ಮುಳ್ಳು ಸೌತೆಕಾಯಿಯ ಉಪಯೋಗಗಳು

ಮುಳ್ಳು ಸೌತೆಕಾಯಿ ಉರಿಮೂತ್ರ ಹಾಗು ನೈಸರ್ಗಿಕ ಮೈ ಬಣ್ಣ ಕಾಂತಿಗೊಳಿಸುವುದರಲ್ಲಿ. ಮುಖ್ಯ ಪಾತ್ರವಹಿಸುತ್ತದ್ದೆ.ಇದನ್ನು ಸೇವಿಸುವುದರಿಂದ ಅಥವಾ ಹಚ್ಚುವುದರಿಂದ ಅತಿ ಹೆಚ್ಚು ತೇವಾಂಶ ದೊರೆಯುತ್ತದೆ. ಸೌತೆಕಾಯಿಯಲ್ಲಿ ವಿಟಮಿನ್ K , B1 ,B5, B7  ತಾಮ್ರ , ಪೊಟೇಷಿಯಮ್ , ವಿಟಮಿನ್ C  ಹಾಗು ಮೆಗ್ನೇಷಿಯಂ . ಬೀಟಾ -ಕೆರೋಟಿನ್ ನಂತಹ ಪೋಷಕಾಂಶಗಳು ಸಿಗುತ್ತದೆ.

ಆಯುರ್ವೇದದಲ್ಲಿ ಮುಳ್ಳು ಸೌತೆಗೆ ‘ ತ್ರಪುಸ’ ಎಂದು ಕರೆಯುತ್ತಾರೆ ಇದರ ಪ್ರಕಾರ ತಲೆನೋವು ಹೊಟ್ಟೆಯಲ್ಲಿ ನೀರು ತುಂಬುವುದು ,ಮೂತ್ರ ಪಿಂಡದಲ್ಲಿ  ಕಲ್ಲು, ಉರಿಮೂತ್ರ ಇಂಥಹ ಕಾಯಿಲೆಗಳಿಗೆ ಚಿಕಿತ್ಸೆ ಕೊಡಲಾಗುತ್ತದೆ. ಸೌತೆಕಾಯಿಯನ್ನು ಹೆಚ್ಚಗಿ ತರಕಾರಿಯಾಗಿ ಉಪಯೋಗಿಸುತ್ತಾರೆ.. ಇದು ಹಣ್ಣಾದಾಗ ಇದರಲ್ಲಿ ಹೇರಳವಾಗಿ ನೀರಿನ ಅಂಶ ಇರುವುದರಿಂದ  ಮೂತ್ರಪಿಂಡದಲ್ಲಿ ಇರುವ ಕಲ್ಲನ್ನು ಕರಗಿಸಲು ಇದು ತುಂಬಾ ಪರಿಣಾಮಕಾರಿಯಾಗಿದೆ

ಮುಳ್ಳು ಸೌತೆಕಾಯಿಯ ಔಷದಿಯ ಗುಣಗಳು

1.  ಮೂತ್ರ ಕೋಶದಲ್ಲಿರುವ ಕಲ್ಲು ನಿವಾರಣೆ
6 ರಿಂದ 10 ಸೌತೆಕಾಯಿ ಹೋಳುಗಳನ್ನು ಮಿಕ್ಸಿಗೆ ಹಾಕಿ ರುಬ್ಬಿ ಇದರಿಂದ ಸಿಕ್ಕಿದ ಪಾನೀಯವನ್ನು ಒಂದು ಲೋಟದಲ್ಲಿ ತೆಗೆದುಕೊಂಡು ಅದಕ್ಕೆ 3 ರಿಂದ 5 ಗ್ರಾಂ ನಷ್ಟು ಸಕ್ಕರೆ  ಹಾಗು ಸ್ವಲ್ಪ ಏಲಕ್ಕಿ ಪುಡಿಯನ್ನು ಸೇರಿಸಿ ಈ ಮಿಶ್ರಣವನ್ನ ಆಹಾರ ಸೇವಿಸುವ 30 ನಿಮಿಷದ ಮೊದಲು ದಿನಕ್ಕೆ 2-3 ಬಾರಿ ಕುಡಿಯಬೇಕು ಹೀಗೆ ಮಾಡುವುದರಿಂದ ಮೂತ್ರಕೋಶದಲ್ಲಿರುವ ಕಲ್ಲು ಕರಗಿಸುತ್ತದಲ್ಲದೆ ತುಂಬ ದಿನಗಳವರೆಗೆ ಸುರಕ್ಷಿತರಾಗಿರುವಿರಿ

 

 


2 ಹೊಟ್ಟೆ ಉರಿಯೂತ &  ಆಲಸ್ಯ

ಸೌತೆಕಾಯಿ ಕತ್ತರಿಸಿ ಅದರ ಬೀಜಗಳನ್ನು ಬೇರ್ಪಡಿಸಿ ೫೦ ಗ್ರಾಂ ನಷ್ಟು ತುಂಡರಿಸಿದ ಸೌತೆಕಾಯಿಯನ್ನು ಹಾಗು ೨೦-೩೦ ಗ್ರಾಂ ನಷ್ಟು ಬೆಲ್ಲವನ್ನು ಸೇರಿಸಿ ಇದರೊಂದಿಗೆ 1/2 ಚಮಚ ದಷ್ಟು ಏಲಕ್ಕಿ & ಕಾಳು ಮೆಣಸನ್ನು ಸೇರಿಸಿ ರುಬ್ಬಿಕೊಳ್ಳಿ ಈ ರುಬ್ಬಿದ ಮಿಶ್ರಣವನ್ನು ಪ್ರತಿದಿನ ಬೆಳಿಗ್ಗೆ ಆಹಾರದ ಮೊದಲು ಕುಡಿಯುವುದರಿಂದ ಹೊಟ್ಟೆಯಲ್ಲಿ ಉರಿಯೂತ ಹಾಗು ಆಲಸ್ಯ ದೂರವಾಗುತ್ತದೆ .

3 ಉರಿ ಮೂತ್ರ ಆಮ್ಲ ಪಿತ್ತ ನಿವಾರಣೆ
ಸೌತೆಕಾಯಿಯ ಹೋಳುಗಳನ್ನು ಸಂಗ್ರಹಿಸಿ ಇದನ್ನು ರಾತ್ರಿಯ ವೇಳೆ ಮಜ್ಜಿಗೆಯಲ್ಲಿ ನೆನೆಸಿ ಬೆಳಿಗ್ಗೆ ಇದನ್ನು ರುಬ್ಬಿಕೊಂಡು ಇದಕ್ಕೆ ಸ್ವಲ್ಪ ಸಕ್ಕ್ರೆ ಸೇರಿಸಿ ಕುಡಿಯುವುದರಿಂದ ಉರಿಮೂತ್ರ ಹಾಗು ಆಮ್ಲಪಿತ್ತ ನಿವಾರಣೆಯಾಗುತ್ತದೆ

4.ಕಣ್ಣಿನ ಉರಿಯೂತ ನಿವಾರಣೆ

ಸೌತೆಕಾಯಿಯನ್ನು ರುಬ್ಬಿ ನಂತರ ರುಬ್ಬಿದ ಮಿಶ್ರಣವನ್ನು ಕಣ್ಣಿನ ಸುತ್ತ ಹಚ್ಚಿ ೧-೨ ಗಂಟೆಗಳ ಕಾಲ ಹಾಗೆ ಇಟ್ಟುಕೊಳಬೇಕು ನಂತರ ತೊಳೆದಾಗ ಕಣ್ಣಿನ ಉರಿಯೂತ ಕಡಿಮೆಯಾಗುತ್ತದೆ …
ಇದು ನಮ್ಮ ಮನೆಯ ಹಿತ್ತಲಿನಲ್ಲಿ ಸಿಗುವ ಸೌತೆಕಾಯಿಯ ಉಪಯೋಗಗಳು

ಡಾ ರಾಜೇಶ್ ಬಾಯಾರಿ
ಚಿತ್ರಕೂಟ ಆಯುರ್ವೇದ ಚಿತ್ತೂರು
ಸಂಪರ್ಕಿಸಿ www.chithrakoota.com

Leave a Reply

Your email address will not be published. Required fields are marked *

error: Content is protected !!