ಪತ್ರೊಡೆ

ಆಷಾಢ ಮಾಸದಲ್ಲಿ ಹಾಗೂ ಶ್ರಾವಣ ಮಾಸದಲ್ಲಿ ಎಲ್ಲರಿಗೂ ಪ್ರಿಯವಾದ ತಿನಿಸು ಎಂದರೆ ಅದು ಪತ್ರೊಡೆ , ಇದನ್ನು ತಿನ್ನ ಬೇಕೆಂಬ ಹಂಬಲ ಎಲ್ಲರಲ್ಲೂ ಇರುತ್ತದೆ ಆದರೆ ಮಾಡುವ ವಿಧಾನ ಹೇಗೆ ಎಂಬುದು ತಿಳಿದಿರುವುದಿಲ್ಲ ಹಾಗಾಗಿ ಈ ಬಾರಿ ಉಡುಪಿ ಟೈಮ್ಸ್ ನಲ್ಲಿ ನಿಮಗಾಗಿ ಪತ್ರೊಡೆ ಮಾಡುವ ವಿಧಾನ

ಪತ್ರೊಡೆ ಮಾಡಲು ಬೇಕಾಗುವ ಸಾಮಗ್ರಿ
ಅಕ್ಕಿ -ಸೋನಾ ಮಸೂರಿ – 2 ಲೋಟ
ಕೊತ್ತಂಬರಿ- 6 ರಿಂದ 8 ಟೀ ಸ್ಪೂನ್ ( ಒಂದು ಮುಷ್ಟಿ)
ಮೆಣಸು- 25 ರಿಂದ 30 ಕುಮಟಿ ಮೆಣಸು
ಜೀರಿಗೆ- 6 ಸ್ಪೂನ್ (ಅರ್ಧ ಮುಷ್ಟಿ )
ಉದ್ದಿನಬೇಳೆ – 6 ರಿಂದ 8 ಟೀ ಸ್ಪೂನ್ ( ಒಂದು ಮುಷ್ಟಿ)
ಮೆಂತೆ- 2 ಸ್ಪೂನ್
ತೆಂಗಿನಕಾಯಿ- 3/4 ಹೋಳು
ಬೆಲ್ಲ – ರುಚಿಗೆ ತಕಷ್ಟು
ಹುಣಸೆ ಹಣ್ಣು- ದೊಡ್ಡಅಡಿಕೆ ಗಾತ್ರದಷ್ಟು
ಇಂಗು- 2 ಕಡಲೆ ಬೀಜದಷ್ಟು
ಉಪ್ಪು -ರುಚಿಗೆ ತಕ್ಕಷ್ಟು
ತೆಂಗಿನ ಎಣ್ಣೆ- ಸ್ವಲ್ಪ

ಮಾಡುವ ವಿಧಾನ

ಮೊದಲು ಅಕ್ಕಿಯನ್ನು 1/2 ಗಂಟೆಯ ಮೊದಲು ನೆನೆಸಿಡಿ
ನಂತರ ಉದ್ದಿನ ಬೇಳೆ, ಇಂಗು, ಮೆಂತೆಯನ್ನು ತೆಂಗಿನ ಎಣ್ಣೆಯಲ್ಲಿ ಹುರಿದುಕೊಳ್ಳಿ (ಉದ್ದಿನ ಬೇಳೆ ಕೆಂಪಾಗುವವರೆಗೆ) ,
ಮಿಕ್ಸಿಗೆ ತುರಿದ ತೆಂಗಿನ ಕಾಯಿ, ಕೊತ್ತಂಬರಿ, ಜೀರಿಗೆ, ಮೆಣಸು, ಹುರಿದ ಉದ್ದಿನಬೇಳೆ, ಮೆಂತೆ, ಇಂಗನ್ನು ಹಾಕಿ ಪುಡಿ ಮಾಡಿ, ಆಮೇಲೆ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ (ಸಾಮಾನ್ಯವಾಗಿ ಉದ್ದಿನ ದೋಸೆ ಹಿಟ್ಟಿನ ಹದಕ್ಕೆ ಅಥವಾ ಅದಕ್ಕಿಂತ ಸ್ವಲ್ಪ ಗಟ್ಟಿಯಾಗಿ ರುಬ್ಬಿಕೊಳ್ಳಿ ) ನಂತರ ಅದಕ್ಕೆ ತೊಳೆದ ಅಕ್ಕಿಯನ್ನು ಹಾಕಿ ಅಕ್ಕಿ ರವೆಯ ಹದಕ್ಕೆ ರುಬ್ಬಿಕೊಳ್ಳಿ ಈ ಹಿಟ್ಟನ್ನು ಮೊದಲೆ ಸ್ವಚ್ಛ ಮಾಡಿಟ್ಟ ಕೆಸುವಿನ ಎಲೆಗೆ ಹಚ್ಚಿ ಒಂದರ ಮೇಲೆ ಒಂದರಂತೆ ಎರಡು ಮೂರು ಎಲೆಗಳನ್ನು ಇಟ್ಟು ಎರಡು ಬದಿಗಳನ್ನು ಮಡಿಚಿ ಎರಡು ಬದಿಗಳ ಮೇಲೆ ಈ ಹಿಟ್ಟನ್ನು ಹಚ್ಚಿಕೊಂಡು ಚಾಪೆ ಹಾಗೆ ಮಡಚಿ ಹಿಂದಿನ ಕಾಲದಲ್ಲಿ ಹೇಳುವಂತೆ ಪತ್ರೊಡೆ ಹಿಟ್ಟನ್ನು ಎಲೆಗೆ ಹಚ್ಚುವುದು ಒಂದು ಕಲೆ ಎಂದು ಮಡಚಿದ ಪತ್ರೊಡೆಯ ಎಲೆಗಳನ್ನು ಬೇಯಲು ಇಡ್ಲಿ ಪಾತ್ರೆಯಲ್ಲಿ ಇಡಬೇಕು ಸಾಧಾರಣ 3/4 ಗಂಟೆಯಿಂದ 1 ಗಂಟೆವರೆಗೆ ಬೇಯಿಸಿದರೆ ರುಚಿಯಾದ ಪತ್ರೊಡೆ ಸವಿಯಲು ಸಿದ್ಧ … ಇದೆ ಮಿಶ್ರಣಕ್ಕೆ ಪಾಲಕ್ ಸೊಪ್ಪು, ಕ್ಯಾಬೇಜ್ ನ್ನು ಕೂಡ ಹಾಕಿ ತಯಾರಿಸಬಹುದು, ಮಳೆಗಾಲದಲ್ಲಿ ಪತ್ರೊಡೆ ಉತ್ತಮವಾದ ತಿನಿಸು

ಅನುರಾಧಾ ಹೊಳ್ಳ
ಮೊಡಂಕಾಪು

Leave a Reply

Your email address will not be published. Required fields are marked *

error: Content is protected !!