ಸಂಜೀವಿನಿ ಫಾರ್ಮು ಮತ್ತು ಡೇರಿಗೆ ಶಿವಸುಜ್ಞಾನ ತೀರ್ಥ ಭೇಟಿ

ಮುನಿಯಾಲು : ನಿಜವಾದ ಗೋಸೇವೆಯನ್ನು ವಿನೂತನ ಪರಿಕಲ್ಪನೆಯ ಮೂಡಬಿದಿರೆ ರಾಮಕೃಷ್ಣ ಆಚಾರ್ ಅವರ ಎಸ್‌ಕೆಎಫ್ ಸಮೂಹ ಸಂಸ್ಥೆಯ ಸಂಜೀವಿನಿ ಫಾರ್ಮು ಮತ್ತು ಡೇರಿಯಲ್ಲಿದೆ , ಗ್ರಾಮೀಣ ಪ್ರದೇಶದ ಮುನಿಯಾಲಿನಲ್ಲಿ ಗೋಸಂಸ್ಕ್ರತಿಯನ್ನು ನಾವೆಲ್ಲ ಕಾಣಬಹುದು, ದೇಶದ ಜೊತೆಗೆ ಸಮಾಜಕ್ಕೆ ರಾಮಕೃಷ್ಣ ಆಚಾರ್ ದೊಡ್ಡ ಕೊಡುಗೆ ನೀಡಿದ್ದಾರೆ, ಹೊಸತನ ಏನು ಎಂದು ನಾವು ಅವರಲ್ಲಿ ಕಲಿಯಬೇಕು ಎಂದು ಹಾಸನ ಅರೆಮಾದನಹಳ್ಳಿ ಶ್ರೀ ವಿಶ್ವಕರ್ಮ ಜಗದ್ಗುರು ಪೀಠದ ಶಿವಸುಜ್ಞಾನ ತೀರ್ಥ ಮಹಾಸ್ವಾಮೀಜಿ ಮೆಚ್ಚುಗೆ ವ್ಯಕ್ತ ಪಡಿಸಿದರು.
ಅವರು ಶನಿವಾರ ಮುನಿಯಾಲಿನಲ್ಲಿರುವ ಮೂಡಬಿದಿರೆ ರಾಮಕೃಷ್ಣ ಆಚಾರ್ ಅವರ ಎಸ್‌ಕೆಎಫ್ ಸಮೂಹ ಸಂಸ್ಥೆಯ ಸಂಜೀವಿನಿ ಫಾರ್ಮು ಮತ್ತು ಡೇರಿಗೆ ಆಗಮಿಸಿ ಸಂಸ್ಥೆಯ ಸಂಸ್ಥಾಪಕ ಜಿ.ರಾಮಕೃಷ್ಣ ಆಚಾರ್ ದಂಪತಿಯವರನ್ನು ಗೌರವಿಸಿ ಆಶೀರ್ವಚನ ನೀಡಿದರು.
ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದ ರಾಮಕೃಷ್ಣ ಆಚಾರ್ ವಿಶ್ವದ ಪ್ರತಿಷ್ಠಿತ ಕೈಗಾರಿಕೊಧ್ಯಮಿಯಾಗಿ ಬೆಳೆದರೂ ಕೃಷಿ ಮತ್ತು ಹೈನುಗಾರಿಕೆಯ ಮೂಲಕ ಗೋಸೇವೆ ವಿಶೇಷ ಆದ್ಯತೆ ನೀಡುತ್ತಿರುವುದು ಸಮಾಜಕ್ಕೆ ಹೆಮ್ಮೆ. ಸಮಾಜದ ಸೇವೆಯಲ್ಲೂ ಸಕ್ರೀಯರಾಗಿರುವುದು ನಮಗೆಲ್ಲ ಆದರ್ಶ ಎಂದ ಸ್ವಾಮೀಜಿ ಅವರು ರಾಮಕೃಷ್ಣ ಅಲ್ಲ, ಅವರೊಬ್ಬ “ಅಭಿನವ ಗೋಪಾಲಕೃಷ್ಣ” ಎಂದು ಅಭಿನಂದಿಸಿದರು.
ಗೋಸೇವೆಗೆ ಒತ್ತು ನೀಡಿ : ರಾಮಕೃಷ್ಣ ಆಚಾರ್.
ವಿಶ್ವಕರ್ಮ ಜಗದ್ಗುರು ಪೀಠದ ಮೂಲಕ ಗೋಸೇವೆ, ವಿಶ್ವಕರ್ಮ ಸಂಸ್ಕೃತಿ ಮತ್ತು ವೈಧಿಕತ್ವಕ್ಕೆ ವಿಶೇಷ ಒತ್ತು ನೀಡುವ ಯೋಜನೆ ರೂಪಿಸಿ ಕಾರ್ಯಗತ ಮಾಡಿ, ಅದಕ್ಕಾಗಿ ದೊಡ್ಡ ಮೊತ್ತದ ಸಹಾಯವನ್ನು ಶ್ರೀಮಠಕ್ಕೆ ನೀಡುವುದಾಗಿ ಮೂಡಬಿದಿರೆ ಎಸ್‌ಕೆಎಫ್ ಸಮೂಹ ಸಂಸ್ಥೆಯ ಸಂಸ್ಥಾಪಕರಾದ ಜಿ.ರಾಮಕೃಷ್ಣ ಆಚಾರ್ ಶಿವಸುಜ್ಞಾನ ತೀರ್ಥ ಮಹಾಸ್ವಾಮೀಜಿಯವರಿಗೆ ಮನವಿ ಮಾಡಿದರು. ಕಜ್ಕೆ ಶಾಖಾ ಮಠಕ್ಕೆ ಮತ್ತು ಅನ್ನಪೂರ್ಣೇಶ್ವರಿ ಕ್ಷೇತ್ರದ ನಿರ್ಮಾಣಕ್ಕೆ ಕೊಡುಗೆ ನೀಡುವುದಾಗಿ ಪ್ರಕಟಿಸಿ ಎಸ್‌ಕೆಎಫ್ ಎಲಿಕ್ಸರ್ ಶುದ್ಧ ಕುಡಿಯುವ ನೀರಿನ ಘಟಕವನ್ನು ಮಠಕ್ಕೆ ಹಸ್ತಾಂತರಿಸಿದರು. ಸ್ವಾಮೀಜಿ ಗೋವುಗಳನ್ನು ಕಂಡು ಖುಷಿಪಟ್ಟರು.
ಕಜ್ಕೆ ಶಾಖಾ ಮಠ ನಿರ್ಮಾಣ ಸಮಿತಿಯ ಅಧ್ಯಕ್ಷ ಅಲೆವೂರು ಯೋಗೀಶ ಆಚಾರ್, ಚಾತುರ್ಮಾಸ್ಯ ವೃತಾಚರಣಾ ಸಮಿತಿಯ ಅಧ್ಯಕ್ಷ ರಾಘವೇಂದ್ರ ಆಚಾರ್, ಚಿತ್ತೂರು ಪ್ರಭಾಕರ ಆಚಾರ್, ಸವಿತಾ ರಾಮಕೃಷ್ಣ ಆಚಾರ್, ಬೆಂಗಳೂರಿನ ಚಿನ್ಮಯ್ ವಿಶ್ವಕರ್ಮ, ವಿಶ್ವಕರ್ಮ ಸಮಾಜದ ಗಣ್ಯರು, ಮುಖಂಡರು, ಸ್ಥಳೀಯ ಪ್ರಮುಖರು ಇದ್ದರು.
ಹರಿದಾಸ ಟಿ.ಜಿ.ಆಚಾರ್ ಹೆಬ್ರಿ ನಿರೂಪಿಸಿ ಸ್ವಾಗತಿಸಿದರು. ಮುನಿಯಾಲು ಪುರಂದರ ಪುರೋಹಿತ್ ಮೂಡಬಿದಿರೆ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!