ಖರ್ಜೂರದ ಉಪಯೋಗ – ಡಾಕ್ಟರ್ ಟಿಪ್ಸ್
ಖರ್ಜೂರ ಒಂದು ಒಣ ಹಣ್ಣಾಗಿದ್ದು, ಈ ಹಣ್ಣಿನಲ್ಲಿ ಕಬ್ಬಿಣದ ಅಂಶ ಹೆಚ್ಚಾಗಿರುತ್ತದೆ ಅಲ್ಲದೆ ಇದರಲ್ಲಿ ಪೊಟಾಶಿಯಂ, ಪ್ರೊಟೀನ್, ಫೈಬರ್, ಕ್ಯಾಲ್ಸಿಯಂ, ವಿಟಮಿನ್ B ,A & C ದೊರೆಯುತ್ತದೆ ಖರ್ಜೂರದಲ್ಲಿ ತಾಮ್ರ ,ಮ್ಯಾಂಗನೀಸ್, ಮ್ಯಾಗ್ನೇಶಿಯಂ , ಸೆರನಿಯಂ , ಹಾಗೂ ಸತುವಿನ ಅಂಶವನ್ನು ಹೊಂದಿದೆ
ಸಂಸ್ಕೃತದಲ್ಲಿ ಖರ್ಜೂರ ಎಂದು ಕರೆಯುತ್ತಾರೆ ಇದು ರಕ್ತ ಚಲನೆಗೆ ಹಾಗೂ ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ .ಹಾಗೂ ಆರೋಗ್ಯಕರವಾದ ಉತ್ತಮ ಶಕ್ತಿ ವರ್ಧಕವನ್ನು ನೀಡುತ್ತದ್ದೆ, ಆಶ್ಚರ್ಯಕರವಾಗಿ ಮದ್ಯಪಾನ ಸೇವನೆಯನ್ನು ಹಾಗೂ ರಕ್ತಸ್ರಾವವನ್ನು ತಡೆಗಟ್ಟುವಲ್ಲಿ ಸಹಕರಿಸುತ್ತದೆ ..
ಖರ್ಜೂರ ದಲ್ಲಿರುವ ಔಷಧೀಯ ಗುಣಗಳು
1.ಖರ್ಜೂರದ ಪಾನೀಯ
ಖರ್ಜೂರದ ಪಾನೀಯ ಒಂದು ಒಳ್ಳೆಯ ಶಕ್ತಿವರ್ಧಕ ಪಾನೀಯ ಇದನ್ನು ಮಾಡುವ ವಿಧಾನ ಹೀಗಿದೆ 10 ಖರ್ಜೂರ ತೆಗೆದುಕೊಂಡು ಅದರ ಬೀಜವನ್ನು ಬೇರ್ಪಡಿಸಿ ನಂತರ ಅದರ ಗಟ್ಟಿಯಾದ ಭಾಗವನ್ನು ತೆಗೆದು ಸಣ್ಣದಾಗಿ ಕತ್ತರಿಸಿಕೊಳ್ಳಿ ಅದಕ್ಕೆ ಒಂದು ಕಪ್ಪ್ ನಷ್ಟು ಹಾಲನ್ನು ಸೇರಿಸಿ ರುಬ್ಬಿಕೊಳ್ಳಿ ಈ ಪಾನೀಯವನ್ನು ಕುಡಿಯುವುದರಿಂದ ರಕ್ತ ಹೀನತೆ ,ಆಯಾಸ, ಕೆಲಸದ ಒತ್ತಡ, ನರಗಳ ಉರಿಯೂತ, ದೇಹ ಸುಡುವುದು ಇಂತಹ ತೊಂದರೆಗಳಿಂದ ದೂರವಾಗಲು ಸಹಕಾರಿಯಾಗುತ್ತದೆ…
2 ಖರ್ಜೂರದ ಲಾಡು
ಈ ಲಾಡು ಬಾಯಿಗೆ ಎಷ್ಟು ರುಚಿಯೋ ಆರೋಗ್ಯಕ್ಕೂ ಅಷ್ಟೇ ಉಪಕಾರಿ ಅದರಲ್ಲೂ ಮಕ್ಕಳಿಗಂತೂ ಇದರ ಉಪಯೋಗ ಹೇಳತೀರದು. ಈ ಲಾಡು ಮಾಡುವ ವಿಧಾನವು ಸುಲಭ ಖರ್ಜೂರದ ಬೀಜಗಳನ್ನು ಬೇರ್ಪಡಿಸಿ ಅದಕ್ಕೆ ಸಮನಾದ ಗೇರು ಬೀಜದ ಪುಡಿ, ಹುರಿದ ನೆಲಗಡಲೆ ಬೀಜದ ತುಂಡು, ಒಣದ್ರಾಕ್ಷಿ ಹಾಕಿ ಅದಕ್ಕೆ ಎಂಟು ಪಟ್ಟಿನಷ್ಟು ಬೆಲ್ಲವನ್ನು ಹಾಕಿ ರುಬ್ಬಿ ನಂತರ ಇದಕ್ಕೆ ಸ್ವಲ್ಪ ಜೇನುತುಪ್ಪ ಅಥವಾ ತುಪ್ಪವನ್ನು ಹಾಕಿ ಕಲಿಸಿ ಈ ಮಿಶ್ರಣವನ್ನು ಉಂಡೆ ಅಥವಾ ಲಾಡು ತರಹ ಮಾಡಿಕೊಳ್ಳಿ ಇದನ್ನು ದಿನ ಬೆಳಿಗ್ಗೆ ಹಾಗೂ ಸಂಜೆ ಬೆಳೆಯುವ ಮಕ್ಕಳಿಗೆ ತಿನ್ನಲು ಕೊಡುವುದರಿಂದ ಅವರ ದೇಹಕ್ಕೆ ಬೇಕಾಗುವ ಶಕ್ತಿಯನ್ನು ಪೂರೈಸುತ್ತದೆ ಹಾಗೂ ಮಕ್ಕಳ ಬೆಳವಣಿಗೆ ಆರೋಗ್ಯ ಸಂತೋಷದಾಯಕವಾಗಿ ಇರಲು ತುಂಬಾ ಸಹಕಾರಿಯಾಗುತ್ತದೆ
3. ಮಹಿಳೆಯರಿಗೆ ಖರ್ಜೂರ ಅಮೃತ
50 ಖರ್ಜೂರವನ್ನು ತೆಗೆದು ಅದರ ಬೀಜ ಬೇರ್ಪಡಿಸಿ 100 ಮಿಲಿ ತುಪ್ಪ ಹಾಗೂ 80 ಮಿಲಿ ಜೇನುತುಪ್ಪ ತೆಗೆದುಕೊಂಡು ಅದಕ್ಕೆ ಸ್ವಲ್ಪ ಕೇಸರಿ ಕಲಿಸಿ ಇದರೊಂದಿಗೆ ಖರ್ಜೂರವನ್ನು ನೆನೆಸಿಕೊಳ್ಳಿ..
ಇಂತಹ ಖರ್ಜೂರವನ್ನ ದಿನಕ್ಕೆ 1 ರಿಂದ 2 ತಿನ್ನುವುದರಿಂದ ಶಕ್ತಿ ವೃದ್ಧಿಸುತ್ತದೆ ಹಾಗೂ ಗರ್ಭಿಣಿಯರಿಗೆ ತುಂಬಾ ಸಹಕಾರಿಯಾಗಿದೆ ಜೊತೆಗೆ ಋತುಚಕ್ರ ಮುಗಿಯುವ ಮಹಿಳೆಯರಿಗೆ ತುಂಬಾ ಪರಿಣಾಮಕಾರಿಯಾಗಿದೆ
4.ಗಂಟು ನೋವು ನಿವಾರಣೆ
5 -6 ಖರ್ಜೂರವನ್ನು ತೆಗೆದುಕೊಂಡು ಅದರ ಬೀಜವನ್ನು ತೆಗೆದು ನಂತರ ಗೋಧಿ ಹಿಟ್ಟು ತೆಗೆದು ಅದನ್ನು ಕಲಿಸಿಕೊಳ್ಳಿ ನಂತರ ಚಪಾತಿ ಥರ ಲಟ್ಟಿಸಿ ಅದರ ಮಧ್ಯದಲ್ಲಿ ಖರ್ಜೂರವನ್ನು ಸೇರಿಸಿ ಮತ್ತೆ ಉಂಡೆ ತರಹ ಮಾಡಿ ಹೀಗೆ ಮಾಡಿದ ನಂತರ ಅದನ್ನು ನೇರವಾಗಿ ಬೆಂಕಿಯಲ್ಲಿ 3-5 ನಿಮಿಷಗಳ ಕಾಲ ಬೇಯಿಸಿಕೊಳ್ಳಿ. ಬೆಂದ ನಂತರ ಗೋಧಿ ಹಿಟ್ಟನ್ನು ಬೇರ್ಪಡಿಸಿ ಅದಲ್ಲಿರುವ ಖರ್ಜೂರವನ್ನು ತೆಗೆದು ದಿನಕ್ಕೆ 5 ರಿಂದ 6 ಖರ್ಜೂರವನ್ನು ತಿನ್ನುವುದರಿಂದ ಮೂಳೆ ನೋವು ಗಂಟುನೋವು ಸಂಧಿವಾತ ಮುಂತಾದ ರೋಗಗಳಿಂದ ತಪ್ಪಿಸಿಕೊಳ್ಳಬಹುದು
ಖರ್ಜೂರ ತಿನ್ನುವುದರಿಂದ ಅನೇಕ ರೋಗಗಳಿಂದ ಮುಕ್ತಿ ಪಡೆಯಬಹುದು
ಡಾ. ರಾಜೇಶ್ ಬಾಯಾರಿ
ಚಿತ್ರಕೂಟ ಆಯುರ್ವೇದ
ಚಿತ್ತೂರು www.chithrakoota.com