ಗೇರು ಬೀಜದ ಉಪಯೋಗಗಳು

ಗೇರು ಬೀಜವು ಕಡಿಮೆ ಕೊಬ್ಬಿನಾಂಶವನ್ನು ಹೊಂದಿರುತ್ತದೆ. ಇದರಲ್ಲಿ ಅಂದಾಜು 82 %  ಅಪರ್ಯಾಪ್ತ ಕೊಬ್ಬಿನ ಆಮ್ಲ ಮತ್ತು 66 % ಪರ್ಯಾಪ್ತ ಕೊಬ್ಬಿನ ಆಮ್ಲ ಇರುವುದರಿಂದ ಹೃದಯಕ್ಕೆ ತುಂಬಾ ಉತ್ತಮವಾಗಿದೆ.
ಗರು ಬೀಜವು ಒಣಹಣ್ಣುಗಳಲ್ಲಿ ಒಂದಾಗಿದ್ದು ಜನರು ಇದನ್ನು ಇಷ್ಟಪಡುತ್ತಾರೆ. ಹಾಗೇ, ಇದರಲ್ಲಿ ಅತೀ ಮುಖ್ಯವಾದ ಪೋಷಕಾಂಶದ ಜೊತೆಗೆ ಆರೋಗ್ಯ ಅಭಿವೃದ್ಧಿಗೆ ಸಹಾಯಕವಾಗುತ್ತದೆ.
ಗೇರು ಬೀಜದಲ್ಲಿ ವಿಟಮಿನ್ B2, B3, C ಮತ್ತು E, ಮೆಗ್ನೇಶಿಯಂ ಅಂಶಗಳು ಹೆಚ್ಚಾಗಿರುವುದರಿಂದ ಕ್ಯಾನ್ಸರ್ ನಿರೋಧಕ ಶಕ್ತಿಯನ್ನು ಹೊಂದಿರುತ್ತದೆ. ಗೇರು ಬೀಜದಲ್ಲಿ ತಾಮ್ರದ ಅಂಶ ಹೆಚ್ಚಾಗಿರುವುದರಿಂದ ತಲೆ ಕೂದಲು ಕಪ್ಪಾಗಲು ಮತ್ತು ಕೂದಲ ಬುಡ ಗಟ್ಟಿಯಾಗಿಸಲು ಸಹಕಾರಿಯಾಗಿದೆ.
ಗೇರು ಬೀಜದಲ್ಲಿರುವ ಔಷಧಿಯ ಗುಣಗಳು
1)ದೇಹದಲ್ಲಿ ಶಕ್ತಿ ಮತ್ತು ಚರ್ಮದ ಹೊಳಪನ್ನು ವೃದ್ಧಿಸುತ್ತದೆ.

2-3  ಗೇರುಬೀಜ, 10-12 ಒಣದ್ರಾಕ್ಷಿ ಮತ್ತು 1-2 ಬಾದಾಮಿಯನ್ನು ರಾತ್ರಿ ಅಥವಾ ಬೆಳಿಗ್ಗೆ ತಿನ್ನುವುದರಿಂದ ಪಚನ ಕ್ರಿಯೆಗೆ ಸಹಕಾರಿಯಾಗಿದೆ. ಹಾಗೇ ದೇಹಕ್ಕೆ ಶಕ್ತಿ ಮತ್ತು ಸುಖ ನಿದ್ರೆಯನ್ನು ಒದಗಿಸುತ್ತದೆ. ಇದಲ್ಲದೇ ಚರ್ಮದ ಕಾಂತಿಯನ್ನು ಹೆಚ್ಚಿಸುವುದರ ಜೊತೆಗೆ ಕೂದಲಿನ ಬೇರುಗಳಿಗೆ ಶಕ್ತಿ ದೊರಕುತ್ತದೆ.

2) ಲೈಂಗಿಕ ನಿರಾಸಕ್ತಿ 

1 ಕಪ್‌ನಷ್ಟು ಹಾಲನ್ನು ತೆಗೆದುಕೊಂಡು ಅದಕ್ಕೆ 5-6 ಗೋಡಂಬಿ ಬೀಜವನ್ನು ಹಾಕಿ ಬೇಯಿಸಿ ನಂತರ ಬೇಕಾದಷ್ಟು ಬಿಡಿಸಿಕೊಂಡು ತಿನ್ನುವುದರಿಂದ ದೇಹಕ್ಕೆ ಬೇಕಾದಷ್ಟು ಪೋಷಕಾಂಶಗಳು ಜೊತೆಗೆ ದೇಹಕ್ಕೆ ಶಕ್ತಿ ಮತ್ತು ಲೈಂಗಿಕ ಕಾಮಕ್ಕೆ ಪ್ರೇರೇಪಿಸುತ್ತದೆ.

 

3) ತೂಕ ಹೆಚ್ಚಳ
೫೦ಗ್ರಾಂ ನಷ್ಟು ಗೋಡಂಬಿ ಮತ್ತು ೧೦೦ ಗ್ರಾಂ ದಷ್ಟು ಹುರಿದ ನೆಲಗಡಲೆ ಬೀಜವನ್ನು ತೆಗೆದುಕೊಂಡು ಮಿಕ್ಸಿಗೆ ಹಾಕಿ ಪೌಡರ್ ಮಾಡಿ ನಂತರ ದಿನಂಪ್ರತಿ ಬೆಳಿಗ್ಗೆ ೧೦-೧೫ ಗ್ರಾಂನಷ್ಟು ಪೌಡರ್ ನ್ನು ಹಾಲಿನೊಂದಿಗೆ ಬೆರೆಸಿ ಕುಡಿಯುವುದರಿಂದ ತೂಕ ಹೆಚ್ಚಳವಾಗುತ್ತದೆ

4) ಮಕ್ಕಳಿಗೆ ನೆನಪಿನ ಶಕ್ತಿ ಹೆಚ್ಚಿಸುತ್ತದೆ
೨-೩ ಗೇರು ಬೀಜವನ್ನು ತುಪ್ಪದೊಂದಿಗೆ ಹುರಿಯಬೇಉ ನಂತರ ಪೌಡರ್ ಮಾಡಿ, ಈ ಪೌಡರ್‌ನ್ನು ಸ್ವಲ್ಪ ಜೇನುತುಪ್ಪ, ಬೆಲ್ಲ ಅಥವಾ ಹಾಲಿನೊಂದಿಗೆ ಬೆರೆಸಿ ಕುಡಿಯುವುದರಿಂದ ಮಕ್ಕಳಿಗೆ ಬುದ್ಧಿಶಕ್ತಿ ಮತ್ತು ನೆನಪಿನ ಶಕ್ತಿ ಹೆಚ್ಚಿಸುವುದಲ್ಲದೇ ತುಂಬ ಉಪಯುಕ್ತವಾಗಿದೆ.

5) ಅಸ್ಥಿರಂಧ್ರ ತೊಂದರೆ ನಿವಾರಣೆ

5-6  ಗೋಡಂಬಿಯನ್ನು ದಾಳಿಂಬೆ ಪಾನೀಯದೊಂದಿಗೆ ದಿನಾ ಬೆಳಿಗ್ಗೆ ಪಿತ್ತ ಪ್ರಕೃತಿಯನ್ನು ಮತ್ತು ಸ್ವಲ್ಪ ಪ್ರಮಾಣದ ಗುಲ್ಕಂದ ಸೇರಿಸಿ ಕುಡಿಯುವುದರಿಂದ, ರಕ್ತ ಹೀನತೆ, ಆಯಾಸ, ಅಸ್ಥಿರಂಧ್ರದ ತೊಂದರೆಗೆ ತುಂಬಾ ಸಹಕಾರಿಯಾಗಿದೆ. ಅಲ್ಲದೇ ಮುಪ್ಪಿನ ವಯಸ್ಸಿನಲ್ಲಿ ಈ ಕಾಯಿಲೆಗಳಿಂದ ತಪ್ಪಿಸಿಕೊಳ್ಳಬಹುದು

ಹೀಗೆ ಗೋಡಂಬಿ ಆರೋಗ್ಯದ ಮೇಲೆ ತುಂಬಾ ಉತ್ತಮ ಪರಿಣಾಮ ವನ್ನು ಬೀರುತ್ತದೆ…..

ಡಾ. ರಾಜೇಶ್ ಬಾಯಾರಿ
 ಚಿತ್ರಕೂಟ ಆಯುರ್ವೇದ
ಚಿತ್ತೂರು www.chithrakoota.com

Leave a Reply

Your email address will not be published. Required fields are marked *

error: Content is protected !!