ಕಾಪು ಮೆಸ್ಕಾಂ ಸಿಬ್ಬಂದಿಗಳಿಗೆ ವಿವಿಧ ಸಲಕರಣೆ ವಿತರಣೆ 

ಕಾಪು :ಸಮಾಜ ಸೇವಾ ವೇದಿಕೆ ಕಳತ್ತೂರು ಹಾಗೂ ರೋಟರಿ ಕ್ಲಬ್ ಶಿರ್ವ ಇದರ ವತಿಯಿಂದ ಮೆಸ್ಕಾಂ ಸಿಬ್ಬಂದಿಗಳಿಗೆ ಉಚಿತ ಹೆಡ್ ಟಾರ್ಚ್ ಹಾಗೂ ಇತರ ಎಲೆಕ್ಟ್ರಿಕಲ್ ಸಾಮಗ್ರಿಯನ್ನು ಕಾಪು ಮೆಸ್ಕಾಂ  ಕಚೇರಿಯಲ್ಲಿ ಶನಿವಾರ ವಿತರಿಸಲಾಯಿತು. ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಹರೀಶ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಸಮಾಜಸೇವಾ ವೇದಿಕೆ ಕಳತ್ತೂರು ಕಾಪು ಅಧ್ಯಕ್ಷರಾದ ಮಹಮ್ಮದ್ ಫಾರೂಕ್ ಚಂದ್ರನಗರ ಮತ್ತು ರೋಟರಿ ಕ್ಲಬ್ ಶಿರ್ವ ಅಧ್ಯಕ್ಷರಾದ ಸುನೀಲ್ ಕಬ್ರಾಲ್ ಶಿರ್ವ ಮಾರ್ಗದಾಳ ಗಳಿಗೆ  ವಿತರಿಸಲಾಯಿತು.
ವಿವಿಧ ಸಲಕರಣೆ  ವಿತರಿಸಿ ಮಾತನಾಡಿದ ಸಮಾಜ ಸೇವಾ ವೇದಿಕೆ ಅಧ್ಯಕ್ಷ ಮಹಮ್ಮದ್ ಫಾರೂಕ್ ಚಂದ್ರನಗರ ,ಗಾಳಿ ಮಳೆ ಲೆಕ್ಕಿಸದೇ ಸಮಾಜಮುಖಿಯಾಗಿ ತಮ್ಮ ಕೆಲಸ ನಿರ್ವಹಿಸುವುದುಮತ್ತು ಮೆಸ್ಕಾಂ ಅಧಿಕಾರಿಗಳು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದು  ಸ್ಪಂದಿಸುತ್ತಿರುವುದು ನಿಜಕ್ಕೂ ಶಾಘ್ಲನೀಯ ಎಂದರು.
ಶಿರ್ವ ರೋಟರಿ ಕ್ಲಬ್ ಅಧ್ಯಕ್ಷ ಸುನೀಲ್ ಕಬ್ರಾಲ್ ಮಾತನಾಡಿ ಸಮಾಜದಲ್ಲಿ ಕೆಲಸ ಮಾಡುವವರನ್ನು ಗುರುತಿಸುವುದು ನಮ್ಮ ಆದ್ಯತೆ. ಮೆಸ್ಕಾಂ ಸಿಬ್ಬಂದಿಗಳ ಕಾರ್ಯವೈಖರಿಗೆ ಅಭಿನಂದಿಸಿದರು.
ಸಮಾಜಸೇವಾ ವೇದಿಕೆ ಮತ್ತು ರೋಟರಿ ಕ್ಲಬ್ ನ ಈ ರೀತಿಯ ಒಂದು ಕಾರ್ಯಕ್ರಮ ಹೊಸ ರೀತಿಯ ಚಿಂತನೆಯಾಗಿದೆ ಇನ್ನು ಮುಂದೆಯೂ ಉತ್ತಮ ಕೆಲಸ ಈ ವೇದಿಕೆಯಿಂದ ಆಗಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯತ್ ಸದಸ್ಯರಾದ ಮೈಕಲ್ ಡಿಸೋಜಾ, ದಿವಾಕರ ಡಿ ಶೆಟ್ಟಿ, ಕಳತ್ತೂರು ರಾಘವೇಂದ್ರ ಭಟ್ ಕಳತ್ತೂರು, ಸಂಶುದ್ದೀನ್, ದಿವಾಕರ ಬಿ ಶೆಟ್ಟಿ, ರಾಜೇಶ್ ಕುಲಾಲ್, ಮೆಲ್ವಿನ್ ಡಿಸೋಜಾ ಶಿರ್ವ, ಸ್ಟಾನ್ಲಿಸಾಸ್ ಕೊಡ್ದ, ಎಂಎಚ್ ಅಬ್ದುಲ್ ಹಮೀದ್ ಸಾದಿಕ್ ಶಾಹಿಲ್ ವಿಷ್ಣುಮೂರ್ತಿ ಸರಳಾಯ ಇಕ್ಬಾಲ್ ಪಕೀರಣಕಟ್ಟೆ ರೋಟರಿ ಕ್ಲಬ್ ಸದಸ್ಯರು ಸಮಾಜ ಸೇವಾ ಸದಸ್ಯರು ಕಾಪು ಸಿಬ್ಬಂದಿ ವರ್ಗ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು
ಕಾಪು ಶಾಖೆ ಸಹಾಯಕ ಎಂಜಿನಿಯರ್ ಅವಿನಾಶ್ ಸ್ವಾಗತಿಸಿದರೆ ದಿವಾಕರ ಬಿ ಶೆಟ್ಟಿ ಕಳತ್ತೂರು ಕಾರ್ಯಕ್ರಮ ನಿರ್ವಹಿಸಿದರು. ತಾಂತ್ರಿಕ ಸಹಾಯಕ ಎಂಜಿನಿಯರ್ ಜಯಾಸ್ಮಿತಾ ಧನ್ಯವಾದ ಸಮರ್ಪಿಸಿದರು.

Leave a Reply

Your email address will not be published. Required fields are marked *

error: Content is protected !!