ಸ್ಮರಣ ಶಕ್ತಿ ಹೆಚ್ಚಿಸಿಕೊಳ್ಳಬೇಕಾ ಹಾಗಾದ್ರೆ ಇದನ್ನ ತಿನ್ನಿ
ಇಂದಿನ ಒತ್ತಡದ ಜೀವನದಲ್ಲಿ ಮಾನವನ ದೇಹ ಮತ್ತು ಮನಸ್ಸಿಗೆ ಎರಡಕ್ಕೂ ವಿಶ್ರಾಂತಿ ಇಲ್ಲದಂತಾಗಿದೆ. ಇಂತಹ ಸಮಯದಲ್ಲಿ ಹಲವಾರು ಒತ್ತಡಗಳಿಗೆ ಸಿಲುಕಿರುವ ವ್ಯಕ್ತಿಗೆ ಜ್ಞಾಪಕ ಶಕ್ತಿಯೂ ಕಡಿಮೆಯಾಗುತ್ತಾ ಹೋಗುತ್ತದೆ. ಸ್ಮರಣ ಶಕ್ತಿ ಹೆಚ್ಚಾಗಿರಬೇಕಾದರೆ ನಾವು ತಿನ್ನುವ ಆಹಾರಗಳೂ ಕೂಡ ನಮ್ಮ ಮೇಲೆ ಪರಿಣಾಮ ಬೀರುತ್ತವೆ.
ನೆನಪಿನ ಶಕ್ತಿ ಹೆಚ್ಚಿಸಲು ಉತ್ತಮ ಪದಾರ್ಥವೆಂಧರೆ ಒಂದೆಲಗ. ಇದನ್ನು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದರಿಂದ ನಮ್ಮ ನೆನಪಿನ ಶಕ್ತಿ ಅಧಿಕವಾಗುತ್ತದೆ ಎಂದು ಹೇಳುತ್ತಾರೆ. ಅದೇರೀತಿ ಒಂದೆಲಗ ಸೊಪ್ಪನ್ನು ಪ್ರತಿದಿನ ಊಟವಾದ ನಂತರ ತಿನ್ನುವುದರಿಂದ ಅಜೀರ್ಣ ಸಮಸ್ಯೆ ದೂರವಾಗಿ ತಿಂದ ಆಹಾರ ಚೆನ್ನಾಗಿ ಜೀರ್ಣವಾಗುತ್ತದೆ. ಆಹಾರವನ್ನು ಸರಿಯಾದ ಸಮಯಕ್ಕೆ, ಸರಿಯಾದ ಕ್ರಮದಲ್ಲಿ ತಿನ್ನದೇ ಇರುವುದರಿಂದ ಕೆಲವೊಮ್ಮೆ ಅಜೀರ್ಣ ಸಮಸ್ಯೆ ಉಂಟಾಗುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಒಂದೆಲಗ ಸೇವನೆ ಉತ್ತಮವಾಗಿದೆ.





