ಗುರು ಮುಖೇನ ಕಲಿಯದ ವಿದ್ಯೆ ಶಾಶ್ವತವಲ್ಲ: ವಿದ್ವಾನ್ ಗಣಪತಿ ಭಟ್

ಕೋಟ (ಉಡುಪಿ ಟೈಮ್ಸ್ ವರದಿ): ನಿರಂತರ ಕಲಿಕೆಯು ಸ್ಥಾನವನ್ನು ಹೆಚ್ಚಿಸುತ್ತದೆ. ಪ್ರಸಿದ್ಧಿಗಾಗಿ ಕಲಿಕೆ ಇರಬಾರದು. ಕಲಿಕೆಯಲ್ಲಿ ಶೃದ್ಧೆ ಇರಬೇಕು. ಗುರು ಮುಖೇನ ಕಲಿಯದ ವಿದ್ಯೆ ಶಾಶ್ವತವಲ್ಲ. ಕಲಿಯುವ ಆಸಕ್ತರು ರಾಗದ ಸಂಚಾರವನ್ನು ಸರಿಯಾಗಿ ಅರಿತು ಸಂಗೀತವನ್ನು ಕಲಿತು ಹಾಡುವಲ್ಲಿ ತೊಡಗಿಸಿಕೊಂಡರೆ ಪರಿಪೂರ್ಣವಾದ ಹಾಡುಗಾರಿಕೆ ಎಂದೆನಿಸಿಕೊಳ್ಳುತ್ತದೆ ಎಂದು ಪ್ರಸಿದ್ಧ ಭಾಗವತ ವಿದ್ವಾನ್ ಗಣಪತಿ ಭಟ್ ಹೇಳಿದರು.
ತೆಕ್ಕಟ್ಟೆ ಹಯಗ್ರೀವ ಕಲ್ಯಾಣ ಮಂಟಪದಲ್ಲಿ ಯಶಸ್ವಿ ಕಲಾವೃಂದ ಕೊಮೆ, ತೆಕ್ಕಟ್ಟೆ ಇದರ ಆಶ್ರಯದಲ್ಲಿ ನಡೆಯುವ ಯಕ್ಷಗಾನ ಹಿಮ್ಮೇಳ ತರಗತಿಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಶಿಸ್ತುಪಾಲನೆಯನ್ನು ಅನುಸರಿಸಿದರೆ ಶೃದ್ಧೆ ಇಟ್ಟುಕೊಂಡರೆ ಕಲಿಕೆಯಲ್ಲಿ ಮುಂದಕ್ಕೆ ಹೋಗಲು ಸಾಧ್ಯ. ಸಮುದ್ರದಲ್ಲಿನ ಅಮೂಲ್ಯ ವಸ್ತುವಿಗಾಗಿ ಆಳಕ್ಕೆ ಇಳಿಯುವಂತೆ ಕಲಿಕೆಯ ಆಳಕ್ಕೆ ಇಳಿದರೆ ನಿಜವಾಗಿ ಫಲಶೃತಿ ಆಗುವುದು ಎಂದು ಉಪನ್ಯಾಸಕ ಸುಜಯೀಂದ್ರ ಹಂದೆ ಪ್ರಾಸ್ತಾವಿಕ ಮಾತಿನಲ್ಲಿ ವಿವರಿಸಿದರು.
ತೆಕ್ಕಟ್ಟೆ ಕೇಂದ್ರದ ಗುರುಗಳಾದ ಪ್ರಾಚಾರ್ಯ ಕೆ.ಪಿ. ಹೆಗಡೆ, ಯಕ್ಷದೇಗುಲದ ಕೋಟ ಸುದರ್ಶನ ಉರಾಳ, ಶ್ರೀ ಕೈಲಾಸ ಕಲಾಕ್ಷೇತ್ರದ ಅಧ್ಯಕ್ಷ ಸೀತಾರಾಮ ಶೆಟ್ಟಿ ಕೊಕೂರು, ಯಶಸ್ವಿ ಕಲಾವೃಂದದ ಅಧ್ಯಕ್ಷ ಉಪಸ್ಥಿತರಿದ್ದರು. ಗುರು ದೇವದಾಸ್ ರಾವ್ ಪ್ರಾರ್ಥನೆಗೈದು, ಗುರು ಲಂಬೋದರ ಹೆಗಡೆ ಸ್ವಾಗತಿಸಿದರು. ಉಪನ್ಯಾಸಕ ರಾಘವೇಂದ್ರ ತುಂಗ ನಿರೂಪಣೆಗೈದರು.

ತೆಕ್ಕಟ್ಟೆ ಹಯಗ್ರೀವ ಕಲ್ಯಾಣ ಮಂಟಪದಲ್ಲಿ ಯಶಸ್ವಿ ಕಲಾವೃಂದ ಕೊಮೆ, ತೆಕ್ಕಟ್ಟೆ ಇದರ ಆಶ್ರಯದಲ್ಲಿ ನಡೆಯುವ ಯಕ್ಷಗಾನ ಹಿಮ್ಮೇಳ ತರಗತಿಯನ್ನು ಪ್ರಸಿದ್ಧ ಭಾಗವತ ವಿದ್ವಾನ್ ಗಣಪತಿ ಭಟ್ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಉಪನ್ಯಾಸಕ ಸುಜಯೀಂದ್ರ ಹಂದೆ, ತೆಕ್ಕಟ್ಟೆ ಕೇಂದ್ರದ ಗುರುಗಳಾದ ಪ್ರಾಚಾರ್ಯ ಕೆ.ಪಿ. ಹೆಗಡೆ, ಯಕ್ಷದೇಗುಲದ ಕೋಟ ಸುದರ್ಶನ ಉರಾಳ, ಶ್ರೀ ಕೈಲಾಸ ಕಲಾಕ್ಷೇತ್ರದ ಅಧ್ಯಕ್ಷ ಸೀತಾರಾಮ ಶೆಟ್ಟಿ ಕೊಕೂರು, ಯಶಸ್ವಿ ಕಲಾವೃಂದದ ಅಧ್ಯಕ್ಷ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!