ಶ್ರೀ ವ್ಯಾಸರಾಜತೀರ್ಥರ ವೃಂದಾವನ ಧ್ವಂಸ – ಮಠಾಧೀಶರಿಂದ ಖಂಡನೆ

ಕೊಪ್ಪಳ –  ಕೊಪ್ಪಳ ಜಿಲ್ಲೆಯ ಆನೆಗೊಂದಿಯಲ್ಲಿರುವ ನವ ವೃಂದಾವನದಲ್ಲಿ ವ್ಯಾಸರಾಜರ ಬೃಂದಾವನವು ದುಷ್ಕರ್ಮಿಗಳು ಧ್ವಂಸಗೊಳಿಸಿರುವುದನ್ನು ಉಡುಪಿ ಮಠಾಧೀಶರು ಖಂಡಿಸಿದ್ದಾರೆ.
ಘಟನೆಯ ಕುರಿತು ಖಂಡನೆ ವ್ಯಕ್ತಪಡಿಸಿದ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಬೇಸರ  ವ್ಯಕ್ತಪಡಿಸಿದ್ದಾರೆ , ಈ ಘಟನೆಯಿಂದ ಅಘಾತವಾಗಿದ್ದು, ರಾಜ್ಯದ ಹೆಮ್ಮೆಯ ಸಂಕೇತವಾದ ವಿಜಯನಗರ ಸಾಮ್ರಾಜ್ಯದ ಅರಸ ಶ್ರೀಕೃಷ್ಣ ದೇವರಾಯನ ರಾಜಗುರುಗಳಾಗಿದ್ದ ವ್ಯಾಸರಾಜರ ವೃಂದವನ ರಕ್ಷಣೆ ಸರ್ಕಾರದ ಹೊಣೆ.

ರಾಘವೇಂದ್ರ ಸ್ವಾಮೀಜಿಗಳ ಪೂರ್ವ ಅವತಾರವಾದ ವ್ಯಾಸರಾಜರು ದಾಸ ಸಾಹಿತ್ಯಕ್ಕೆ ಅಪೂರ್ವ ಕೊಡುಗೆ ಸಲ್ಲಿಸಿದ್ದಾರೆ. ಸರ್ಕಾರವು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಸದ್ಯ ಮುಂಬೈ ಭೇಟಿಯಲ್ಲಿರುವ ಪೇಜಾವರ ಶ್ರೀಗಳು ಬೃಂದಾವನ ಧ್ವಂಸಕ್ಕೆ ಖಂಡನೆ ವ್ಯಕ್ತಪಡಿಸಿ, ತಮ್ಮ ಕಾರ್ಯಕ್ರಮ ರದ್ದುಗೊಳಿಸಿ ಹೊಸಪೇಟೆಗೆ ಭೇಟಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿದೆ.


ವ್ಯಾಸರಾಜರ ಬೃಂದಾವನ ಧ್ವಂಸಕ್ಕೆ ವ್ಯಾಪಕ ಖಂಡನೆ 
– ಘೋರ ಹಾಗು  ಅಕ್ಷಮ್ಯ   ವಾಸುದೇವ ಭಟ್ ಖಂಡನೆ

ಹಂಪೆಯ ಚಕ್ರತೀರ್ಥದಲ್ಲಿರುವ ,   ಸಮಸ್ತ ಮಾಧ್ವ ಸಮಾಜದ ಮಹಾಪುರುಷರಲ್ಲಿ ಒಬ್ಬರೆಂದೇ ಪರಿಗಣಿಸಲ್ಲಡುವ ,ಪ್ರಾತಃಸ್ಮರಣೀಯರೂ ಮಹಾನ್ ತಪೋ ನಿಧಿಗಳೂ , ಕನಕದಾಸರು -ಪುರಂದರ ದಾಸರೇ ಮೊದಲಾದ ದಾಸ ಶ್ರೇಷ್ಠರಿಗೆ ಮಾರ್ಗದರ್ಶಕರಾಗಿ ನಾಡಿನಲ್ಲಿ ಭಕ್ತಿ ಸಾಹಿತ್ಯದ ಉಗಮ ಮತ್ತು ಪ್ರವರ್ಧನೆಗೆ ಕಾರಣೀಭೂತರೂ ,ಕ್ರಾಂತಿಕಾರಿ ಸಂತೆರೆನಿಸಿದ ಶ್ರೀ ವ್ಯಾಸರಾಜತೀರ್ಥರ ಮೂಲ ವೃಂದಾವನವನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿರುವುದನ್ನು ಬ್ರಾಹ್ಮಣ ಸಮಾಜದ ಸಂಘಟಕರೂ ಹಿಂದೂ ಯುವ ಮುಖಂಡರೂ ಆಗಿರುವ ವಾಸುದೇವ ಭಟ್ ಪೆರಂಪಳ್ಳಿ ಉಗ್ರವಾಗಿ ಖಂಡಿಸಿದ್ದಾರೆ.

ಈ ಘಟನೆಯ ಕುರಿತು ಕೇಳಿದಾಗಲೇ ಬರಸಿಡಿಲು ಬಡಿದಂತಾಗಿದೆ .ಸಮಸ್ತ ಮಾಧ್ವ ಸಮಾಜಕ್ಕೆ ಮಾತ್ರವಲ್ಲದೇ ನಾಡಿನ‌ ಆಸ್ತಿಕ ವೃಂದಕ್ಕೇ ಈ ದಿನ ಕರಾಳದಿನವಾಗಿದೆ.ಇದು ಘೋರಕೃತ್ಯವಾಗಿದ್ದು ತೀರಾ ದುಃಖ ಮತ್ತು ಆಕ್ರೋಶ ಜನಕವೂ ಹೌದು.ಇಂಥಹ ಅಕ್ಷಮ್ಯ ಅಪರಾಧ ಎಸಗಿದವರನ್ನು ಕೂಡಲೇ ಸರಕಾರ ಬಂಧಿಸಿ ಉಗ್ರ ಶಿಕ್ಷೆ ವಿಧಿಸಬೇಕು. ಎಂದು ವಾಸುದೇವ ಭಟ್ ಒತ್ತಾಯಿಸಿದ್ದಾರೆ.

1 thought on “ಶ್ರೀ ವ್ಯಾಸರಾಜತೀರ್ಥರ ವೃಂದಾವನ ಧ್ವಂಸ – ಮಠಾಧೀಶರಿಂದ ಖಂಡನೆ

Leave a Reply

Your email address will not be published. Required fields are marked *

error: Content is protected !!