿಯೇ ಈ ಅತಿ ಚತುರ ವ್ಯಕ್ತಿ; ನಮ್ಮ ನಿಮ್ಮೆಲ್ಲರನ್ನೂ ‘ಕೊರೊನಾ’ ದಿಂದ ಮುಕ್ತಿ ದೊರಕಿಸಿ ಕೊಟ್ಟ ಪುಣ್ಯವಂತರು. ಇವರು ಯಾರು? ಇದೇ ಈ ಹೊತ್ತಿನ ವಿಚಾರ. ಸರಕಾರಿ ಅಧಿಕಾರಿ ಎಂದರೆ ನಮ್ಮ ಮನಸ್ಸಿಗೆ ನೆನಪಾಗುವುದು, ಎಂಜಲು ಕಾಸಿಗಾಗಿ ಎನೂ ಮುಲಾಜಿಲ್ಲದೇ ಅಷ್ಟು ಕೊಡೀ ಇಷ್ಟು ಕೊಡಿ ಎಂದು ಬಾಯಿಬಿಟ್ಟು ಲಂಚ ಕೇಳುವ ಬಕಾಸುರಗಳು ಅಥವಾ ಕೆಲವೊಮ್ಮೆ ನಾವು ಎನಾದರೂ ನಾವಾಗಿ ಕೊಡುವವರೆಗೇ, ‘ನಾಳೆ ಬನ್ನಿ, ನಾಡಿದ್ದು ಬನ್ನಿ’ ಎಂದು ನಮ್ಮನ್ನು ಸತಾಯಿಸಿ ಪದೇ ಪದೇ ಕಛೇರಿಗಳಿಗೆ ಸುತ್ತಾಡಿಸುವ ಕ್ರೂರರು. ಅಮವಾಸ್ಯೆಗೋ ಹುಣ್ಣಿಮೆಗೋ ಎಂಬಂತೇ ಕೆಲವೊಮ್ಮೆ ದಕ್ಷ ಅಧಿಕಾರಿಗಳು ನೋಡಲು ಸಿಗುವುದುಂಟು. ಯಾವುತ್ತೋ ನಾವು ಅವಶ್ಯಕ ಕೆಲಸಗಳಿಗೆ ಕಂದಾಯ ಕಛೇರಿಗೋ, ಸಾರಿಗೆ ಕಛೇರಿಗೋ, ಅರಕ್ಷಕ ಠಾಣೆಗೋ ಹೋದಾಗ ಇಂತಹಾ ಸಂದರ್ಭಗಳು ಸಾಕಷ್ಟು ಬಾರಿ ಬಂದಿರಬಹುದು.

ಆದೇನಿರಲಿ ನಾನೀಗ ಹೇಳಲು ಹೊರಟ ಸರಕಾರಿ ಅಧಿಕಾರಿ ನಾವು ಅಂದುಕೊಂಡಂತೆ ಅಲ್ಲಾ. ಸರಕಾರದಿಂದ ಲಾಕ್-ಡೌನ್ ಸೂಚನೆ ಬಂದದ್ದೇ ತಡ ಇವರ ಕಾರ್ಯವೈಖರಿ ಶುರುವಾದದ್ದು ನಮ್ಮ ಗಮನಕ್ಕೆ ಬಂದದ್ದು. ಜಿಲ್ಲಾ ಉಸ್ತುವಾರಿಯಿಂದ ಹಿಡಿದು, ಜಿಲ್ಲೆಯ ಶಾಸಕರನ್ನೆಲ್ಲಾ ವಿಶ್ವಾಸಕ್ಕೆ ತೆಗೆದುಕೊಂಡು ಇವರದ್ದು ‘ಏಕ ಪಾತ್ರಾಭಿನಯ’. ಆರಕ್ಷಕರಿಗೂ ಸಹಾ ಇವರದ್ದೇ ಮಾರ್ಗದರ್ಶನ. ಇವರ ಮಾತನ್ನು ಕೇಳದವರಿಗೆ ಕಠಿಣ ಕ್ರಮ ಕೈಗೊಳ್ಳುವ ತಾಕೀತು ಮಾತ್ರವಲ್ಲ, ತಕ್ಷಣ ಕೇಸು ದಾಕಲು. ಲಾಕ್-ಡೌನ್‍ನಿಂದ ಬಳಲಿದವರಿಗೆ ಸಾಂತ್ವನ, ಬಡವರಿಗೆ ಮತ್ತು ಅಶಕ್ತರಿಗೆ ದಾನಿಗಳಿಂದ ಅಗತ್ಯ ವಸ್ತುಗಳ ಪೂರೈಕೆ ಆಗುವವರೆಗೆ ಸೂಕ್ತ ಸ್ಪಂದನ ಮಾತ್ರವಲ್ಲ ನಮ್ಮ ಜಿಲ್ಲೆಯಲ್ಲಿದ್ದ ಮೂವರೂ ಕೊರೊನಾ ಪೀಡಿತರಿಗೆ ಸೂಕ್ತ ಚಿಕಿತ್ಸೆ ದೊರೆಯುವ ಬಗ್ಗೆ ಕಾಳಜಿ.

ಇಷ್ಟು ಮಾತ್ರವಲ್ಲದೇ ಎನಾದರೂ ರೋಗ ಉಲ್ಬಣಗೊಂಡರೇ ಸೂಕ್ತ ಚಿಕಿತ್ಸೆಗೋಸ್ಕರ ಜಿಲ್ಲಾ ಆಸ್ಪತ್ರೆ ಅಲ್ಲದೇ ಖಾಸಗಿ ಅಸ್ಪತ್ರೆಯನ್ನೂ ಸಹಾ ಮೀಸಲಿಡುವಲ್ಲಿ ಪ್ರಮುಖ ಪಾತ್ರ. ರಾತ್ರೆ ಹಗಲ್ಲೆನ್ನದೇ ಜಿಲ್ಲೆಯ ಜನರ ಆರೋಗ್ಯದ ಬಗ್ಗೆ ಸೂಕ್ತ ನಿಗಾವಿಟ್ಟು, ಹೊರದೇಶದಿಂದ ಬಂದವರೆಲ್ಲರಿಗೂ ಸ್ವತಾಃ ತಾವೇ ಕರೆ ಮಾಡಿ ಅವರ ಯೋಗಕ್ಷೇಮ ವಿಚಾರಿಸಿ, ಜಾಗ್ರತೆಯನ್ನೂ ಹೇಳಿದ ಸಜ್ಜನರೂ ಇವರೂ. ಪರದೆಯ ಹಿಂದೆ ಇಷ್ಟೆಲ್ಲಾ ಜವಬ್ದಾರಿಗಳನ್ನೂ ನಿಭಾಯಿಸಲು ಒಂದು ದೊಡ್ಡ ತಂಡವನ್ನೇ ಕಟ್ಟಿ ಯಶಸ್ವಿಯಾಗಿ ನಮ್ಮ ಜಿಲ್ಲೆ ‘ಕೊರೊನಾ’ ಮುಕ್ತಗೊಳ್ಳುವುದರಲ್ಲಿ ಪ್ರಮುಖ ಪಾತ್ರವಹಿಸಿದ ಈ ಸರಕಾರಿ ಅಧಿಕಾರಿ ಬೇರೆ ಯಾರೂ ಅಲ್ಲಾ, ನಮ್ಮ ನೆರೆಯ ಜಿಲ್ಲೆಯಾದ ಶಿವಮೊಗ್ಗದಲ್ಲಿ ಜನಿಸಿ, ಒಬ್ಬ ಉತ್ತಮ ‘ಕೆ.ಎ.ಎಸ್.’ ಅಧಿಕಾರಿ ಎನಿಸಿಕೊಂಡು, ಹಿಂದೊಮ್ಮೆ ಉಡುಪಿ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿ, ಈಗ ‘ಐ.ಎ.ಎಸ್’ ಪದವಿ ಪಡೆದು ಪ್ರಪ್ರಥಮ ಬಾರಿಗೆ ಉಡುಪಿ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡು ನಮ್ಮ ಜಿಲ್ಲೆಯ ಜನರ ಜೀವ ಕಾಪಾಡಿದ ಅಪತ್ಬಾಂಧವ ನಮ್ಮ ಹೆಮ್ಮೆಯ ಡಿ.ಸಿ. “ಜಿ. ಜಗದೀಶ್”. ಇವರನ್ನು ನಮ್ಮ ಪಾಲಿನ ದೇವರೆಂದರೂ ಸಹಾ ತಪ್ಪಾಗಲಿಕ್ಕಿಲ್ಲಾ ಯಾಕೆಂದರೇ ಜೀವ ಕೊಟ್ಟವನೂ ಜೀವ ಕಾಪಾಡುವವನೂ ಆ ಭಗವಂತನೇ. ನಮ್ಮೀ ಜಿಲ್ಲೆಯ ಸಮಸ್ತ ಜನರ ಪರವಾಗಿ ತುಂಬು ಹ್ರದಯದ ಧನ್ಯವಾದಗಳು ಸರ್, ನಿಮ್ಮನ್ನು ಈ ಜನ್ಮದಲ್ಲಿ ಮರೆಯಲಾರೆವು. ಹ್ಯಾಟ್ಸ್ ಓಫ್ ಟು ಯೂ ಸರ್. 

ಮೆಲ್ವಿನ್ ಪೆರ್ನಾಲ್ ಅಸಿಸ್ಟಂಟ್ ಫ್ರೋಫೆಸರ್ ನಿಟ್ಟೆ ಇಂಜಿನಿಯರಿಂಗ್ ಕಾಲೇಜ್ ಮೆಕಾನಿಕಲ್ ವಿಭಾಗ .

Leave a Reply

Your email address will not be published. Required fields are marked *

error: Content is protected !!