ಸ್ಥಳ ಮಹಜರು ವೇಳೆ ಪೋಕ್ಸೋ ಪ್ರಕರಣದ ಆರೋಪಿ ಪೊಲೀಸರಿಗೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನ

ಉಡುಪಿ ಜು.13(ಉಡುಪಿ ಟೈಮ್ಸ್ ವರದಿ): ಪೋಕ್ಸೋ ಪ್ರಕರಣದ ಆರೋಪಿಯೋರ್ವ ಸ್ಥಳ ಮಹಾಜರು ಮೇಳೆ ಪೊಲೀಸರಿಗೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಘಟನೆ 80 ಬಡಗುಬೆಟ್ಟು ಗ್ರಾಮದ ತಾಂಗೋಡು 2ನೇ ಕ್ರಾಸ್  ಹಾಡಿ  ಬಳಿಯಲ್ಲಿ ನಡೆದಿದೆ.

ಉತ್ತರ ಪ್ರದೇಶ ಮೂಲದ ಮಣಿಪಾಲದ ನಿವಾಸಿ ಮೊಹಮ್ಮದ್ ದಾನೀಶ್ (29) ಪ್ರಕರಣದ ಆರೋಪಿ.  

ಜು.8 ರಂದು ಮಹಿಳಾ ಪೊಲೀಸ್  ಠಾಣೆಯಲ್ಲಿ ದಾಖಲಾದ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿ ಜು.13 ರಂದು ಉಡುಪಿಯ 80 ಬಡಗುಬೆಟ್ಟು ಗ್ರಾಮದ ತಾಂಗೋಡು 2ನೇ ಕ್ರಾಸ್  ಹಾಡಿ  ಬಳಿಯಲ್ಲಿ ಕೃತ್ಯವೆಸಗಿದ  ಸ್ಥಳವನ್ನು ಪಂಚನಾಮೆ ಮಾಡಲಾಗುತ್ತಿತ್ತು. ಈ ವೇಳೆ ಆರೋಪಿ ಮೊಹಮ್ಮದ್  ದ್ಯಾನೀಶ್ ನು ಆತನಿಗೆ  ಕೈಕೊಳ ಹಿಡಿದುಕೊಂಡಿದ್ದ ಪಿಸಿ ರಿತೇಶ್ ರವರ ಎದೆಗೆ ಎರಡೂ ಕೈಗಳಿಂದ ಗುದ್ದಿ ದೂಡಿ ನೆಲಕ್ಕೆ ಬೀಳಿಸಿ ಅಲ್ಲಿಯೇ ಇದ್ದ ಲ್ಯಾಟ್ರೇಟ್ ಸೈಜ್‌ ನ ಕಲ್ಲನ್ನು ಪಿಸಿ ರಿತೇಶ್ ರವರ ಮೇಲೆ ಎತ್ತಿಹಾಕಲು ಯತ್ನಿಸಿದ್ದಾನೆ. ಆಗ ಪೊಲೀಸ್ ನಿರೀಕ್ಷಕರರಾದ ರಾಮಚಂದ್ರ ನಾಯಕ್‌ರವರು ತಡೆದಾಗ ಅವರ ಮೇಲೂ ಕಲ್ಲು ಎತ್ತಿ ಹಾಕಲು ಬಂದಿರುತ್ತಾನೆ. ಆ ಸಮಯ  ಲಾಠಿಯಿಂದ ಆತನ ಕಾಲಿಗೆ  ಹೊಡೆದು, ಅವನನ್ನು ನಿಯಂತ್ರಿಸಿದ್ದು, ಉಳಿದ ಸಿಬ್ಬಂದಿಗಳು ಆತನನ್ನು ಹಿಡಿದಿರುತ್ತಾರೆ. ಈ ಸಂದರ್ಭದಲ್ಲಿ ಗಾಯಗೊಂಡ ಸಿಬ್ಬಂದಿ  ಪಿಸಿ ರಿತೇಶ್ ಹಾಗೂ ಆರೋಪಿ  ಮೊಹಮ್ಮದ್  ಡಾನೀಶ್‌‌ರವರನ್ನು  ಚಿಕಿತ್ಸೆಗಾಗಿ ಉಡುಪಿ ಜಿಲ್ಲಾ ಆಸ್ಪತ್ರೆಗೆ  ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!