ಕರ್ನಾಟಕ ರಾಷ್ಟ್ರ ಸಮಿತಿ ನೂತನ ರಾಜಕೀಯ ಪಕ್ಷ ಅಸ್ಥಿತ್ವಕ್ಕೆ

ಕರ್ನಾಟಕ ರಾಷ್ಟ್ರ ಸಮಿತಿ ಎಂಬ ನೂತನ ರಾಜಕೀಯ ಪಕ್ಷದ‌ ಅಧಿಕೃತ ಸ್ಥಾಪನೆ 10 /08/2019 ರಂದು ಬೆಂಗಳೂರಿನ ಧನಂಜಯ ಪ್ಯಾಲೆಸ್ನಲ್ಲಿ ನಡೆಯಿತು ,ದೀಪ ಬೆಳಗಿಸಿ ಮಾತನಾಡಿದ ಸ್ವಾತಂತ್ರ್ಯ ಹೋರಾಟಗಾರ ಶತಾಯುಷಿ ಶ್ರೀ ದೊರೆಸ್ವಾಮಿಯವರು ಕಾಂಗ್ರೆಸ್ ಬಿಜೆಪಿ ಜೆಡಿಸ್ ಗೆ ಪರ್ಯಾಯವಾಗಿ ರಾಜಕೀಯ ಪಕ್ಷದ ಅನಿವಾರ್ಯತೆ ಇದ್ದು ಕೆಆರ್ಎಸ್ ಪಕ್ಷ ಹೊಸತನವನ್ನು ಪ್ರತಿಪಾದಿಸಲಿ ಎಂದು ಶುಭ ಹಾರೈಸಿದರು .

ಎಸ್ ಆರ್ ಹೀರೆಮಠ್, ಸುಪ್ರೀಮ್ ಕೋರ್ಟ್ ನ್ಯಾಯವಾದಿ ಶ್ರೀ ಧನಂಜಯ್ ಶುಭ ಕೋರಿದರು , ಸ್ವಚ್ಛ ,ಜನಪರ ರಾಜಕೀಯ ಕ್ಕೋಸ್ಕರ ಇದನ್ನು ಹುಟ್ಟು ಹಾಕಲಾಗಿದೆ ,ಜಾತಿ ಹಾಗೂ ಹಣಬಲದ ಪ್ರಭಾವ ಇಲ್ಲದೆ ಪಕ್ಷಕ್ಕೆ ನಿಷ್ಠರಾಗಿರುವ ಕಾರ್ಯಕರ್ತರಿಗೆ ನ್ಯಾಯ ಒದಗಿಸುವ ಪಕ್ಷ ಇದಾಗಿದೆ ಎಂದು ಅಧ್ಯಕ್ಷೀಯ ಭಾಷಣದಲ್ಲಿ ಪಕ್ಷದ ಅಧ್ಯಕ್ಷರಾದ ಶ್ರೀ ರವಿ ಕೃಷ್ಣ ರೆಡ್ಡಿಯವರು ಹೇಳಿದರು .

ಈ ಸಂದರ್ಭದಲ್ಲಿ ಮಾತನಾಡಿದ ಪಕ್ಷದ ಉಪಾಧ್ಯಕ್ಷರಾದ ಅಮೃತ್ ಶೆಣೈ ಯವರು ಪಕ್ಷ ಬಲವರ್ಧನೆಗೆ  ರಾಜ್ಯ ರಾಷ್ಟ್ರ ಸಂಚಾರ ಮಾಡಿದರೂ ಕರ್ನಾಟಕದ ಕರಾವಳಿಯಲ್ಲಿ ಪಕ್ಷವನ್ನು ಗೆಲ್ಲಿಸುವುದು ತನ್ನ ಆದ್ಯತೆ ಆಗಿರುತ್ತದೆ ಎಂದರು ,ಲಿಂಗೇಗೌಡರು ,ದೀಪಕ್, ಅರವಿಂದ್,ವೇಣುಗೋಪಾಲ್,ರಘುಪತಿ,ಮತ್ತಿತರರು ಉಪಸ್ಥಿತರಿದ್ದರು .

Leave a Reply

Your email address will not be published. Required fields are marked *

error: Content is protected !!