ದಕ್ಷಿ ಕನ್ನಡದಲ್ಲಿ ಡೆಂಗ್ಯೂ ಅಟ್ಟಹಾಸ..! 400 ರ ಗಡಿ ದಾಟಿದ ಸೋಂಕಿತರು .

ಮಂಗಳೂರು_ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾರಕ ಡೆಂಗ್ಯೂ ಜ್ವರ ಲಗ್ಗೆ ಇಟ್ಟು ಅಟ್ಟಹಾಸ ಮೆರೆಯುತ್ತಿದೆ. ದಿನದಿಂದ ದಿನಕ್ಕೆ ಡೆಂಗ್ಯೂ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಸದ್ಯ ಮೂರು ಜನರು ಡೆಂಘಿಗೆ ಬಲಿ ಸೋಂಕಿತೆ ಸಂಖ್ಯೆ 400ರ ಗಡಿ ದಾಟಿದೆ. ಜಿಲ್ಲೆಯ ಎಲ್ಲಾ ಆಸ್ಪತ್ರೆಗಳು ರೋಗಿಗಳಿಂದ ತುಂಬಿದ್ದು, ಮಾರಕ ಡೆಂಗ್ಯೂಗೆ ಜನ ಹೈರಾಣಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾರಕ ಡೆಂಗ್ಯೂ ಜ್ವರ ಲಗ್ಗೆ ಇಟ್ಟಿದೆ. ದಿನದಿಂದ ದಿನಕ್ಕೆ ಡೆಂಗ್ಯೂ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, 400ರ ಗಡಿ ದಾಟಿದೆ. ಜಿಲ್ಲೆಯ ಎಲ್ಲಾ ಆಸ್ಪತ್ರೆಗಳು ರೋಗಿಗಳಿಂದ ತುಂಬಿದ್ದು, ಮಾರಕ ಡೆಂಗ್ಯೂಗೆ ಜನ ಹೈರಾಣಾಗಿದ್ದಾರೆ. ಕಡಬ ಮತ್ತು ಸುಳ್ಯ ತಾಲೂಕಿನಲ್ಲಿ ಡೆಂಗ್ಯೂನಲ್ಲಿ ಇನ್ನು ಮಾರಕ ಅಂಶವಿದೆ ಅನ್ನೊದು ಪತ್ತೆಯಾಗಿದೆ. ಅಲ್ಲದೆ ಒಂದು ವಾರದ ಹಿಂದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಬ್ಬರು ಡೆಂಘಿಗೆ ಬಲಿಯಾಗಿದ್ದಾರೆ. ಸದ್ಯ ಅದು ಡೆಂಘಿಗೆ ಮೃತಪಟ್ಟಿದ್ದು ಅನ್ನೊದು ಗೊತ್ತಾಗುತ್ತಿದ್ದಂತೆ ಸದ್ಯ ಜಿಲ್ಲಾಢಳಿತ ಈಗ ಎಚ್ಚೆತ್ತುಕೊಂಡಿದೆ. ಡೆಂಘಿ ಹರಡುವ ಮುನ್ನ ಕ್ರಮವನ್ನು ವಹಿಸದ ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂಧಿಗಳನ್ನು ಅಮಾನತ್ತು ಮಾಡುವ ಆಲೋಚನೆಯಲ್ಲಿದ್ದಾರೆ.
ಮಳೆಗಾಲ ಆರಂಭವಾದ್ರು ಮಳೆ ಬಿಟ್ಟು ಬಿಟ್ಟು ಬರುತ್ತಿದೆ. ಮಳೆ ಕಡಿಮೆಯಾಗಿ ಆಗಾಗ ಬಿಸಿಲಿನ ವಾತವರಣ ಇರೋದ್ರಿಂದ ನಿಂತ ನೀರಿನಲ್ಲಿ ಸೊಳ್ಳೆಗಳು ಬೆಳೆಯುತ್ತಿದೆ. ಇನ್ನು ಇಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಮಂಗಳೂರಿನ ಎಲ್ಲಾ ಖಾಸಗಿ ಆಸ್ಪತ್ರೆಯ ಮುಖ್ಯಸ್ಥರನ್ನು ಸಭೆ ಕರೆದು ಸಾಂಕ್ರಮಿಕ ಖಾಯಿಲೆ ಬಗ್ಗೆ ಮಾಹಿತಿ ಪಡೆದಿದ್ದಾರೆ. ಇನ್ನು ಇದನ್ನು ತಡೆಗಟ್ಟುವ ಬಗ್ಗೆ ಕ್ರಮ ಕೈಗೊಳ್ಳಲು ತಯಾರಿ ನಡೆಸಿದ್ದಾರೆ. ಇನ್ನು 200 ಜನರು ಅಧಿಕಾರಿಗಳು ಮತ್ತು ಸಿಬ್ಬಂಧಿಗಳ ತಂಡಗಳನ್ನು ರಚಿಸಿ ಮಹಾಮಾರಿ ಡೆಂಘಿಯನ್ನು ತಡಗಟ್ಟಲು ಮುಂದಾಗುತ್ತಿದ್ದಾರೆ. ಪ್ರಮುಖವಾಗಿ ಡೆಂಘಿ ಹೇಗೆ ಬರುತ್ತೆ. ಅದನ್ನು ತೆಡಗಟ್ಟೊದು ಹೇಗೆ ಅಂತಾ ಜನರಿಗೆ ಮನವರಿಕೆ ಮಾಡಲು ಮುಂದಾಗಿದ್ದಾರೆ.
ಡೇಂಘಿ ಹೇಗೆ ಬರುತ್ತೆ..!
ನಿಂತ ಶುದ್ಧ ನೀರಲ್ಲಿ ಡೆಂಘಿ ಸೊಳ್ಳೆಗಳು ಮೊಟ್ಟೆಯಿಡುತ್ತವೆ. ಮನೆಯ ಆವರಣ ಹಾಗೂ ಮನೆಯ ಒಳೆಗೆ ಹೆಚ್ಚು ಡೆಂಘಿ ಸೊಳ್ಳೆಗಲು ನಿಧಾನಗತಿಯಲ್ಲಿ ಸಂಚರಿಸುತ್ತವೆ. ಹಗಲು ವೇಳೆಯಲ್ಲಿ ಮಾತ್ರ ಡೆಂಘಿ ಸೊಳ್ಳೆಗಳು ಕಚ್ಚುತ್ತವೆ.
ಹೆಚ್ಚಾಗಿ ಕಾಲಿನ ಭಾಗಕ್ಕೆ ಈ ಸೊಳ್ಳೆಗಳು ಕಚ್ಚುತ್ತವೆ. ಜಿಲ್ಲೆಯಲ್ಲಿ 200 ಜನರ ತಂಡ..! ಇನ್ನು 200 ಜನರ ತಂಡ ಮಂಗಳೂರಿನ ಪ್ರತಿ ಮನೆ ಮನೆಗಳಿಗೂ ಹೋಗಿ ಡೇಂಘಿ ಕಾರಣಗಳನ್ನು ತಿಳಿಸಿ ಹೇಳಲಿದ್ದಾರೆ.
ಚಿಕಿತ್ಸೆ ಇಲ್ಲ..!ಡೇಂಗ್ಯೂ ಕಾಯಿಲೆ ಬಂದ್ರೆ ಮನುಷ್ಯನ ರಕ್ತದಲ್ಲಿ ಪ್ಲೇಟ್ ಲೆಟ್ಸ್ ಕಡಿಮೆಯಾಗುತ್ತೆ. ಆದ್ರಿಂದ ಅದನ್ನು ಕಡಿಮೆಯಾಗದಂತೆ ನೋಡಿಕೊಳ್ಳುವ ಚಿಕಿತ್ಸೆ ಬಿಟ್ಟು ಬೇರೆ ಯಾವ ಚಿಕಿತ್ಸೆ ಇಲ್ಲ. ಪಪ್ಪಾಯ ಎಲೆಯ ರಸ ಇದಕ್ಕೆ ರಾಮಬಾಣ. ಆದ್ರೆ ಡೆಂಘೇ ಬರದ ಹಾಗೆ ನೋಡಿಕೊಳ್ಳಲು ಕೆಲ ಮುನ್ನಚ್ಚರಿಕಾ ಕ್ರಮವನ್ನು ಅನುಸರಿಸಿದ್ರೆ ಸಾಕು.
ಡೇಂಘಿ ನಿಯಂತ್ರಣ ಹೇಗೆ..!
ಮನೆ ಒಳಗೆ ಹಾಗೂ ಮನೆ ಆವರಣದಲ್ಲಿ ನೀರು ನಿಲ್ಲಲು ಬಿಡಬೇಡಿ. ಸೊಳ್ಳೆ ಕಚ್ಚದಂತೆ ಕೊಬ್ಬರಿಎಣ್ಣೆ ಅಥವಾ ಓಡಾಮಸ್ ನಂತಹ ಆಯಿಂಟ್ ಮೆಂಟ್ ಚರ್ಮಕ್ಕೆ ಹಚ್ಚಿಕೊಳ್ಳಿ.
ಮನೆಯ ಪಾಟ್ ಗಳಲ್ಲಿ ಅಥವಾ ಇನ್ನಿತರೆ ವಸ್ತುಗಳಲ್ಲಿ ನೀರು ನಿಲ್ಲಿದಂತೆ ನೋಡಿಕೊಳ್ಳಿ. ನೀರು ನಿಂತಿದ್ರು ಅದನ್ನು ಕಂಟ್ರೋಲ್ ಮಾಡಿ. ಈ ಮಹಾಮಾರಿ ಬರಲು ಮಂಗಳೂರು ಮಹಾನಗರ ಪಾಲಿಕೆಯ ನಿರ್ಲಕ್ಷ ಕೂಡ ತುಂಬಾ ಇದೆ. ಈ ಭಾರೀ ಮುನ್ನೆಚ್ಚರಿಕೆ ಕ್ರಮವಾಗಿ ಫಾಗಿಂಗ್ ಮಾಡಿಲ್ಲ. ಜನರೇ ಕೇಳಿದ್ರೆ ಫಾಗಿಂಗ್ ಮಾಡುವ ಮಿಷನ್ ಕೆಟ್ಟು ಹೋಗಿದೆ ಅನ್ನೊ ಬೇಜವಬ್ದಾರಿ ಉತ್ತರ ನೀಡುತ್ತಿದ್ದಾರೆ. ಸದ್ಯ ಇನ್ನಾದ್ರು ಜಿಲ್ಲಾಡಳಿತ ಮತ್ತು ಪಾಲಿಕೆ ಅಧಿಕಾರಿಗಳು ಈ ಎಲ್ಲ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕಿದೆ. ಅದ್ರ ಜೊತೆಗೆ ನಮ್ಮ ಆರೋಗ್ಯ ನಮ್ಮ ಕೈಲಿದೆ ಅನ್ನೊ ಕನಿಷ್ಠ ತಿಳುವಳಿಕೆ ಜನರಿಗೂ ಕೂಡ ಇರಬೇಕು.

Leave a Reply

Your email address will not be published. Required fields are marked *

error: Content is protected !!