ಸಾಸಿವೆಯ ಉಪಯೋಗಗಳು
ಸಾಸಿವೆ ಒಂದು ಆಹಾರ ಪದಾರ್ಥವಾಗಿದೆ ಇದನ್ನು ಉಪ್ಪಿನಕಾಯಿ ಸಾಂಬಾರ ಪುಡಿ ಮಸಾಲಾ ಪುಡಿ , ಚಟ್ನಿ ಪುಡಿ ಹಾಗು ವಿವಿದ ಋತುಗಳಿಗೆ ಸರಿಯಾದ ತಿನಿಸುಗಳನ್ನ ತಯಾರಿಸಲು ಇದನ್ನು ಉಪಯೋಗಿಸುತ್ತಾರೆ
ಇದರ ಬೀಜಗಳಲ್ಲದೆ ಇದರಿಂದ ಎಣ್ಣೆಯನ್ನು ತಯಾರಿಸಿ ಬೇರೆ ಬೇರೆ ದೇಶಗಳಲ್ಲಿ ಇದನ್ನು ಉಪಯೋಗಿಸುತ್ತಾರೆ , ಅಲ್ಲದೆ ಉತ್ತರ ಭಾರತದಲ್ಲಿ ಹೆಚ್ಚಾಗಿ ಇದನ್ನ ಅಡುಗೆಗೆ ಬಳಸುತ್ತಾರೆ
ಸಾಸಿವೆ ಎಣ್ಣೆಯು ಸಂಧಿವಾತ ಮಾಂಸಖಂಡಗಳ ಸೆಳೆತ ಹಾಗು ಚರ್ಮ ರೋಗಗಳಿಗೆ ತುಂಬಾ ಉಪಯುಕ್ತವಾಗಿದೆ
ಸಾಸಿವೆಯಲ್ಲಿರುವ ಔಷಧಿಯ ಗುಣಗಳು
- ತಲೆ ನೋವು & ಹಲ್ಲು ನೋವು ನಿವಾರಣೆ
ಸಾಸಿವೆ ಬೀಜ & ನೀರನ್ನು ಸೇರಿಸಿ ರುಬ್ಬಿಕೊಳ್ಳಿ ನಂತರ ರುಬ್ಬಿದ ಮಿಶ್ರಣವನ್ನ ತಲೆಗೆ ಹಚ್ಚಿಕೊಳ್ಳಿ ಇದರಿಂದಾಗಿ ತಲೆನೋವು ಕಡಿಮೆ ಆಗುತ್ತದೆ
ಸಾಸಿವೆಯನ್ನು ರುಬ್ಬಿ ಈ ಮಿಶ್ರಣಕ್ಕೆ ಸ್ವಲ್ಪ ಉಪ್ಪನ್ನು ಸೇರಿಸಿ ಹಲ್ಲಿನ ನೋವಿನ ಭಾಗಕ್ಕೆ ಇದನ್ನ ಹಚ್ಚಿ ಸ್ವಲ್ಪ ಸಮಯದ ನಂತರ ಹಲ್ಲು ನೋವು ನಿವಾರಣೆಯಾಗುತ್ತದೆ - ತಾಳಂಗುಳ ಉರಿಯೂತ
2 ಚಮಚದಷ್ಟು & 1 ಚಮಚ ದಷ್ಟು ಲಿಂಬೆ ರಸವನ್ನು ಸೇರಿಸಿ ರುಬ್ಬಿ ನಂತರ ಆ ಮಿಶ್ರಣವನ್ನು ಗಂಟಲಿನ ಒಳಗಿನ ಭಾಗಕ್ಕೆ ಹಚ್ಚಿ ಇದರಿಂದಾಗಿ ತಾಳಂಗುಳ ಉರಿಯುತ ಕಡಿಮೆಯಾಗುತ್ತದೆ - ಸುಟ್ಟ ಹುಣ್ಣು ಮತ್ತು ಗಾಯ
4-5 ಚಮಚದಷ್ಟು ಸಾಸಿವೆಯನ್ನ ಬಾಣಲೆಗೆ ಹಾಕಿ ಬಿಸಿ ಮಾಡಿ ಇದು ತಣ್ಣಗಾದ ನಂತರ ಮಿಕ್ಸಿಗೆ ಹಾಕಿ ಪುಡಿ ಮಾಡಬೇಕು ಇದಕ್ಕೆ ಸ್ವಲ್ಪ ಸಾಸಿವೆ ಎಣ್ಣೆಯನ್ನ ದಪ್ಪ ಮಿಶ್ರಣ ಮಾಡಿ ಸುಟ್ಟ ಹುಣ್ಣು & ಗಾಯದ ಮೇಲೆ ಹಚ್ಚಿ ಇದರಿಂದಾಗಿ ಹುಣ್ಣು ಮತ್ತು ಗಾಯ ವಾಸಿಯಾಗುತ್ತದೆ.. ಮೂಗಿನಲ್ಲಿರುವ ಕಂಡು ಬರುವ ದುರ್ಮಾಂಸದ ನಿವಾರಣೆ
25 ಮಿಲಿಯಷ್ಟು ಸಾಸಿವೆ 2 ಚಮಚದಷ್ಟು ಉಪ್ಪನ್ನು ಸೇರಿಸಿ ಬಿಸಿ ಮಾಡಿ ನಂತರ ಇದನ್ನು ತಣ್ಣಗಾಗಿಸಿ ಸೋಸಿಕೊಳ್ಳಿ ನಂತರ ಸಿಕ್ಕ ಮಿಶ್ರಣವನ್ನ ದಿನಕ್ಕೆ 2-3 ಹನಿಯನ್ನು ಮೂಗಿನ ಒಳಗಡೆ ಬಿಡುವುದರಿಂದ ಮೂಗಿನಲ್ಲಿರುವ ದುರ್ಮಾಂಸದ ತೊಂದರೆಯನ್ನು ನಿವಾರಣೆ ಮಾಡುತ್ತದೆ
5 ಚರ್ಮದ ಅಲರ್ಜಿಯ ನಿವಾರಣೆ
ಸಾಸಿವೆ ಎಣ್ಣೆಗೆ ಸ್ವಲ್ಪ ಅರಿಶಿನ ವನ್ನ ಸೇರಿಸಿ ಮಿಶ್ರಣ ಮಾಡಿ ಈ ಮಿಶ್ರಣವನ್ನ ಬಿಸಿ ಮಾಡಿ ನಂತರ ದೇಹದ ಎಲ್ಲಾ ಭಾಗಗಳಿಗೆ ಹಚ್ಚಿ ಇದರಿಂದಾಗಿ ಚರ್ಮದ ಅಲರ್ಜಿ ನಿವಾರಣೆಯಾಗುತ್ತದೆ
6.ಮಕ್ಕಳಿಗೆ ಮತ್ತೆ ಮತ್ತೆ ಬರುವ ನೆಗಡಿಯ ನಿವಾರಣೆ
ಸಾಸಿವೆ ಹಾಗು ಕಾಳುಮೆಣಸಿನ ಪುಡಿಯನ್ನ ಸಮ ಪ್ರಮಾಣದಲ್ಲಿ ತೆಗೆದು ಕೊಂಡು ಪುಡಿ ಮಾಡಿ ಈ ಮಿಶ್ರಣವನ್ನ ಒಂದು ಸಣ್ಣ ಬಟ್ಟೆಯಲ್ಲಿ ಮಡಚಿ ದಿನ ಬೆಳ್ಳಿಗ್ಗೆ ಹಣೆ ಅಥವಾ ನೆತ್ತಿಯ ಮದ್ಯ ಭಾಗದಲ್ಲಿ 30-45 ನಿಮಿಷಗಳ ಕಾಲ ಇಡುವುದರಿಂದ ನೆಗಡಿ ಕೆಮ್ಮು ನಿವಾರಣೆಯಾಗುತ್ತದೆ - ಗಂಟು ನೋವು & ಮಾಂಸಖಂಡಗಳ ಊತ ನಿವಾರಣೆ
ಸಮ ಪ್ರಮಾಣದಲ್ಲಿ ಸಾಸಿವೆ ಬೀಜ , ಬೆಳ್ಳುಳ್ಳಿ ಮತ್ತು ಲವಂಗ ವನ್ನು ರುಬ್ಬಿ ಈ ಮಿಶ್ರಣವನ್ನು ಗಂಟು ಮತ್ತು ಮಾಂಸಖಂಡಗಳ ಊತದ ಮೇಲೆ ಹಚ್ಚಿ ಇದರಿಂದ ನೋವು ಗುಣವಾಗುತ್ತದೆ
ಹೀಗೆ ನಮ್ಮ ಅಡುಗೆ ಮನೆಯ ಡಬ್ಬದಲ್ಲಿ ಬೆಚ್ಚಗೆ ಕುಳಿತುಕೊಳ್ಳುವ ಸಾಸಿವೆ ಹಲವಾರು ರೋಗಗಳಿಗೆ ರಾಮಬಾಣವಾಗಿದೆ
ಹಾಗಾಗಿ ನಮ್ಮ ಸುತ್ತ ಮುತ್ತ ಇರುವ ಆಹಾರ ಪದಾರ್ಥಗಳು ನಮ್ಮ ದಿನನಿತ್ಯ ಅಡುಗೆಗೆ ಮಾತ್ರವಲ್ಲದೆ ಆರೋಗ್ಯಕ್ಕೂ ಅಮೃತವಾಗಿದೆ ,
ಡಾ. ರಾಜೇಶ್ ಬಾಯರಿ, ಚಿತ್ರಕೂಟ ಆರ್ಯುವೇದ
ಚಿತ್ತೂರು, ಕುಂದಾಪುರ ಸಂಪರ್ಕಿಸಿ. www.chithrakoota.com