ವಾಹನದ ಎಲ್ಲಾ ದಾಖಲೆ ಇದ್ದರೂ ಹೆಲ್ಮೆಟ್ ಹಾಕಿಲ್ಲ ಎಂದು ಸುಳ್ಳು ಕೇಸು ಹಾಕುವ ಕುಂದಾಪುರ ಪೊಲೀಸ್!!

ಕುಂದಾಪುರ:ಹೆಲ್ಮೆಟ್ ಹಾಕದೆ ಇದ್ದರೆ ಫೈನ್ ಹಾಕೋದು ಕಾನೂನು, ಆದರೆ ಹೆಲ್ಮೆಟ್ ಹಾಕಿದವರಿಗೂ  ಫೈನ್ ಹಾಕೋದು ಕುಂದಾಪುರ  ಟ್ರಾಫಿಕ್ ಪೊಲೀಸ್ ಕಾನೂನು.., ಇದೇನಿದು ಹೊಸ ಕಾನೂನು ಅಂತೀರಾ ಹಾಗಾದರೆ ಈ ವರದಿ ಓದಿ.

ಈ ಘಟನೆ ನಡೆದಿದ್ದು ಕುಂದಾಪುರ ತಾಲೂಕು ವ್ಯಾಪ್ತಿಯ  ರಾಷ್ಟ್ರೀಯ ಹೆದ್ದಾರಿ ಹೆಮ್ಮಾಡಿ ಸರ್ಕಲ್ ಬಳಿ, ಹೆಮ್ಮಾಡಿಯ ಮೀನು ಮಾರುಕಟ್ಟೆ ರಸ್ತೆಯಿಂದ ಬೈಕ್‌ನಲ್ಲಿ ಸಾಗಿ ಬಂದ ಯುವಕನೋರ್ವನ ಬೈಕ್ ನ್ನು ಟ್ರಾಫಿಕ್ ಕಾನ್ಸ್‌ಟೇಬಲ್ ಅಡ್ಡಗಟ್ಟಿ ದಾಖಲೆಗಳನ್ನು ಪರಿಶೀಲಿಸಿದ್ದಾರೆ

ಎಲ್ಲಾ ದಾಖಲೆಗಳು ಸರಿಯಿದ್ದು, ಹೆಲ್ಮೆಟ್ ಧರಿಸಿದ್ದರೂ ಹೆಲ್ಮೆಟ್ ಧರಿಸಿಲ್ಲ ಎಂದು ಪೊಲೀಸ್ ಸಿಬ್ಬಂದಿ ಫೈನ್ ಹಾಕಲು  ಹೋದಾಗ ಯುವಕನೊಂದಿಗೆ ವಾಗ್ವಾದಕ್ಕಿಳಿದ್ದಾರೆ.

ಎಲ್ಲಾ ಸರಿಯಿದ್ದು ದಂಡ ಯಾಕೆ ಕಟ್ಟಬೇಕು ಎಂದು ಪೊಲೀಸ್ ಸಿಬ್ಬಂದಿಯ ವರ್ತನೆಗೆ ಯುವಕ ಜಗಳವಾಡಿದ್ದಾನೆ.  ಯುವಕ ಹಾಗು ಪೊಲೀಸ್ ರ ನಡುವೆ ನಡೆದ ಈ ವಾಗ್ವದಕ್ಕೆ ನೂರಾರು ಸ್ಥಳೀಯರು ಕೂಡ ಸಾಕ್ಷಿಯಾಗಿದ್ದಾರೆ. ಪೋಲಿಸ್ ರ ಈ ವರ್ತನೆಗೆ ಸಾರ್ವಜನಿಕರು ಅಕ್ರೋಶ ವ್ಯಕ್ತಪಡಿಸಿದ್ದಾರೆ,  ಫೈನ್ ಹಾಕಿಯೆ ತೀರಬೇಕು ಎಂದು ಜಿದ್ದಿಗೆ ಬಿದ್ದವರಂತೆ ವರ್ತಿಸಿದ ಕುಂದಾಪುರ ಟ್ರಾಫಿಕ್ ಪೊಲೀಸ್ ನಂತರ ಪೊಲೀಸ್ ಜೊತೆ ಅನುಚಿತವರ್ತನೆ ಹೆಸರಿನಲ್ಲಿ ಯುವಕನಿಗೆ 100 ರೂಪಾಯಿ ಫೈನ್ ಹಾಕಿದ್ದಾರೆ. ಈ ಘಟನೆ ಮೊಬೈಲ್ ಸೇರೆಯಾಗಿದ್ದು ಸದ್ಯ ವೈರಲ್ ಆಗುತ್ತಿದೆ.

Leave a Reply

Your email address will not be published. Required fields are marked *

error: Content is protected !!