ಹಾಗಲಕಾಯಿ ಪಲ್ಯ

ಬೇಕಾದ ಸಾಮಾಗ್ರಿ ಗಳು
ಹಾಗಲಕಾಯಿ-4
ಹುಣಸೆಹಣ್ಣು- ನಿಂಬೆ ಗಾತ್ರ
ಬೆಲ್ಲ-ಸುಮಾರು ದೊಡ್ಡ ನಿಂಬೆ ಗಾತ್ರ
ಉಪ್ಪು-ರುಚಿಗೆ ತಕ್ಕ
ಹಸಿಮೆಣಸು-4
ತೆಂಗಿನ ತುರಿ-2tsp
ಅಚ್ಚಕಾರದ ಪುಡಿ-1tsp
ಎಣ್ಣೆ-3tsp
ಒಗ್ಗರಣೆ ಗೆ-ಉದ್ದಿನಬೇಳೆ, ಸಾಸಿವೆ, ಕರಿಬೇವು,
ಮಾಡುವ ವಿಧಾನ:-   ಮೊದಲು ಹಾಗಲಕಾಯಿ ಯನ್ನು  ಸಣ್ಣ ಹೋಳುಗಳನ್ನಾಗಿ ಹೆಚ್ಚಿಟ್ಟು ಕೊಳ್ಳಿ ನಂತರ ಪಾತ್ರೆ ಗೆ ಹುಣಸೆಹಣ್ಣಿನ ರಸ,ಬೆಲ್ಲ, ಉಪ್ಪು ಹಾಕಿ  ಈ ಮಿಶ್ರಣ ಕುದಿಯುವಾಗ ಹೆಚ್ಚಿದ ಹಾಗಲಕಾಯಿ ಹಸಿಮೆಣಸು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಸಣ್ಣ ಉರಿಯಲ್ಲಿ ಮುಚ್ಚಿ ಬೇಯಿಸಬೇಕು  ನಂತರ ಇದಕ್ಕೆ ಒಗ್ಗರಣೆ ಮಾಡಬೇಕು…
ಒಗ್ಗರಣೆ ಗೆ ಉದ್ದಿನಬೇಳೆ ಸಾಸಿವೆ ಕರಿಬೇವು ಹಾಕಿ ಇದಕ್ಕೆ ಮೆಣಸಿನ ಪುಡಿ ತೆಂಗಿನ ತುರಿ ಹಾಕಿ ಸ್ವಲ್ಪ ಬಾಡಿಸಿ ಬೆಂದ ಪಲ್ಯಕ್ಕೆ ಮಿಕ್ಸ್ ಮಾಡುವುದು……
ಪವಿತ್ರ ರಾವ್
ಬ್ರಹ್ಮಾವರ

Leave a Reply

Your email address will not be published. Required fields are marked *

error: Content is protected !!