ಪುನಃ ದರ್ಶನ ಪ್ರಾಪ್ತಿ : ಭಕ್ತರಿಗಾಗಿ ಮತ್ತೇ ತೆರೆಯಿತು ದೇವಾಲಯಗಳ ಬಾಗಿಲು

ಉಡುಪಿ ಜು.5 (ಉಡುಪಿ ಟೈಮ್ಸ್ ವರದಿ) : ಕೋವಿಡ್ ಎರಡನೇ ಅಲೆಯ ಹೊಡೆತಕ್ಕೆ ಸಿಲುಕಿದ ಕರ್ನಾಟಕದಲ್ಲಿ ಎಲ್ಲಾ ಪುಣ್ಯ ಕ್ಷೇತ್ರಗಳು ಅನೇಕ ದಿನಗಳಿಂದ ಮುಚ್ಚಿದ್ದು ಇಂದಿನಿಂದ (ಜು 5 ) ತೆರೆದುಕೊಳ್ಳಲಿದೆ. ಯಾತ್ರಾರ್ಥಿಗಳ ಪುಣ್ಯ ಸ್ಥಳ, ಅದೇ ರೀತಿ ಜಿಲ್ಲೆಯ ಪ್ರಸಿದ್ಧ ಆನೆಗುಡ್ಡೆ ದೇವಸ್ಥಾನವೂ ಇಂದಿನಿಂದ ಭಕ್ತರ ಪ್ರವೇಶಕ್ಕೆ ಮುಕ್ತವಾಗಿದೆ.

ಅತೀ ಹೆಚ್ಚು ಭಕ್ತರು,ಹಾಗೂ ಪ್ರವಾಸಿಗರು ಭೇಟಿ ನೀಡುವ ಧಾರ್ಮಿಕ ಕೇಂದ್ರಗಳಲ್ಲಿ ಆನೆಗುಡ್ಡೆ ದೇವಸ್ಥಾನ ಕೂಡಾ ಒಂದು. ಆದರೆ ಇಂದು ದೇವಸ್ಥಾನ ತೆರೆದುಕೊಂಡಿದ್ದರೂ ದೇವಸ್ಥಾನ ದಲ್ಲಿ ಯಾವುದೇ ವಿಶೇಷ ಪೂಜೆ ಹಾಗೂ ಪ್ರಸಾದ ವಿತರಣೆ ಇರುವುದಿಲ್ಲ

ಇನ್ನೂ ದೇವಸ್ಥಾನದಲ್ಲಿ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಮಾಸ್ಕ್ ಧರಿಸುವುದು. ಸಾಮಾಜಿಕ‌ ಅಂತರ ಪಾಲನೆ ಯನ್ನು ಕಡ್ಡಾಯ ಗೊಳಿಸಲಾಗಿದೆ. ಯಾವುದೇ ಸೇವೆಗಳಿಗೆ ಮುಂದಿನ ಆದೇಶದವರೆಗೆ ಲಭ್ಯವಿರುವುದಿಲ್ಲ .ದಯವಿಟ್ಟು ಭಕ್ತಾಧಿಗಳು ಕೋವಿಡ್ ನಿಯಮದ ಅನ್ವಯ ದೇವಾಲಯಕ್ಕೆ ಬಂದು ದೇವರ ದರ್ಶನ ಪಡೆದು ಕೊಳ್ಳಬೇಕಾಗಿ ದೇವಾಲಯದ ಆಡಳಿತ ಧರ್ಮಾದರ್ಶಿಗಳಾದ ಶ್ರೀರಮಣ ಉಪಧ್ಯಾಯ ರವರು ಉಡುಪಿ ಟೈಮ್ಸ್ ಗೆ ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!