ತಾಯಿಯ ಕೂಗು ನನ್ನ ಜೀವನವನ್ನೇ ಬದಲಿಸಿತು… ಸಮಾಜ ಸೇವಕ ವಿಶು ಶೆಟ್ಟಿ
ಉಡುಪಿ – ನಾನು ಚಿಕ್ಕಂದಿನಲ್ಲಿ ತಂದೆಯನ್ನು ಕಳೆದುಕೊಂಡವ, ತಂದೆ ಸತ್ತಾಗ ತಾಯಿ ಬೊಬ್ಬೆ ಹಾಕಿ ಅತ್ತಿದ್ದರು… ಆ ಒಂದು ಕೂಗು ನನ್ನ ಜೀವನ ಪರಿವರ್ತಿಸಿತು… ಈಗ ನೋವಿನ ಕೂಗು, ಕಷ್ಟದಲ್ಲಿದ್ದವರ ಅಳು ಕೇಳಿದಲ್ಲಿ ನಾನು ಓಡಿ ಹೋಗುತ್ತೇನೆ ಎಂದು “ಕೂತು ಮಾತನಾಡುವ “ಎಂಜಿಎಂ ಕಾಲೇಜಿನ ನಡೆದ ಸಮಾರಂಭದಲ್ಲಿ ಸಮಾಜ ಸೇವಕ ವಿಶು ಶೆಟ್ಟಿ ಮನದಾಳದ ಮಾತನ್ನು ಬಿಚ್ಚಿಟ್ಟರು ,. ಬೀಯಿಂಗ್ ಸೋಶಿಯಲ್ ಇವರು ವಿಶು ಶೆಟ್ಟಿ ಕುರಿತ ಸಾಕ್ಷ್ಯ ಚಿತ್ರ” ದೀನ ಬಂಧು” ಬಿಡುಗಡೆಗೊಳಿಸಿ ಮಾತನಾಡಿ
ಕಷ್ಟ ಬಂದಾಗ ಎದುರಿಸುವ ಶಕ್ತಿಯನ್ನು ತಂದೆತಾಯಿ ಕೊಡಬೇಕು. ಶಿಕ್ಷಕರು ಧಾರೆ ಎರೆಯಬೇಕು. ಮನುಷ್ಯ ಒಂದೊಂದು ಸುಖಕ್ಕಾಗಿ ಅಪೇಕ್ಷೆ ಪಡುತ್ತಾನೆ.. ಅದಕ್ಕಾಗಿ ಜೀವನದಲ್ಲಿ ಓಡುತ್ತಾನೆ.. ಹಾತೊರೆಯುತ್ತಾನೆ. ನನಗೆ ಕಷ್ಟದಲ್ಲಿರುವವರ ಮುಖದಲ್ಲಿ ನಗು ನೋಡುವುದು, ನೋವಲ್ಲಿರುವವರ ಕಣ್ಣೀರು ಒರೆಸುವುದೇ ನನ್ನ ಸುಖ ಎಂದರು.
ಜೈ ಶಂಕರ್ ಮಾತನಾಡಿ, ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದ ಸೇವೆ ವಿಶು ಶೆಟ್ಟಿ ಅವರನ್ನು ಈ ಮಟ್ಟದಲ್ಲಿ ಜನರು ಗುರುತಿಸುವಂತಾಗಿದೆ ಎಂದರು .
ಸಾಲಿಗ್ರಾಮ ಡಾ. ಶಿವರಾಮ ಕಾರಂತ ಅಧ್ಯಯನ ಕೇಂದ್ರದ ಸಂಸ್ಥಾಪಕಿ ಬಿ. ಮಾಲಿನಿ ಮಲ್ಯ, ಬೀಡಿನಗುಡ್ಡೆ ರೂದ್ರಭೂಮಿ ನಿರ್ವಾಹಕಿ ವನಜಾ ಪೂಜಾರಿ, ಹ್ಯೂಮ್ಯಾನಿಟಿ ಟ್ರಸ್ಟ್ ನ ಸಂಸ್ಥಾಪಕ ರೋಶನ್ ಬೆಳ್ಮಣ್ . ಶ್ರೀ ತ್ರಿಕಣ್ಣೇಶ್ವರೀವಾಣಿ ಪತ್ರಿಕೆಯ ಸಂಪಾದಕ ತೇಜೇಶ್ವರ ರಾವ್ ಉಪಸ್ಥಿತರಿದ್ದರು. ಬೀಯಿಂಗ್ ಸೋಶಿಯಲ್ ಅವಿನಾಶ್ ಕಾಮತ್ ,ಹರೀಶ್ ಕಿರಣ್ ತುಂಗ ಕಾರ್ಯಕ್ರಮ ಸಂಯೋಜಿಸಿದರು .