ಬ್ರಹ್ಮಾವರ: ಅನಧಿಕೃತ ಕೋವಿ ಹೊಂದಿದ ವ್ಯಕ್ತಿ ವಶಕ್ಕೆ

ಬ್ರಹ್ಮಾವರ ಸೆ.22 (ಉಡುಪಿ ಟೈಮ್ಸ್ ವರದಿ) : ಚೇರ್ಕಾಡಿಯಲ್ಲಿ ವ್ಯಕ್ತಿಯೊಬ್ಬರು ಲೈಸೆನ್ಸ್ ಹೊಂದಿದ ಕೋವಿಯೊಂದಿಗೆ ಅನಧಿಕೃತವಾಗಿ ಮತ್ತೊಂದು ಕೋವಿಯನ್ನು ಹೊಂದಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಇದೀಗ ಪೊಲೀಸರು ಅನಧಿಕೃತ ಕೋವಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಜಯನಾಯ್ಕ ಯಾನೆ ಜಯಂತ ನಾಯ್ಕ (46) ಅನಧಿಕೃತ ಆಯುಧ ಹೊಂದಿದ್ದ ವ್ಯಕ್ತಿ. ಸ್ಥಳದಲ್ಲಿ ವ್ಯಕ್ತಿಯ ವಶದಲ್ಲಿದ್ದ ಲೈಸೆನ್ಸ್ ಹೊಂದಿದ್ದ ಕೋವಿ, ಅನಧಿಕೃತ ಕೋವಿ, 22 ಸೀಸದ ಬಾಲ್ (ಗುಂಡು)ಗಳು, 5 ಕೇಪು, ಚೂಪಾಗಿರುವ 7 ಸೀಸದ ಬಾಲ್‍ಗಳು ಹಾಗೂ ಇತರ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಸೆ.21 ರಂದು ಬ್ರಹ್ಮಾವರ ಠಾಣೆಯ ಪೊಲೀಸ್ ಉಪನಿರೀಕ್ಷಕ ಗುರುನಾಥ ಬಿ. ಹಾದಿಮನಿ ಇವರಿಗೆ ಚೇರ್ಕಾಡಿ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಲೈಸನ್ಸ್ ಹೊಂದಿದ ಆಯುಧದೊಂದಿಗೆ ಅನಧೀಕೃತವಾಗಿ ಇನ್ನೊಂದು ಆಯುಧವನ್ನು ಹೊಂದಿರುವ ಬಗ್ಗೆ ಬಂದ ಮಾಹಿತಿ ಮೇರೆಗೆ, ಇತರ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿ ಮನೆಯನ್ನು ಶೋಧಿಸಿದಾಗ ಮನೆಯ ಕೋಣೆಯ ಕಪಾಟಿನ ಪಕ್ಕದಲ್ಲಿ ಆರೋಪಿಯು ಬಚ್ಚಿಟ್ಟಿದ್ದ 2 ಕೋವಿಗಳು ದೊರೆತಿದೆ. ಕೋವಿಗಳನ್ನು ಪರಿಶೀಲಿಸಿದಾಗ 2 ಕೂಡ ಒಂದೇ ಮಾದರಿಯಂತೆ ಕಂಡು ಬಂದಿರುತ್ತದೆ. ಈ ಬಗ್ಗೆ ಆರೋಪಿಯ ಬಳಿ ಕೇಳಿದಾಗ ಎರಡು ಕೋವಿಗಳ ಪೈಕಿ ಒಂದು ಕೋವಿಯು ಜಿಲ್ಲಾಧಿಕಾರಿಯವರಿಂದ ಪಡೆದ ಲೈಸನ್ಸ್ UDI/273/3 ಸಂಖ್ಯೆಯ SBML ಕೋವಿಯಾಗಿರುತ್ತದೆ ಎಂಬುವುದಾಗಿ ತಿಳಿಸಿರುತ್ತಾನೆ. ಈ ವೇಳೆ ಇನ್ನೊಂದು ಕೋವಿಯ ಬಗ್ಗೆ ವಿಚಾರಿಸಿದಾಗ ಅದು ಅನಧಿಕೃತವಾದ ಕೋವಿ ಆಗಿದ್ದು, ಯಾರಿಗೂ ಸಂಶಯ ಬರದಿರಲಿ ಎಂದು ಆಯುದ ಸಂಖ್ಯೆ UDI/273/3ಎಂದು ಹಾಕಿಸಿರುತ್ತೇನೆ ಎಂದು ಆರೋಪಿ ತಪ್ಪನ್ನು ಒಪ್ಪಿಕೊಂಡಿರುತ್ತಾನೆ. ಈ ಮೂಲಕ ಆರೋಪಿಯು ಪರಿಶೀಲನಾ ಅಧಿಕಾರಿಗಳಿಗೆ ವಂಚನೆ ಮಾಡುವ ಉದ್ದೇಶದಿಂದ ಲೈಸನ್ಸ್ ಹೊಂದಿರುವ ಆಯುಧವನ್ನು ಹೋಲುವಂತಹ ಅನಧಿಕೃತ ಕೋವಿಯನ್ನು ಹೊಂದಿರುವುದು ದೃಢಪಟ್ಟಿದ್ದು , ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!