ವಗ್ಗ ಹಾ.ಉ. ಸಹಕಾರ ಸಂಘ: ವಾರ್ಷಿಕ ಮಹಾಸಭೆ ನಿವೃತ್ತರಿಗೆ ಬೀಳ್ಕೊಡಗೆ, ಸಮ್ಮಾನ
ಬಂಟ್ವಾಳ: ಬಂಟ್ವಾಳ ತಾ| ವಗ್ಗ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ವಗ್ಗ ಪಚ್ಚಾಜೆ ಸಭಾಭವನದಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ಶಿವಪ್ಪ ಗೌಡ ನಿನ್ನಿಕಲ್ಲು ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘದ ಅಭಿವೃದ್ಧಿಗೆ ಸಹಕರಿಸಿದ ಎಲ್ಲ ಹಾಲು ಉತ್ಪಾದಕರಿಗೆ ಅಭಿನಂದನೆಗಳು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಘದಲ್ಲಿ ೩೫ ವರ್ಷಗಳಿಂದ ಕಾರ್ಯಕರ್ತರಾಗಿ ಮತ್ತು ೧೯ ವರ್ಷಗಳಿಂದ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ ಇಸಾಕ್ ಡಿಸೋಜಾ ಅವರಿಗೆ ಸಂಘದ ವತಿಯಿಂದ ಬೀಳ್ಕೊಡುಗೆ ಹಾಗೂ ಸಮ್ಮಾನ ಕಾರ್ಯಕ್ರಮ ನಡೆಯಿತು.
ಕಾರ್ಯದರ್ಶಿ ಆಡಳಿತದ ವರದಿಯನ್ನು ಮಂಡಿಸಿದರು. ವಿಸ್ತರಣಾಽಕಾರಿ ಜಗದೀಶ್ ಲೆಕ್ಕಪರಿಶೋಧನಾ ವರದಿ ಮಂಡಿಸಿದರು. ಶೇ. ೨೫ಡಿವಿಡೆಂಡ್ ನೀಡಲು ತೀರ್ಮಾನಿಸಲಾಯಿತು.
ಶ್ರೀ ಕ್ಷೇತ್ರ ಕಾರಿಂಜದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪಿ.ಜಿನರಾಜ ಆರಿಗ, ಕಾವಳಪಡೂರು ಗ್ರಾ.ಪಂ. ಅಧ್ಯಕ್ಷ ಪ್ರಮೋದ್ ಕುಮಾರ್ ರೈ, ಸಂಘದ ಉಪಾಧ್ಯಕ್ಷ ನಾರಾಯಣ ಮೂಲ್ಯ, ದ.ಕ. ಹಾಲು ಒಕ್ಕೂಟದ ನಿರ್ದೇಶಕ ಕೆ.ಪಿ. ಸುಚರಿತ ಶೆಟ್ಟಿ, ಸುಧಾಕರ ರೈ, ಸವಿತಾ ಎನ್.ಶೆಟ್ಟಿ, ಸುಭದ್ರಾ ರಾವ್, ದ.ಕ. ಹಾಲು ಒಕ್ಕೂಟದ ಉಪ ವ್ಯವಸ್ಥಾಪಕರಾದ ಎನ್. ಪ್ರಭಾಕರ್, ಡಾ. ಟಿ.ವಿ.ಶ್ರೀನಿವಾಸ್, ಸಂಘದ ನಿರ್ದೇಶಕರಾದ ಚಂದ್ರಶೇಖರ ಶೆಟ್ಟಿ, ಟಿ.ವಾಸುದೇವ ಗೌಡ, ಜೆಫ್ರಿ ರೋಡ್ರಿಗಸ್, ಲತಾ ಆರ್., ಶೋಭಲತಾ, ಆನಂದ ನಾಯ್ಕ, ಶುಭಲಕ್ಷ್ಮಿ, ಪ್ರಕಾಶ್, ವಿಜಯಾ ಎಂ. ಹಾಗೂ ಸದಸ್ಯರು ಮತ್ತು ಸಿಬಂದಿ ವರ್ಗ ಉಪಸ್ಥಿತರಿದ್ದರು.