ಕ್ಯಾರೆಟಿನಾ ಉಪಯೋಗಗಳು

ನಮ್ಮ ಅರೋಗ್ಯ ಕಾಪಾಡಿಕೊಳ್ಳುವುದು ಹಾಗು ನಮ್ಮ ಸೌಂದರ್ಯ ರಕ್ಷಣೆ ಎರಡು ನಮ್ಮ ಕೈ ಯಲ್ಲಿದೆ , ಇದನ್ನು ಕಾಪಾಡಿಕೊಳ್ಳುವ ಸಲುವಾಗಿ ಎಷ್ಟೋ ದುಂದುವೆಚ್ಚಗಳನ್ನ ನಾವು ಮಾಡುತ್ತೇವೆ ಆದರೆ ” ಹಿತ್ತಲ ಗಿಡ ಮದ್ದಲ್ಲ ” ಎಂಬ ಗಾದೆಯಂತೆ ನಮ್ಮ ಸುತ್ತ ಮುತ್ತ ನಮಗೆ ಸುಲಭವಾಗಿ ಸಿಗುವ ಉಪಯುಕ್ತ ತರಕಾರಿಗಳನ್ನ ಸೊಪ್ಪುಗಳನ್ನ ನಾವ್ ಕಡೆಗಣಿಸುತ್ತೇವೆ ಆದರೆ ನಮ್ಮ ಅಡುಗೆ ಮನೆಯಲ್ಲಿಯೇ ಸಿಗುವ ತರಕಾರಿಗಳು ನಮ್ಮ ಎಷ್ಟೋ ರೋಗ ಗಳಿಗೆ ರಾಮಬಾಣವಾಗಿದೆ ಅದರಲ್ಲಿ ಕ್ಯಾರಟ್ ಕೂಡ ಒಂದು ಕ್ಯಾರೆಟಿನಲ್ಲಿ ಅರೋಗ್ಯ & ಔಷದಿಯ ಗುಣವಿರುವುದರಿಂದ ಇದನ್ನು ಮನೆಗಳಲ್ಲಿ ಸಂಗ್ರಹಿಸಿ ಇಡುತ್ತಾರೆ .

ಇದೊಂದು ತರಕಾರಿಯಾದರು ಕೂಡ ಇದರಲ್ಲಿ ಚರ್ಮ ರೋಗ , ಕಣ್ಣಿನ ಕಾಯಿಲೆ , ಮೂತ್ರ ಪಿಂಡ & ಕರಳು ಸಂಬಂಧಿತ ಕಾಯಿಲೆಗಳು ಹೋಗಲಾಡಿಸಬಹುದು
“ಬೀಟಾ- ಕ್ಯಾರಟಿನ ” & ” ವಿಟಮಿನ್ A ” ಎಂಬ ಅಂಶಗಳು ಇದರಲ್ಲಿ ಕಂಡುಬರುತ್ತದೆ ಇದರಲ್ಲಿ ಚರ್ಮ & ಕಣ್ಣಿನ ರಕ್ಷಣೆಗೆ ಉತ್ತೇಜಿಸುವ ವ್ಯವಸ್ಥೆಯನ್ನ ನಿಧಾನವಾಗಿ ದೇಹಕ್ಕೆ ಕೊಡುತ್ತದೆ

ಕ್ಯಾರಟ್ ನ್ನು ಹಸಿಯಾಗಿ ಕತ್ತರಿಸಿ ತಿನ್ನುವುದು , ಸಿಹಿ ಖಾದ್ಯ , ಉಪ್ಪಿನಕಾಯಿ ಅಥವಾ ಸಲಾಡ್ ರೀತಿಯಲ್ಲಿ ಉಪಯೋಗಿಸಬಹುದು ಡಯಟ್ ಮಾಡುವವರಿಗೆ ಅತಿ ಮುಖ್ಯವಾಗಿ ಇದರ ಮಿಲ್ಕ್ ಶೇಕ್ ಅಥವಾ ಹೊಸದಾಗಿ ತಯಾರಿಸಿದ ಪಾನೀಯಗಳು ತುಂಬಾ ಉಪಯೋಗ

ಕ್ಯಾರೆಟಿನಾ ಮನೆ ಔಷಧಿ ಗುಣಗಳು
“ ಕ್ಯಾರೆಟಿನಾ ಚರ್ಮ ಸೌಂದರ್ಯದ ಗುಣ”
ಕ್ಯಾರೆಟ್ ನ್ನು ಅರೆದು ಆಲಿವ್ ಎಣ್ಣೆಯನ್ನು ಸೇರಿಸಿ ಮುಖಕ್ಕೆ ಹಚ್ಚಿ ನಂತರ 10-30 ನಿಮಿಷಗಳ ತನಕ ಒಣಗಿಸಿ ನಂತರ ಮುಖ ತೊಳೆದರೆ ಮುಖ ತುಂಬಾ ಸುಂದರವಾಗಿ ಕಾಣುತ್ತದೆ ಅಲ್ಲದೆ ಮುಖ ಸುಕ್ಕು ಗಟ್ಟುವುದನ್ನು ತಡೆದು ಮುಖದ ಚರ್ಮ ಮೃದು ಮಾಡುತ್ತದೆ

ಕ್ಯಾರೆಟಿನಾ ಎಲೆ ಪಾನೀಯದಿಂದ ಮೂಲವ್ಯಾಧಿ & ಮಲಬದ್ಧತೆ ನಿವಾರಣೆ
ಕ್ಯಾರೆಟಿನ ಎಲೆಗಳನ್ನ ಪುಡಿ ಮಾಡಿ ಪಾನಿಯವನ್ನು ತಯಾರಿಸಿ ಅಥವಾ ಕ್ಯಾರೆಟಿನಾ ಎಲೆ ಗಳಿಂದ ಸಲಾಡ್ ಗಳನ್ನು ತಯಾರಿಸಿ ತಿನ್ನುವುದರಿಂದ ಮೂಲವ್ಯಾಧಿ ಹಾಗು ಮಲಬದ್ದತೆಗೆ ತುಂಬಾ ಪರಿಣಾಮಕಾರಿಯಾಗುತ್ತದೆ
ಈ ಪಾನಿಯವನ್ನು 10-15 ಮಿಲಿಯಷ್ಟು ತೆಗೆದುಕೊಂಡು ಆಹಾರ ಸೇವಿಸಿದ ನಂತರ ದಿನಕ್ಕೆ 2 ಬಾರಿ ಸೇವಿಸುವುದು ಉತ್ತಮ ಇದರಿಂದಾಗಿ ಮೂಲವ್ಯಾಧಿ ಹಾಗು ಮಲಬದ್ಧತೆ ತಡೆಗಟ್ಟಬಹುದು

ಕ್ಯಾರೆಟ್ ಪಾನೀಯದಿಂದ ಕೊಬ್ಬಿಗೆ ಬಿಗ್ ಬ್ರೇಕ್
ಕ್ಯಾರೆಟ್ ಪಾನೀಯದಿಂದಾಗಿ ಕೆಟ್ಟ ಕೊಬ್ಬಿನ ಅಂಶ ಕಡಿಮೆ ಮಾಡುವುದರಲ್ಲಿ ಇದು ತುಂಬಾ ಪರಿಣಾಮಕಾರಿಯಾಗಿದೆ ಅಷ್ಟೇ ಅಲ್ಲದೆ ದೇಹಕ್ಕೆ ಶಕ್ತಿ ಪೂರೈಸುದರ ಜೊತೆಗೆ ಕರುಳಿಗೆ ತುಂಬಾ ಒಳ್ಳೆಯ ಔಷಧಿಯಾಗಿದೆ, ಈ ಪಾನಿಯವನ್ನು ದಿನಕ್ಕೆ 50-100 ಮಿಲಿಯಷ್ಟು ತೆಗೆದುಕೊಂಡು 2 ಬಾರಿ ಕುಡಿಯಬೇಕು

ಕ್ಯಾರಟ್ ಸೇವನೆಯಿಂದ ಮುಪ್ಪಿಗೆ ಹೇಳಬಹುದು ವಿದಾಯ
ಕ್ಯಾರಟಿನಲ್ಲಿ ಬೀಟಾ – ಕ್ಯಾರಟಿನ ಅಂಶ ಹೆಚ್ಚಿರುವುದರಿಂದ ಇದರ ಸೇವನೆ ಉತ್ತಮ. ಇದರ ಸೇವನೆಯಿಂದಾಗಿ ದೇಹಕ್ಕೆ ತಕ್ಷಣ ವಿಟಮಿನ್ A ಯನ್ನ ಬಿಡುಗಡೆಗೊಳಿಸುತ್ತದೆ . ಕ್ಯಾರಟ್ ತಿನ್ನುವುದರ ಜೊತೆಗೆ ಬೆಣ್ಣೆ , ಹಾಲು ಮೊಸರು ಅಥವಾ ಮೊಳಕೆ ಒಡೆದ ಹಸಿರು ಕಾಳುಗಳು ಇತ್ಯಾದಿ ಇದರಿಂದಾಗಿ ವಯಸಾಗೋದನ್ನ ಕಡಿಮೆ ಮಾಡುತ್ತದೆ

ಕ್ಯಾರಟ್ ಮಿಲ್ಕ್ ಶೇಕ್
ಕ್ಯಾರಟಿನಲ್ಲಿ ಹೇರಳವಾಗಿ ವಿಟಮಿನ್ B ಇರುವುದರಿಂದ ಇದು ದೇಹವನ್ನ ತಂಪಾಗಿರಿಸುತ್ತದೆ ಇದನ್ನು ಹಾಲಿನೊಂದಿಗೆ ಅರೆದು ಕುಡಿಯುದರಿಂದ ಸುಸ್ತ್ ಕಡಿಮೆಯಾಗಿ ಮಾಂಸ ಖಂಡಗಳ ಸೆಳೆತವನ್ನು ತಡೆಯಬಹುದು
ಅರೆ ಬೆಂದ ಕ್ಯಾರೇಟನ್ನ ಮಕ್ಕಳಿಗೆ ತಿನ್ನಸುವುದರಿಂದ ವಿಟಮಿನ್ B ಯಾ ಕೊರತೆಯಿಂದ ಹೊರಬಬಹುದು

ಆಮ್ಲ ಪಿತ್ತ
ಕ್ಯಾರಟ್ ಹಾಗು ಗರಿಕೆ ಹುಲ್ಲನ್ನು 3:1 ಪ್ರಮಾಣದಲ್ಲಿ ಪಾನೀಯವನ್ನು ತಯಾರಿಸಿ ಅದನ್ನ ದಿನ ಬೆಳ್ಳಿಗೆ ಖಾಲಿ ಹೊಟ್ಟೆಯಲ್ಲಿ 200 ಮಿಲಿಯಷ್ಟು ಸೇವಿಸುವುದರಿಂದ ಮದುಮೇಹವನ್ನ ನಿಯಂತ್ರಿಸಬಹುದು ಅಲ್ಲದೆ ಆಮ್ಲ ಪಿತ್ತವನ್ನ ನಿಯಂತ್ರಿಸುತ್ತದೆ

ಡಾ. ರಾಜೇಶ್ ಬಾಯರಿ, ಚಿತ್ರಕೂಟ ಆರ್ಯುವೇದ
ಚಿತ್ತೂರು, ಕುಂದಾಪುರ ಸಂಪರ್ಕಿಸಿ. www.chithrakoota.com

Leave a Reply

Your email address will not be published. Required fields are marked *

error: Content is protected !!