ಉಡುಪಿ: ಡಾ. ವಿ.ಎಸ್ ಆಚಾರ್ಯ ಉಡುಪಿಯ ಅಭಿವೃದ್ಧಿಗೆ ಸದಾ ಶ್ರಮಿಸಿದವರು: ಶೆಟ್ಟರ್

ಉಡುಪಿ ಜು.6( ಉಡುಪಿ ಟೈಮ್ಸ್ ವರದಿ): ಮಣಿಪಾಲ ಸಿಂಡಿಕೇಟ್ ಸರ್ಕಲ್ ನಿಂದ ಜಿಲ್ಲಾಧಿಕಾರಿ ಕಚೇರಿ ವರೆಗಿನ ರಸ್ತೆಗೆ ಡಾ. ವಿ.ಎಸ್ ಆಚಾರ್ಯ ರಸ್ತೆ ಎಂದು ನಾಮಕರಣ ಮಾಡಲಾಗಿದೆ. ಈ‌ ರಸ್ತೆಗೆ ಈಗಾಗಲೇ ಡಾ. ವಿ. ಎಸ್. ಆಚಾರ್ಯ ರಸ್ತೆ ಎಂದು ಈಗಾಗಲೇ ನಾಮಕರಣ ಮಾಡಿದ್ದು, ಇಂದು ಅವರ ಜನ್ಮದಿನದಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರಾದ ಜಗದೀಶ್ ಶೆಟ್ಟರ್ ಅವರೊಂದಿಗೆ ಶಾಸಕ ಕೆ ರಘುಪತಿ ಭಟ್ ರವರು ನಾಮ ಫಲಕದ ಉದ್ಘಾಟನೆ ನೆರವೇರಿಸಿ ಅಧಿಕೃತವಾಗಿ ಘೋಷಣೆ ಮಾಡಿದರು.

ಇದೇ ವೇಳೆ ಡಾll ವಿ.ಎಸ್ ಆಚಾರ್ಯ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದರು. ಈ ವೇಳೆ ಸಚಿವ ಜಗದೀಶ್ ಶೆಟ್ಟರ್ ಅವರು ಮಾತನಾಡಿ, ಡಾ. ವಿ ಎಸ್ ಆಚಾರ್ಯ ಅವರದ್ದು ಮೇರು ವ್ಯಕ್ತಿತ್ವ. ಅವರು ಪಕ್ಷ ನಿಷ್ಠೆ ಹೊಂದಿದ್ದವರು
ತಳಮಟ್ಟ ದಲ್ಲಿ ಪಕ್ಷ ಸಂಘಟನೆ ಮಾಡುವ ಮೂಲಕ ಉಡುಪಿಯ ಅಭಿವೃದ್ಧಿ ಗೆ ಸದಾ ಶ್ರಮಿಸಿದವರು. ಅಗತ್ಯ ಸಂದರ್ಭದಲ್ಲಿ ಕಠಿನ ನಿರ್ಧಾರ ಗಳನ್ನು ಕೈಗೊಳ್ಳುವ ಮೂಲಕ ಗೃಹ ಇಲಾಖೆ ಯನ್ನು ಯಶಸ್ವಿ ಯಾಗಿ ನಿರ್ವಹಿಸದವರು ಡಾ. ವಿ.ಎಸ್ ಆಚಾರ್ಯ ಅವರ ಪರಿಶ್ರಮದ ಫಲವಾಗಿ ಇಂದು ಕರ್ನಾಟಕ ರಾಜ್ಯದಲ್ಲಿ ಜನಸಂಘ ಸಂಘಟಿತವಾಗಿ ನಗರ ಸಭೆ,ಪುರ ಸಭೆ ನಮ್ಮ ಕೈಯಲ್ಲಿರುವ ಪ್ರದೇಶವೆಂದರೆ ಅದು ಉಡುಪಿ ನಗರ ಸಭೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.

ಇದೇ ವೇಳೆ ಶಾಸಕ ರಘುಪತಿ ಭಟ್ ಅವರು ಮಾತನಾಡಿ,ಅಗಲೀಕರಣ ಸಾಧ್ಯ ವಿಲ್ಲ ಎಂದಿದ್ದ 18 ಫೀಟ್ ಅಗಲದ ರಸ್ತೆಯನ್ನು ಅಭಿವೃದ್ಧಿಪಡಿಸುವ ಸಲುವಾಗಿ ಜಿಲ್ಲೆಯಲ್ಲಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದ ಪ್ರಥಮ ಕ್ಯಾಬಿನೆಟ್ ಸಭೆಯಲ್ಲಿ ನಿರ್ಧಾರ. ರಸ್ತೆ ಅಭಿವೃದ್ಧಿ ಗೆ 16 ಕೋಟಿ ರೂ ಅನುದಾನ ಬಿಡುಗಡೆ ಮಾಡಿ ರಸ್ತೆ ಅಗಲೀಕರಣ ಮಾಡಿದರ ಪರಿಣಾಮವೇ ಇಂದು ಉಡುಪಿ ಮಣಿಪಾಲ ರಸ್ತೆ ವಾಣಿಜ್ಯ ರಸ್ತೆಯಾಗಿ ಮಾರ್ಪಟ್ಟಿದೆ.

ಇದರ ಜೊತೆಗೆ ಸರಕಾರದ ಪರವಾಗಿ ಸರಕಾರದ ಜಾಗವನ್ನು ಉಳಿಸಿಕೊಳ್ಳಬೇಕು ನಿರ್ಧಾರ ಮಾಡಿ ಜಿಲ್ಲಾಧಿಕಾರಿ ಸಂಕೀರ್ಣ ನಿರ್ಮಾಣದ ಕಾರ್ಯದಲ್ಲಿಯೂ ಡಾ.ವಿಎಸ್ ಆಚಾರ್ಯ ಅವರ ಪಾತ್ರ ಪ್ರಮುಖವಾಗಿದೆ.
ಅವರು 2006 ರಿಂದ 2012 ರ ವರೆಗೆ ಈಭಾಗದ ಅಭಿವೃದ್ಧಿ ಗಾಗಿಯೇ ಶ್ರಮಿಸಿದ್ದರು.ಅವರು ಅಜಾತ ಶತ್ರು ವಾಗಿದ್ದರು. ಅವರ ದೈವಾದೀನರಾಗಿದ್ದ ಸಂದರ್ಭದಲ್ಲಿ ವಿರೋಧ ಪಕ್ಷವಾದ ಕಾಂಗ್ರೆಸ್ ಕಚೇರಿಯಲ್ಲೂ ಅವರ ಶ್ರದ್ಧಾಂಜಲಿ ಸಭೆ ನಡೆದಿರುವುದು ಅವರ ಮೇರು ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿದೆ.

ಅವರು ಕಾರ್ಯಕರ್ತರನ್ನು ಸಂಘಟಿಸುವ ಮೂಲಕ ಕಾರ್ಯಕರ್ತರಿಗೆ ಮಾರ್ಗದರ್ಶಕರಾಗಿ, ಗುರಯವಾಗಿ ಪ್ರೇರಣೆ ನೀಡಿದ್ದರು. ರಸ್ತೆಯ ವಿಚಾರದಲ್ಲಿ ಪಕ್ಷ ಬೇಧ ಮರೆತು ಅಭಿವೃದ್ಧಿ ಯ ಪರವಾಗಿ ಇರಬೇಕು ಎಂದು ಹೇಳುತ್ತಿದ್ದರು ಎಂದು ಶಾಸಕರು ನೆನಪಿಸಿಕೊಂಡರು.

ಸಸ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ : ನಗರ ಬಿಜೆಪಿ ವತಿಯಿಂದ ಪಕ್ಷದ ಸಂಸ್ಥಾಪಕ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಜನ್ಮದಿನದ ಸ್ಮರಣಾರ್ಥ ಇಂದು ಮಣಿಪಾಲದ ಈಶ್ವರ ನಗರದಲ್ಲಿ ಉಚಿತ ಸಸ್ಯ ವಿತರಣಾ ಸಸ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶೆಟ್ಟರ್ ನಾಗರಿಕರಿಗೆ ಉಚಿತ ಗಿಡಗಳನ್ನು ನೀಡುವ ಈ ಕಾರ್ಯಕ್ರಮ ಇಡೀ ದೇಶದಲ್ಲಿ ಮಾದರಿ ಕೆಲಸವಾಗಿದೆ. ಹಸಿರೀಕರಣ ಹಾಗೂ ಪರಿಸರಕ್ಕೆ ನಾವು ಆಧ್ಯತೆ ನೀಡಿದರೆ ಯಾವ ಕೊರೋನಾ ನಮ್ಮ ಹತ್ತಿರ ಸುಳಿಯುವುದಿಲ್ಲ. ಇದೇ ರೀತಿ ರಾಷ್ಟ್ರ ಮಟ್ಟದಲ್ಲಿ ಸಸ್ಯೋತ್ಸವ ಕಾರ್ಯಮ ನಡೆಸಿದರೆ ಮುಂದಿನ ದಿನಗಳಲ್ಲಿ ಉತ್ತಮವಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಟ್ಟಾರು ರತ್ನಾಕರ ಹೆಗ್ಡೆ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಾಘವೇಂದ್ರ ಕಿಣಿ, ಉಡುಪಿ ನಗರ ಸಭೆಯ ಅಧ್ಯಕ್ಷರಾದ ಸುಮಿತ್ರಾ ಆರ್ ನಾಯಕ್, ಉಪಾಧ್ಯಕ್ಷರಾದ ಲಕ್ಷ್ಮೀ ಮಂಜುನಾಥ ಕೊಳ, ನಗರ ಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಗಿರೀಶ್ ಅಂಚನ್, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ ಪಾಲ್ ಸುವರ್ಣ, ಬಿಜೆಪಿ ಜಿಲ್ಲಾಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್, ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷರಾದ ವೀಣಾ ಶೆಟ್ಟಿ ಮತ್ತು ಜಿಲ್ಲಾಧಿಕಾರಿಗಳ ಜಿ ಜಗದೀಶ್, ನಗರ ಸಭೆಯ ಅಧಿಕಾರಿಗಳು ಹಾಗೂ ನಗರ ಸಭೆಯ ಸದಸ್ಯರು ಮತ್ತು ಡಾ. ವಿ. ಎಸ್ ಆಚಾರ್ಯರ ಪುತ್ರರಾದ ಕಿರಣ್ ಆಚಾರ್ಯ, ರವಿರಾಜ್ ಆಚಾರ್ಯ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!