ಬಾಗಲಕೋಟೆ: ಕಾಲುವೆಗೆ ಉರುಳಿ ಬಿದ್ದ ಕಾರು : ನಾಲ್ವರ ಸಾವು

ಬಾಗಲಕೋಟೆ, ಅ.22: ಮುಧೋಳದ ಹಲಕಿ ಗ್ರಾಮದಲ್ಲಿನ ಘಟಪ್ರಭಾ ಕಾಲುವೆಗೆ ಕಾರೊಂದು ಉರುಳಿ ಬಿದ್ದು ನಾಲ್ವರು ಮೃತಪಟ್ಟ ಘಟನೆ ನಡೆದಿದೆ.

ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಬೀಡಕಿ ಗ್ರಾಮದ ಸುನೀಲ್ ಸದಪ್ಪ ಆರೆಬಿಂಚಿ (24), ಗುಡಮ್ಮನಾಳ ಗ್ರಾಮದ ಮಹಾದೇವಗೌಡ ಶಂಕರಗೌಡ ಪಾಟೀಲ (27), ಮುದೇನಕೊಪ್ಪ ಗ್ರಾಮದ ಎರ್ರಿತಾತಾ ಮೌನೇಶ ಕಂಬಾರ (26) ಹಾಗೂ ರಾಮಾಪುರ ಗ್ರಾಮದ ವಿಜಯ ಶಿವಾನಂದ ಲಟ್ಟಿ (26) ಮೃತಪಟ್ಟವರು

ಚಾಲಕನ ನಿಯಂತ್ರಣ ತಪ್ಪಿ ಘಟನೆ ನಡೆದಿದ್ದು, ಘಟನೆಯಲ್ಲಿ ಕಾರಿನಲ್ಲಿದ್ದ ಈರಣ್ಣಾ ಘಾಠಿ ಮತ್ತು ಫರಾನಾ ಅತ್ತಿಕಾ ಎಂಬವರು ಈಜಿಕೊಂಡು ದಡ ಸೇರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಗೊಂಡಿದ್ದ ಇವರನ್ನು ಮುಧೋಳ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮುಧೋಳದಿಂದ ರಾಮಾಪುರ ಕಡೆಗೆ ಬರುತ್ತಿದ್ದ ಕಾರು ಕಲ್ಲೊಂದಕ್ಕೆ ಡಿಕ್ಕಿಯಾದ ಪರಿಣಾಮ ರಸ್ತೆ ಬದಿಯಲ್ಲಿದ್ದ ಘಟಪ್ರಭಾ ಕಾಲುವೆಗೆ ಉರುಳಿಬಿದ್ದಿದೆ ಎನ್ನಲಾಗಿದೆ. ಈ ಬಗ್ಗೆ ಲೋಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!