ಬದಲಾಗುತ್ತಿರುವ ಆಹಾರ ಕ್ರಮ ಮತ್ತು ಅದರಿಂದ ಬರುವ ರೋಗಗಳು

ಆರೋಗ್ಯ ಡಾಕ್ಟರ್ ಕೈಯಲ್ಲಿ ಇಲ್ಲ, ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯಲ್ಲಿಲ್ಲ, ಲಕ್ಷ ಲಕ್ಷ ಹಣದಲ್ಲಿಯೂ ಇಲ್ಲ, ಸಂಕೀರ್ಣ ಶಸ್ತ್ರಚಿಕಿತ್ಸೆಯಲ್ಲಿಯು ಇಲ್ಲ. ದೊಡ್ಡ ದೊಡ್ಡ ಲ್ಯಾಬ್‍ಗಳಲ್ಲಿಯೂ ಇಲ್ಲ, ಅದಿರುವುದು ಸ್ವತಃ ನಮ್ಮ ಕೈಯಲ್ಲಿಯೇ. ಇದು ಎಷ್ಟು ಸರಳ, ಕಡಿಮೆ ಖರ್ಚಿನದ್ದು ಎಂದರೆ ಅದನ್ನು ನಮ್ಮ ಆಹಾರ ಅಭ್ಯಾಸಗಳಿಂದಲೇ ಸಾಧಿಸಬಹುದು.

ಇತ್ತೀಚಿನ ಸ್ಪರ್ಧಾತ್ಮಕ ಯುಗದಲ್ಲಿ ಪಾಶ್ಚಿಮಾತ್ಯ ಜೀವನ ಕ್ರಮವನ್ನು ಅನುಸರಿಸಿ ಅಲ್ಲಿನ ಆಹಾರ ಪದ್ಧತಿಯನ್ನು ಅಳವಡಿಸಿಕೊಂಡು ನಾವು ನಿತ್ಯ ರೋಗಿಗಳಾಗಿ ಜೀವನವನ್ನು ನಡೆಸುತ್ತಿದ್ದೇವೆ. ನಮ್ಮ ಪಾರಂಪರಿಕ ಆಹಾರ ಪದ್ಧತಿಗೆ ಎಳ್ಳು ನೀರು ಬಿಡಲು ಸಿದ್ಧವಾಗಿದ್ದೇವೆ. ಇಂದಿನ ರೋಗಗಳಲ್ಲಿ ಶೇಕಡಾ 80% ಕ್ಕೂ ಅಧಿಕ ರೋಗಗಳು ಬರಲು ನಮ್ಮ ಮೂಲ ಆಹಾರ ಪದ್ಧತಿಯೇ ಕಾರಣ ಎನ್ನಬಹುದು. ಹಸಿರು ಕ್ರಾಂತಿ ಎಂದು ಕುಳ್ಳನೆ ತಳಿಯ ಗೋಧಿ, ಅಕ್ಕಿಯನ್ನು ಬೆಳೆದು, ಅದನ್ನು ಚೆನ್ನಾಗಿ ಪಾಲಿಷ್ ಮಾಡಿ, ಅದರಲ್ಲಿರುವ ಪೋಷಕಾಂಶಗಳನ್ನು ತೆಗೆದು ಅದಕ್ಕೆ ಮೇಣ ಹಚ್ಚಿ ತಿನ್ನಲು ಪ್ರಾರಂಭಿಸಿದ ನಂತರ ಮಧುಮೇಹ ರೋಗವು ವ್ಯಾಪಕವಾಗಿದೆ.

ಮಣ್ಣಿನ ಪೋಷಕಾಂಶಗಳನ್ನು ಪರೀಕ್ಷಿಸದೆ, ಲೆಕ್ಕಚಾರವಿಲ್ಲದೆ ಅಪಯೋಗಿಸುವ ರಾಸಾಯನಿಕಗಳು ಒಟ್ಟಿನಲ್ಲಿ ಹೇಳಬೇಕಾದರೆ ಕೆಟ್ಟ ವ್ಯವಸಾಯ ಪದ್ಧತಿಯಿಂದ ಕೆಟ್ಟ ಆಹಾರ ಪದ್ಧತಿ, ಕೆಟ್ಟ ಆಹಾರ ಪದ್ಧತಿಯಿಂದ ಹದಗೆಟ್ಟ ಆರೋಗ್ಯ. ಬೆಳಿಗ್ಗೆ ಎದ್ದ ತಕ್ಷಣ ನಮ್ಮ ಮಕ್ಕಳಿಗೆ ಚಾಕಲೇಟ್, ಬಿಸ್ಕೇಟ್, ರಸ್ಕ್‍ಗಳನ್ನು ತಿನ್ನಲು ಕಲಿಸಿದ್ದೇವೆ. ಅದರಲ್ಲೇನಿದೆ ? ಮೈದಾ, ಸಕ್ಕರೆ, ಡಾಲ್ಡಾದಂತಹ ಪದಾರ್ಥಗಳು. ಇದರಿಂದ ಏನು ಆಗುತ್ತದೆ ಅಂತೀರಾ ? ಸಣ್ಣ ವಯಸ್ಸಿನಲ್ಲಿ ಸಕ್ಕರೆ ಕಾಯಿಲೆ, ಬಿಪಿ, ಹೆಣ್ಣು ಮಕ್ಕಳ ಗರ್ಭಕೋಶದಲ್ಲಿ ನೀರುಗುಳ್ಳೆನಂತಹ ಕಾಯಿಲೆಗಳು ಬರುತ್ತವೆ.

ಅನಾದಿ ಕಾಲದಿಂದಲೂ ಬಹು ಬೆಳೆ ಪದ್ಧತಿ ಮತ್ತು ವೈವಿಧ್ಯಮಯ ಆಹಾರ ಸೇವನೆ ಪದ್ಧತಿಯನ್ನು ಭಾರತೀಯರು ಅಳವಡಿಸಿಕೊಂಡಿದ್ದರು. ಪ್ರತಿನಿತ್ಯವು ತಮಗೆ ಬೇಕಾದ ಆಹಾರವನ್ನು ಬಿಸಿ ಬಿಸಿಯಾಗಿ ಅಡುಗೆ ಮನೆಯಲ್ಲಿ ತಯಾರಿಸಿಕೊಂಡು ತಿನ್ನುವ ಸಂಸ್ಕøತಿಯನ್ನು ಬೆಳೆಸಿಕೊಂಡಿದ್ದರು. ಆದರೆ ಇಂದು ಆ ಭಾಗದಲ್ಲಿ ಮೇಣಗಳಲ್ಲಿ ಮಾರಾಟವಾಗುವ ಆಹಾರವನ್ನು ದಿನಾಲು ಸೇವಿಸುತ್ತಿದ್ದೇವೆ.

ಈಗಾಗಲೆ ದೇಶದಲ್ಲಿ ಮಧುಮೇಹ, ಕ್ಯಾನ್ಸರ್, ಅಪೌಷ್ಠಿಕತೆ, ರಕ್ತಹೀನತೆ ಇತ್ಯಾದಿ ರೋಗಗಳಿಂದ ನರಳುತ್ತಿದ್ದು ಮೈದಾ ಹಿಟ್ಟಿನಂತಹ ಪದಾರ್ಥಗಳಿಂದ ಮಾಡಿದ ಬೇಕರಿ ತಿನಿಸುಗಳನ್ನು ಹೆಚ್ಚಾಗಿ ಉಪಯೋಗಿಸಿದಾಗ ಜನತೆಯ ಆರೋಗ್ಯ ಸ್ಥಿತಿ ಆಯೋಮಯವಾಗಲಿದೆ.

ಇದೇ ರೀತಿಯಲ್ಲಿ ನಮ್ಮ ಆಹಾರ ಕ್ರಮ ಮುಂದುವರಿದರೆ ನಮ್ಮ ಮಕ್ಕಳು, ಯುವಕ, ಯುವತಿಯರು, ಭೀಕರ ರೋಗಗಳಿಗೆ ಬಲಿಯಾಗುವ ಸಾಧ್ಯತೆ ಇರುತ್ತದೆ. ಆದುದರಿಂದ ದಯಮಾಡಿ ಎಚ್ಚೆತ್ತುಕೊಳ್ಳಿ ನಿಮ್ಮ ಆರೋಗು ನೀವು ತಿನ್ನುವ ಆಹಾರವನ್ನು ಅವಲಂಬಿಸಿಕೊಂಡಿದೆ, ಇಂದೆ ಎಚ್ಚೆತ್ತುಕೊಳ್ಳೋಣವೇ.

Leave a Reply

Your email address will not be published. Required fields are marked *

error: Content is protected !!