ಉಡುಪಿ: ‘ಬ್ಲಷ್ ಸೆಲಾನ್’ ಬ್ಯೂಟಿ ಪಾರ್ಲರ್ ಶುಭಾರಂಭ

ಉಡುಪಿ ಅ.30(ಉಡುಪಿ ಟೈಮ್ಸ್ ವರದಿ):ಸೌಂದರ್ಯ ಪ್ರಿಯರಿಗೊಂದು ಸಿಹಿಸುದ್ದಿ, ಉಡುಪಿಯಲ್ಲಿ ನೂತನವಾಗಿ “ಬ್ಲಷ್ ಸೆಲಾನ್” ಎಂಬ ಬ್ಯೂಟಿ ಪಾರ್ಲರ್ ನಾಳೆ ಬೆಳಿಗ್ಗೆ 10.30 ಕ್ಕೆ ಶುಭಾರಂಭಗೊಳ್ಳಲಿದೆ.

ಮಿಷನ್ ಕಾಂಪೌಂಡ್ ನ ಯುಬಿಎಂ ಜುಬಿಲಿ ಕಾಂಪ್ಲೆಕ್ಸ್ ನ ಮೊದಲ ಮಹಡಿಯಲ್ಲಿ ನೂತನವಾಗಿ ಆರಂಭಗೊಳ್ಳುತ್ತಿರುವ ಬ್ಯೂಟಿ ಪಾರ್ಲರ್ ನ್ನು ಚಾಲ್ರ್ಸ್ ಮಾಬೆನ್ ಉದ್ಘಾಟಿಸಲಿದ್ದಾರೆ. ಬ್ಯೂಟಿ ಪಾರ್ಲರ್ ಉದ್ಘಾಟನಾ ಸಮಾರಂಭದಲ್ಲಿ ಯುಬಿಎಂ ಜೂಬ್ಲಿ ಚರ್ಚ್ ಧರ್ಮಗುರು ರೆ. ಸಂತೋಷ್ ಎ., ಸಂಸ್ಥೆಯ ಮಾಲಕರಾದ ದೀಪ ಮಾಬೆನ್ ಹಾಗೂ ಅವರ ಕುಟುಂಬಸ್ಥರು ಭಾಗವಹಿಸಲಿದ್ದಾರೆ.

ಈ ನೂತನ ಬ್ಯೂಟಿ ಪಾರ್ಲರ್ ವಾರದ ಎಲ್ಲಾ ದಿನವೂ ಕಾರ್ಯಚರಿಸಲಿದ್ದು, ಬೆಳಿಗ್ಗೆ 9.30 ರಿಂದ 7.30 ವರೆಗೆ ತೆರೆದು ಕೊಂಡಿರುತ್ತದೆ. ಇಲ್ಲಿ ಫೇಶಿಯಲ್, ಸ್ಟ್ರೈಟ್ನಿಂಗ್, ಕೆರಿಟಿನ್ ಸೇರಿದಂತೆ ಸೌಂದರ್ಯ ವರ್ಧನೆಯ ಎಲ್ಲಾ ರೀತಿಯ ಸೌಲಭ್ಯಗಳು ಸಿಗಲಿದೆ.

Leave a Reply

Your email address will not be published. Required fields are marked *

error: Content is protected !!