ಸ್ವಾಸ್ಥ್ಯ ಜೀವನ ಕ್ರಮ

ಪ್ರತಿಯೋಬ್ಬರ ಜೀವನ ಕ್ರಮ ಅವರ ವೃತ್ತಿ, ಅವರ ವಾಸ ಸ್ಥಳ ಮತ್ತು ಅವರಿರುವ
ಪ್ರದೇಶಕ್ಕೆ ಅನುಗುಣವಾಗಿ ಇರುತ್ತದೆ ಈ ಯಾಂತ್ರಿಕ ಬದುಕಿನಲ್ಲಿ ಉತ್ತಮವಾದ
ಜೀವನ ಕ್ರಮವನ್ನ ಅಳವಡಿಸಿಕೊಳ್ಳುವುದು ಆರೋಗ್ಯದ ದೃಷ್ಠಿಯಿಂದ ಅತೀ ಅಗತ್ಯ.
“ಸ್ವಸ್ಥಸ್ಯ ಸ್ವಾಸ್ಥ್ಯ ರಕ್ಷಣಂ ಅತುರಸ್ಯ ವಿಕಾರ ಪ್ರಶಮಾನಂ”
ಆರೋಗ್ಯವಂತನ ಆರೋಗ್ಯವನ್ನು ಉತ್ತಮ ಜೀವನ ಶೈಲಿಯಿಂದ ಕಾಪಾಡುವುದು,
ರೋಗಿಯ ಕಾಯಿಲೆಯನ್ನ ಗುಣಪಡಿಸುವುದು ಆರ್ಯುವೇದದ ಉದ್ದೇಶ.
ದಿನಚರ್ಯ,ಋತುಚರ್ಯ,ಉತ್ತಮ ಆಹಾರ ಸೇವನೆ, ಉತ್ತಮ ದೈಹಿಕ ಮಾನಸಿಕ
ಚಟುವಟಿಕೆ ಮೂಲಕ ಆರೋಗ್ಯದರಕ್ಷಣೆ ಹೆಗೆ ಮಾಡಿಕೊಳ್ಳಬೇಕೆಂದು ಆರ್ಯುವೇದ
ಪಂಡಿತರು ತಮ್ಮ ಸಂಹಿತೆಗಳ ಮೂಲಕ ಸವಿಸ್ತಾರವಾಗಿ ತಿಳಿಸಿದ್ದಾರೆ.
ಆರೋಗ್ಯವಂತ ಜೀವನಕ್ರಮದ ಲಾಭಗಳು ;-

  • ದೇಹವನ್ನು ಸದಾ ಚಟುವಟಿಕೆಯಿಂದ ಮನಸ್ಸನ್ನು ಉಲ್ಲಾಸದಾಯಕವಾಗಿಡುತ್ತದೆ
  • ನಿಮ್ಮ ಕೆಲಸದ ಹಾಗೂ ಕೌಟುಂಬಿಕ ಒತ್ತಡವನ್ನು ಸರಿದೂಗಿಸಲು ಸಹಕರಿಸುತ್ತದೆ .
  • ನಿಮ್ಮ ಗುರಿಯನ್ನು ತಲುಪಲು ಸಹಕಾರಿ.
    -ಆರೋಗ್ಯವನ್ನು ಕಾಪಾಡುತ್ತದೆ
    ಬೆಳಿಗ್ಗೆ ಬೇಗನೆ ಏಳುವುದು
    ಸೂರ್ಯೋದಯಕ್ಕಿಂತ ೧ ಘಂಟೆ ಮೊದಲೆ ಏಳಬೇಕು. ಪ್ರತಿದಿನ ನಿರ್ದಿಷ್ಢ ಸಮಯಕ್ಕೆ
    ಏಳುವುದರಿಂದ ದೇಹದಲ್ಲಿ ಹಾರ್ಮೋನ್ , ಕಿಣ್ವಗಳು ಹಾಗು ಜಠರಾಗ್ನಿಯು ಸರಿಯಾದ
    ಪ್ರಮಾಣದಲ್ಲಿ ಬಿಡುಗಡೆಯಾಗುತ್ತದೆ, ಮಲಬದ್ದತೆ, ಅಜಿರ್ಣದ ಸಮಸ್ಯೆಯಿಂದ

ಮುಕ್ತರಾಗಬಹುದು. ದೇಹ ಮತ್ತು ಮನಸ್ಸು ಉಲ್ಲಾಸದಾಯಕವಾಗಿ ಸದಾ
ಚಟುವಟಿಕೆಯಿಂದ ಇರಲು ಸಾದ್ಯ.
ವ್ಯಾಯಮ – ನಾವೆಷ್ಠೇ ದಿನನಿತ್ಯ ಕೆಲಸ ಮಾಡಿದರು ನಮ್ಮ ದೇಹದ ಎಲ್ಲಾ ಭಾಗಗಳಿಗೆ
ಮಾಂಸ ಖಂಡಗಳಿಗೆ ವ್ಯಾಯಮ ಸಿಗದು. ಹಾಗಾಗಿ ಪ್ರತಿದಿನ ಬೆಳಿಗ್ಗೆ ಅಥವಾ
ಸಾಯಂಕಾಲ ಅರ್ಧ ಅಥವಾ ಒಂದು ಘಂಟೆಯ ವ್ಯಾಯಮ ಅವಶ್ಯಕ. ಇದರಿಂದ
ಹೃದಯದ ಹಾಗು ದೈಹಿಕ ಮತ್ತು ಮಾನಸಿಕ ಆರೊಗ್ಯವನ್ನ ಕಾಪಾಡಬಹುದು
ಆಹಾರ- ನೀರಿನ ಸೇವನೆ
ದಿನನಿತ್ಯ ನಿಗದಿತ ಸಮಯಕ್ಕೆ ಸರಿಯಾಗಿ ನಿಯಮಿತ ಆಹಾರವನ್ನ ಸೇವಿಸಬೇಕು
ಇದರಿಂದ ಜಠರಾಗ್ನಿ ಜೀರ್ಣಕ್ಕೆ ಸಹಕರಿಸುವ ಕಿಣ್ವಗಳು ಸರಿಯಾಗಿ ಉತ್ಪತ್ತಿಯಾಗಿ
ಜಿರ್ಣಕ್ರಿಯೆ ಸರಾಗವಾಗುತ್ತದೆ ಪದೆ ಪದೆ ಆಹಾರವನ್ನ ಸೇವಿಸಬಾರದು , ರಾತ್ರಿ
ಊಟವನ್ನು ಮಲಗುವ ೩ ಗಂಟೆಗಳ ಮೊದಲು ಸೇವಿಸಬೇಕು ಇದರಿಂದ ಸಕ್ಕರೆ
ಖಾಯಿಲೆ ಹಾಗು ರಕ್ತದೊತ್ತಡ ಬೊಜ್ಜಿನ ಸಮಸ್ಯೆಯಿಂದ ದೂರವಿರಬಹುದು.
ದಿನಕ್ಕೆ 2-3Lt ನೀರನ್ನು ಕುಡಿಯುವುದರಿಂದ ನಿಮ್ಮ ಕಿಡ್ನಿ, ಮೂತ್ರ ಕೋಶ
ಶುದ್ದಿಯಾಗುತ್ತದೆ, ಚರ್ಮದ ಕಾಂತಿ ವೃದ್ದಿಸುತ್ತದೆ ರಾತ್ರಿ ಮಲಗುವ ಮೊದಲು ಅರ್ಧ
ಅಥವಾ 1 ಲೋಟ ಬಿಸಿ ನೀರನ್ನು ಸೇವಿಸಿದರೆ ಮಲಬದ್ದತೆಯಿಂದ ಪರಿಹಾರವಾಗುತ.
ಸದಾ ಚಟುವಟಿಕೆಯಿಂದ ಇರಿ..
ನಿಮ್ಮ ದೇಹ ಮನಸ್ಸು ಉತ್ಸಾಹದಿಂದಿರಬೇಕಾದರೆ ಸದಾ ಚಟುವಟಿಕೆಯಿಂದ
ಇರುವುದು ಅತೀ ಮುಖ್ಯ ನಿಮಗಿಷ್ಟವಿರುವ ಹವ್ಯಾಸವನ್ನು ಬೆಳೆಸಿಕೊಂಡು ಬಿಡುವಿನ
ವೇಳೆಯಲ್ಲಿ ಒಂದಿಲ್ಲೊಂದು ಚಟುವಟಿಕೆಯಲ್ಲಿ ತೊಡಗಿಸಿಕೊಂಡರೆ ಮನಸ್ಸು
ಉಲ್ಲಾಸದಾಯಕವಾಗಿರುತ್ತದೆ.

ಇವುಗಳಿಂದ ದೂರ ಇರಿ
-ದೂಮಪಾನ, ಮದ್ಯಪಾನ ಕ್ಯಾನ್ಸರಕಾರಕ ಇದರ ಅಡ್ಡ ಪರಿಣಾಮಗಳು ತಿಳಿದು ಕೂಡ
ಯುವಜನತೆ ಇದಕ್ಕೆ ದಾಸರಾಗಿರುವುದು ಅತಂಕಕಾರಿಯಾಗಿದೆ.
-ಮಾದ್ಯಮಗಳಾದ ಟಿವಿ, ಮೋಬೈಲ್ ಇದರ ಅತೀಯಾದ ಬಳಕೆ ಮೆದುಳಿನ ಬೆಳವಣಿಗೆ
ಕುಂಠಿತವಾಗಿ ಕಣ್ಣಿನ ಸಮಸ್ಯೆ ಉಂಟಾಗುತ್ತದೆ.
ಚಹಾ ಕಾಫಿಯನ್ನ ಔಷದಿಯಾಗಿ ಬಳಸಬಹುದು ಆದರೆ ಅದನ್ನ ದಿನನಿತ್ಯದ
ಆಹಾರವಾಗಿ ಸೇವಿಸಬಾರದು ಇದರಿಂದ ಮೆದುಳು, ಜಿರ್ಣಾಂಗ ವ್ಯೂಹ, ಹೃದಯ
ಸಂಬಂಧಿ ಖಾಯಿಲೆ ಉಂಟಾಗುತ್ತದೆ. ಖಾಲಿ ಹೊಟ್ಟೆಗೆ ಇದನ್ನು ಸೇವಿಸಿದರೆ ಗ್ಯಾಸ್ಟ್ರೀಕ್
ಸಮಸ್ಯೆ ಉಂಟಾಗಿ ಹಸಿವು ಕಡಿಮೆಯಾಗಿತ್ತದೆ.
ಧನಾತ್ಮಕ ಚಿಂತನೆ

ಎಲ್ಲಾ ಖಾಯಿಲೆಗೂ ಮೂಲಾ ಕಾರಣ ನಮ್ಮ ಮನಸ್ಸು , ಕಾಮ ಕ್ರೋಧ,ಮೋಹ,ಮಧ
ಮಾತ್ಸರ್ಯ ಇವುಗಳ ಮೇಲೆ ಹತೋಟಿ ಸಾಧಿಸಿ ಯಾವಾಗಾಲೂ ಗುಣಾತ್ಮಕ
ಚಿಂತನೆಯನ್ನ ಮಾಡಿದರೆ ಮಾನಸಿಕ ಆರೋಗ್ಯ ಕಾಪಾಡಬಹುದು ದಿನನಿತ್ಯ ಯೋಗ
ಪ್ರಾಣಯಾಮ ಧ್ಯಾನ, ಪ್ರಾರ್ಥನೆ ಇವುಗಳನ್ನು ಅಭ್ಯಾಸ ಮಾಡಿದರೆ ನಮ್ಮ ಆಲೋಚನೆ
ಉತ್ತಮವಾಗುತ್ತದೆ. ಜ್ಙಾನೇಂದ್ರೀಯ ಕರ್ಮೆಂದ್ರೀಯಗಳಲ್ಲಿ ಹತೋಟಿಯನ್ನು
ಪಡೆಯಲು ಸಾದ್ಯ. ಪ್ರತಿದಿನ ಮಲಗುವ ಮೊದಲು ಆಧ್ಯಾತ್ಮಿಕ ಪುಸ್ತಕಗಳನ್ನು
ಓದಬೇಕು, ಹಿತವಾಗಿ ಮಿತವಾಗಿ ಮಾತನಾಡಬೇಕು. ದಿನಕ್ಕೆ ೧೫ ನಿಮಿಷಗಳ ಕಾಲ
ಮೌನವಾಗಿದ್ದು ಮನಸ್ಸನ್ನು ಆಲೋಚನ ಮುಕ್ತವಾಗಿರಿಸಿದರೆ ಧನಾತ್ಮಕ
ಚಿಂತನೆಗಳನ್ನು ಪಡೆಯಲು ಸಾದ್ಯ..
ಸರಿಯಾದ ಜೀವನ ಶೈಲಿ, ಆಹಾರ ಕ್ರಮ, ಸತ್ವಯುತ ಸಮತೋಲನ ಆಹಾರ ಸೇವನೆ
ಮಾಡುವ ಕೆಲಸದಲ್ಲಿ ಖುಷಿ, ಎಲ್ಲರಲ್ಲು ಪ್ರೀತಿ, ಸ್ನೇಹ ಇವುಗಳನ್ನು ನಮ್ಮ ಜೀವನದಲ್ಲಿ

ಅಳವಡಿಸಿಕೊಂಡರೆ ಆರೋಗ್ಯವಂತಾರಾಗಿರುವಲ್ಲಿ ಹಾಗು ಉತ್ತಮ ಜೀವನ ನಿರ್ವಹಣೆ
ಮಾಡುವಲ್ಲಿ ಸಹಾಯಕವಾಗುತ್ತದೆ

ಡಾ. ರಾಜೇಶ್ ಬಾಯರಿ, ಚಿತ್ರಕೂಟ ಆರ್ಯುವೇದ
ಚಿತ್ತೂರು, ಕುಂದಾಪುರ ಸಂಪರ್ಕಿಸಿ. www.chithrakoota.com

Leave a Reply

Your email address will not be published. Required fields are marked *

error: Content is protected !!