ಸೀತಾ ನದಿ ಉಳಿಸಿ ಅಭಿಯಾನದಡಿ ಸ್ವಚ್ಛತಾ ಕಾರ್ಯ
ಬುದ್ದಿವಂತ ಜಿಲ್ಲೆಯಲ್ಲಿ ಅತೀ ಬುದ್ದಿವಂತರು..!!
ಪರಶುರಾಮನ ಸೃಷ್ಟಿಯ ನಾಡಿನಲ್ಲಿ ಬರಗಾಲದ ಛಾಯೆ ಆವರಿಸಿದೆ, ಕುಡಿಯಲು ಶುದ್ಧ ನೀರಿನ ಅಭಾವ ಬಂದಿದೆ..ಹೌದು ಇದಕ್ಕೆಲ್ಲ ಕಾರಣ ಯಾರು ಅಂತ ಹುಡುಕಿದರೆ ಮೂಲ ಕೆಣಕಿದರೆ ಕಾಣ ಸಿಗುವುದು ಇಂತಹ ಬೇಜವಾಬ್ದರಿತನ…
ಮಂಗಳೂರಿನಲ್ಲಿ ನೇತ್ರಾವತಿ ಬತ್ತಿದ್ದಾಳೆ.ಉಡುಪಿಯ ಸ್ವರ್ಣೆಯ ಬಜೆ ಅಣೆಕಟ್ಟಿನಲ್ಲಿ ನೀರಿಗೆ ಕೊರತೆ ಬಂದಿದ್ದು ನಮಗೆಲ್ಲ ತಿಳಿದಿರುವ ವಿಷಯ,ಗಂಗೆ ಯನ್ನು ಶುದ್ದಿಗೊಳಿಸಲು ಸಾವಿರಾರು ಕೋಟಿ ವಹಿಸುತ್ತಿದ್ದೇವೆ.ಹೀಗೆ ಮುಂದೆ ನಮ್ಮ ಸ್ಥಳೀಯ ಜೀವ ಜಲ ಹೀಗಾಗುವುದು ಬೇಡ ಇದೆಲ್ಲ ನಮಗೆ ಪಾಠ ಆಗಲಿ…
ರಾಶಿ ರಾಶಿ ಮದ್ಯದ ಬಾಟಲಿಗಳು, ಸಿರಿಂಜುಗಳು ,ಗಾಜಿನ ಚೂರು,ಪ್ಲಾಸ್ಟಿಕ್ ಚೀಲದ ರಾಶಿ, ಚಿಕನ್ ಸ್ಟಾಲ್ ನ ವೆಸ್ಟ್, ಕೇಶದ ರಾಶಿ ರಾಶಿ….ಏನಿದೆ ಎಂಬುದು ಗುರುತಿಸುವುದಕ್ಕಿಂತ ಏನಿಲ್ಲ ಎಂದು ಹೇಳುವುದು ಸುಲಭ…(ನೀವೇ ಚಿತ್ರದಲ್ಲಿ ನೋಡಿ)
ಬುದ್ದಿವಂತ ಜಿಲ್ಲೆಯಲ್ಲಿ ಅತೀ ಬುದ್ದಿವಂತರು…
ಹೌದು ಇದು ನಮ್ಮ ಉಡುಪಿ ಜಿಲ್ಲೆಯಲ್ಲೇ ಎಂದು ಹೇಳುವುದಕ್ಕೆ ನಮಗೂ ನಾಚಿಕೆ ಆಗುತ್ತದೆ. ಬುದ್ದಿವಂತ ಜಿಲ್ಲೆಯ ಜನತೆ ಎಂದು ಕರೆಸಿಕೊಳ್ಳುವ ನಾವು ಮಾಡುತ್ತಿರುವುದು ಎಷ್ಟು ಸರಿ..??
ಪಶ್ಚಿಮ ಘಟ್ಟದಲ್ಲಿ ಹುಟ್ಟಿ ತುಳುನಾಡ ರಾಜದಾನಿ ಬಾರಕೂರಿನ ಮೂಲಕ ಸ್ವರ್ಣೆಯೊಂದಿಗೆ ಸಂಗಮ ಹೊಂದಿ ಮುಂದೆ ಸಮುದ್ರಕ್ಕೆ ಸೇರುವ ಸೀತಾ ನದಿಯನ್ನು ಈ ರೀತಿ ಮಲಿನ ಮಾಡುವ ನಮ್ಮ ಬುದ್ದಿವಂತ ಜಿಲ್ಲೆಯ ಜನತೆಗೆ ಏನೆಳಬೇಕು..
ಇಲ್ಲಿ ತಪ್ಪು ಯಾರದ್ದು..??
ಸ್ಥಳೀಯ ಗ್ರಾಮ ಪಂಚಾಯತಿ ಆಡಳಿತದ ನಿರ್ಲಕ್ಷವೇ ಅಥವ ರಾಷ್ಟ್ರೀಯ ಹೆದ್ದಾರಿಯ ಉಸ್ತುವಾರಿ ಹೊಂದಿರುವ ಟೋಲ್ ಸಂಗ್ರಹ ಮಾಡುವ ಸಂಸ್ಥೆಯದ್ದೆ ಅಥವ ನಮ್ಮಂತ ನಾಗರಿಕರ ನಿರ್ಲಕ್ಷ್ಯವೇ..?? ಮೊದಲಾಗಿ ಹೇಳಬೇಕಾದರೆ ಇಲ್ಲಿ ತಪ್ಪು ಕಸವನ್ನು ಬಿಸಾಡು ಅವನದ್ದು ಅಲ್ಲ.. ಆ ರೀತಿ ಕಸ ಬಿಸಾಡಿದವನಿಗೆ ಎರಡು ಬಿಟ್ಟಿದ್ದಾರೆ ಇಂತಹ ಸ್ಥಿತಿ ಇಲ್ಲಿ ಇವತ್ತು ಬರುತ್ತಿರಲಿಲ್ಲ…!!
ನಮಗಿರುವ ಈ ಶುದ್ಧ ನೀರು ಮುಂದಿನ ನಮ್ಮ ತಲೆಮಾರಿಗೆ ಒಯ್ಯುವ ಜವಾಬ್ಧಾರಿ ನಮ್ಮದು ಇದು ಜವಾಬ್ದಾರಿ ಅನ್ನುವುದಕ್ಕಿಂತ ಕರ್ತವ್ಯ…
ಹೌದು ಇನ್ನಾದರೂ ಈ ರೀತಿ ಕಸವನ್ನು ನೀರಿಗೆ ಎಸೆಯುವ ದನ್ನು ನಿಲ್ಲಿಸೋಣ…
ನಮ್ಮ ಮನೆ ಸ್ವಚ್ಛತೆ ಮಾಡುವುದು ಸರಿ ಹಾಗಂತ ಮನೆಯ ಕಸವನ್ನು ಊರಿನ ಬದಿ ಅಥವ ನದಿ ಬದಿ ಹಾಕಿ ಅದನ್ನು ಈ ರೀತಿ ವಿಕೃತಿ ಗೊಳಿಸುವುದಕ್ಕೆ ಅಥವ ಅಶುದ್ಧ ವನ್ನಾಗಿ ಮಾಡಲು ಅವಕಾಶ ಮಾಡಿ ಕೊಟ್ಟವರು ಯಾರು..??
ಬನ್ನಿ ಇನ್ನಾದರೂ ಎಚ್ಚೆತ್ತು ಕೊಂಡು ಸ್ವಚ್ಛತೆ ಕಾಪಾಡಿಕೊಳ್ಳೋಣ.ನದಿಯ ಸ್ವಚ್ಛತೆ ಉಳಿಸೋಣ.ಉಡುಪಿಯ ಸೌಂದರ್ಯವನ್ನು ಕಾಪಡೋಣ.ಬುದ್ದಿವಂತರ ಹಣೆಪಟ್ಟಿ ಹೊತ್ತ ನಾವು ಅದನ್ನು ಉಳಿಸೋಣ.ಬನ್ನಿ ಮುಂದಿನವಾರ ಇನ್ನೂ ಸ್ವಚ್ಛತೆ ಬಾಕಿ ಇದೆ..ಇಂದು ಕೇವಲ ಅರ್ಧ ಮಾತ್ರ ಕೆಲಸ ಆಗಿದೆ..(2,3 ಘಂಟೆಯಲ್ಲಿ ಮುಗಿಯುವ ಕೆಲಸ ಎಂದು ನಾವು ಅಂದು ಕೊಂಡಿದ್ದೇವು ಆದರೆ ಇಲ್ಲಿ 4,5 ದಿನದ ಕೆಲಸ ಇದೆ)
ಇಂದು 7ಯಿಂದ 12ಯವರೆಗೆ ಶ್ರಮದಾನವಾಗಿದೆ.
ಬನ್ನಿ ಮುಂದಿನ ವಾರ ನೀವು ಬನ್ನಿ ನಿಮ್ಮವರನ್ನೂ ಕರೆತನ್ನಿ….
ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಶ್ರಮದಾನ ದಲ್ಲಿ ಭಾಗವಹಿಸಿ.ಉಡುಪಿ ಯನ್ನೂ ಸ್ವಚ್ಛತೆ ಉಳಿಸೋಣ.ಸ್ವರ್ಣ ನದಿಯನ್ನು ಉಳಿಸೋಣ -2 ಭಾಗವಹಿಸಿ…
#ಸೀತಾ_ನದಿ_ಉಳಿಸಿ_೨
ಇನ್ನಾದರೂ ಎಚ್ಚೆತ್ತುಕೊಂಡು ಜವಾಬ್ದಾರಿ ಮೆರೆಯೋಣ..!!