ಶಾಸಕರು ಸಾಮೂಹಿಕವಾಗಿ ರಾಜೀನಾಮೆ ನೀಡಿತ್ತಿರುವುದು ಒಂದು ಕುಟಿಲ ತಂತ್ರ : ಸಿದ್ದರಾಮಯ್ಯ

ಬೆಂಗಳೂರು: ಮುಖ್ಯಮಂತ್ರಿ ಭಾಷಣದ ಮೇಲೆ ಮಧ್ಯಪ್ರವೇಶಿಸಿ ಮಾತನಾಡಿದ ಸಿದ್ದರಾಮಯ್ಯ ಅವರು ಪಕ್ಷಾಂತರದ ಬಗ್ಗೆ ಮಾತನಾಡಿ ಸದನದ ಗಮನ ಸೆಳೆದರು.
1963ರಲ್ಲಿ ಗಯಾಲಾಲ್‌ ಎಂಬುವವರು ಒಂದೇ ದಿನದಲ್ಲಿ ಮೂರು ಬಾರಿ ಪಕ್ಷಾಂತರ ಮಾಡಿದ್ದರು, ಕಾಂಗ್ರೆಸ್‌ನಿಂದ, ಸಂಯುಕ್ತ ರಂಗ, ಅಲ್ಲಿಂದ ಕಾಂಗ್ರೆಸ್‌ಗೆ ಪಕ್ಷಾಂತರ ಮಾಡುತ್ತಾರೆ. ಆಗ ಪಕ್ಷಾಂತರ ಬಗ್ಗೆ ದೇಶ ಗಂಭೀರವಾಗಿ ಚರ್ಚೆ ನಡೆಸಿತು. ಪಕ್ಷಾಂತರ ಎಂಬುದು ಭಾರತದ ಪ್ರಜಾಪ್ರಭುತ್ವವನ್ನೇ ಅಲುಗಾಡಿಸುತ್ತದೆ. ಈ ಪಕ್ಷಾಂತರ ಎಂಬ ರೋಗ ನಿವಾರಿಸಿದಾಗಲೇ ಮಹಾತ್ಮಾ ಗಾಂಧಿ ಅವರಿಗೆ ಗೌರವ ಸೂಚಿಸಿದಂತೆ ಎಂದು ಸಿದ್ದರಾಮಯ್ಯ ಹೇಳಿದರು.
ಶಾಸಕಾಂಗ ಪಕ್ಷದ ನಾಯಕನಿಗೆ ವಿಪ್‌ ನೀಡಲು ಅವಕಾಶವಿಲ್ಲ ಎಂದು ನ್ಯಾಯಾಲಯದ ತೀರ್ಪಿನಲ್ಲಿ ಉಲ್ಲೇಖವಾಗಿದೆ. ಆದರೆ, ಪಕ್ಷಾಂತರ ನಿಷೇಧಿಸುವ 10ನೇ ಶೆಡ್ಯೂಲ್‌ ಸಂವಿಧಾನದಲ್ಲಿ ಇನ್ನೂ ಅಸ್ತಿತ್ವದಲ್ಲಿದೆ. ಇದಿದ್ದಾಗಲೂ ಸುಪ್ರೀಂ ಕೋರ್ಟ್‌ನಿಂದ ಬಂದಿರುವ ಆದೇಶ ನನ್ನ ಹಕ್ಕಿನ ಚ್ಯುತಿ ಮಾಡಿದೆ ಎಂದರು.
ಶಾಸಕರು ಸಾಮೂಹಿಕವಾಗಿ ರಾಜೀನಾಮೆ ನೀಡಿತ್ತಿರುವುದು ಒಂದು ಕುಟಿಲ ತಂತ್ರ ಎಂದರು.
ಸಂವಿಧಾನಕ್ಕೆ ತಿದ್ದುಪಡಿ ತಂದು ಪಕ್ಷಾಂತರ ನಿಷೇಧ ಕಾಯಿದೆ ತಂದ ಕೀರ್ತಿ ರಾಜೀವ್‌ ಗಾಂಧಿ ಅವರಿಗೆ ಸಲ್ಲಬೇಕು. ಪಕ್ಷಾಂತರ ನಿಷೇಧ ಕಾಯಿದೆ ಜಾರಿಯಾದಾಗ ಅಂದು ಎಲ್ಲ ಪಕ್ಷಗಳೂ ಸ್ವಾಗತ ಮಾಡಿದ್ದವು.

Leave a Reply

Your email address will not be published. Required fields are marked *

error: Content is protected !!