ಅನ್ನಭಾಗ್ಯಕಡಿತದ ಹುನ್ನಾರ , ತೀವ್ರ ಪ್ರತಿಭಟನೆ- ಕಾಂಗ್ರೆಸ್ ನಿರ್ಧಾರ
ಮಂಗಳೂರು – ಕೇಂದ್ರದ ಪ್ರದಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಗೆ ರಾಜ್ಯ ಸರ್ಕಾರದಿಂದ ಹಣ ನೀಡಲು ರಾಜ್ಯದ ಒಂದು ಕೋಟಿ ಇಪ್ಪತ್ತು ಲಕ್ಷ ಕುಟುಂಬಗಳಿಗೆ ತಿಂಗಳ ಒಂದಕ್ಕೆ ವ್ಯಕ್ತಿಯೋರ್ವನಿಗೆ 7 ಕೆ.ಜಿ ಉಚಿತ ಅಕ್ಕಿ ವಿತರಣೆ ಮಾಡುವ ಯೋಜನೆಗೆ ಕತ್ತರಿ ಹಾಕಿ ಆ ಮೂಲಕ ಬಡವರ ಹಸಿವನ್ನು ನಿಯಂತ್ರಿಸಿ ೨೮೫೦ ಕೋಟಿ ರೂಪಾಯಿ ಉಳಿಕೆ ಮಾಡಲು ಬಡವರ ಹಸಿವಿನ ಮೇಲೆ ಸವಾರಿ ಮಾಡಲು ಹೊರಟ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಪ್ರತಿಭಟನೆ ಮಾಡಲಾಗುವುದು ಬಡವರು ಅನ್ನ ಭಾಗ್ಯದ ಯೋಜನೆಯಿಂದ ಇವತ್ತು ಬದುಕಿ ಉಳಿದಿರುವುದು ತೀವ್ರ ಬರಗಾಲ ಬಂದಿದ್ದರೂ ತಮ್ಮ ಭೂಮಿಯಲ್ಲಿ ಧನಸಹಾಯ ಮಾಡಿ 2 ಹೊತ್ತು ಊಟ ಮಾಡುವ ಪರಿಸ್ಥಿತಿ ನಿರ್ಮಾಣ ಮಾಡಿದ ದೇಶದಲ್ಲೇ ಏಕೈಕ ಜನಪರ ಯೋಜನೆ ಅನ್ನಭಾಗ್ಯ ಕಾರ್ಯಕ್ರಮ. ಅನ್ನಭಾಗ್ಯ ಯೋಜನೆಗೆ ಯಾವುದೇ ರೀತಿಯ ತೊಂದರೆ ಮಾಡಿದರೆ ಕ್ಷಮಿಸುವುದಿಲ್ಲ ಎಂದು ಐವನ್ ಡಿಸೋಜರವರು ತಮ್ಮ ಪತ್ರಿಕೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ರಾಜ್ಯ ಸರಕಾರವು ಏಕ ಪಾತ್ರಾಭಿನಯ ಮೂಲಕ ರಾಜ್ಯದಲ್ಲಿ ಅಧಿಕಾರಿಗಳ ದರ್ಬಾರು ನಡೆಯುತ್ತಿದೆ. ರಾಜ್ಯದಲ್ಲಿ ಹಿಂದೆಂದೂ ಇಂತಹ ಪರಿಸ್ಥಿತಿ ನಿರ್ಮಾಣವಾಗಿಲ್ಲ. ಬಡವರ ಬಗ್ಗೆ ಕಾಳಜಿ ಇಲ್ಲದೆ ಜನರನ್ನು ನಿರ್ಲಕ್ಷಿಸಲಾಗುತ್ತಿದೆ. ರಾಜ್ಯದ ಕಾಂಗ್ರೆಸ್ ಆಡಳಿತದಲ್ಲಿ ಕೈಗೊಂಡ ಯಾವುದೇ ಕಾರ್ಯಕ್ರಮವನ್ನು ರದ್ದು ಹಾಗೂ ಮೊಡಕುಗೊಳಿಸಿದರೆ ರಾಜ್ಯದಲ್ಲಿ ತೀವ್ರವಾದ ವಿರೋಧ ವ್ಯಕ್ತಪಡಿಸಲಾಗುವುದು ಎಂದು ಐವನ್ ಡಿಸೋಜರವರು ತಿಳಿಸಿದ್ದಾರೆ.