ಪ್ರಿಯದರ್ಶಿನಿ ಕ್ರೆಡಿಟ್ ಕೋ-ಆ.ಸೊಸೈಟಿ ಉದ್ಘಾಟನೆ

ಉಡುಪಿ: ಪ್ರಿಯದರ್ಶಿನಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಉದ್ಘಾಟನೆ ಕಾರ್ಯಕ್ರಮ ಶ್ರೀಕೃಷ್ಣ ಮಠದ ಪಾರ್ಕಿಂಗ್ ಪ್ರದೇಶ ಸಮೀಪದ ಮಥುರ ಗೋಕುಲ ಜಯಕೃಷ್ಣ ಕಲಾಭವನದಲ್ಲಿ ರವಿವಾರ ನಡೆಯಿತು.

ಸಭೆ ಉದ್ಘಾಟಿಸಿ, ಸೊಸೈಟಿ ಲೋಗೋ ಬಿಡುಗಡೆ ಗೊಳಿಸಿದ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ದೇಶಕ್ಕೆ ಬಹುದೊಡ್ಡ ಕೊಡುಗೆ ನೀಡಿದ ಇಂದಿರಾ ಗಾಂಧಿಯವರಿಗೆ ನೀಡಿರುವ ಬಿರುದು ‘ಪ್ರಿಯದರ್ಶಿನಿ’. ಇದೇ ಹೆಸರಿನಲ್ಲಿ ಆರಂಭಗೊಂಡ ಸೊಸೈಟಿಯಿಂದ ಬಡವರಿಗೆ ಆರ್ಥಿಕ ಸೌಲಭ್ಯ ದೊರಕಿ ಬಡತನ, ಅನಕ್ಷರತೆ ನಿರ್ಮೂಲನೆಗೊಂಡು ಆರ್ಥಿಕವಾಗಿ ಸುದೃಢವಾಗಿ ಬೆಳೆಯಲು ಪೂರಕವಾಗ ಬೇಕು. ತನ್ಮೂಲಕ ಇಂದಿರಾ ಗಾಂಧಿಯವರು ಕಂಡ ಕನಸು ನನಸಾಗಬೇಕಾಗಿದೆ.

ಸೊಸೈಟಿಯ ಲೋಗೋವು ‘ರೋಟಿ, ಮಖಾನ್, ಕಪಡಾ’ ಎಂದಿರುವುದರ ಉದ್ದೇಶವೂ ಅದೇ ಆಗಿದೆ. ಸೊಸೈಟಿ ಬಲಿಷ್ಠವಾಗಿ ಬೆಳೆಯುವುದರೊಂದಿಗೆ ಸಮಾಜದ ಆರ್ಥಿಕ ಮಟ್ಟದ ಸುಧಾರಣೆಗೆ ವಿಶೇಷ ಕೊಡುಗೆ ನೀಡಲಿ ಎಂದು ಆಶಿಸಿದರು. ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ಅವರು ಕೆ.ಎಂ ಮಾರ್ಗದ ಸೂಪರ್ ಬಜಾರ್‌ನಲ್ಲಿ ಸೊಸೈಟಿ ಉದ್ಘಾಟಿಸಿದರು.

ಪ್ರಥಮ ನಿರಖು ಠೇವಣಿ, ಪ್ರಥಮ ಉಳಿತಾಯ ಖಾತೆ, ನಿತ್ಯ ಠೇವಣಿ ಬಿಡುಗಡೆಗೊಳಿಸಿದ ಉದ್ಯಮಿ ಪ್ರಸಾದ್‌ರಾಜ್ ಕಾಂಚನ್ ಅವರು, ಸಮಾಜದ ಕಟ್ಟ ಕಡೆಯ ವ್ಯಕ್ತಿಗಳಿಗೆ ಹಣಕಾಸು ಸೌಲಭ್ಯ ಒದಗಿಸಿ ಅವರನ್ನು ಆರ್ಥಿಕವಾಗಿ ಬಲಗೊಳ್ಳುವಂತೆ ಮಾಡುವ ಸದುದ್ದೇಶದಿಂದ ಆರಂಭಗೊಂಡ ಸೊಸೈಟಿಯಿಂದ ಅತಿ ಅವಶ್ಯವಿರುವವರಿಗೆ ಸಕಾಲದಲ್ಲಿ ಸಾಲ ದೊರಕುವಂತಾಗಲಿ. ನಾಯಕತ್ವ ಸಮರ್ಥವಾಗಿದ್ದರೆ ಯಾವುದೇ ಸಂಸ್ಥೆ ಯಶಸ್ಸನ್ನು ಸಾಧಿಸಲಿದೆ. ಈ ನೆಲೆಯಲ್ಲಿ ಹಿರಿಯ ಸಹಕಾರಿಗಳ ನೇತೃತ್ವ, ಮಾರ್ಗದರ್ಶನದಿಂದ ಮುನ್ನಡೆಯಲಿರುವ ಸೊಸೈಟಿಯಿಂದ ಇಡೀ ಸಮಾಜಕ್ಕೆ ಆರ್ಥಿಕ ಶಕ್ತಿ ಲಭಿಸಲಿ ಎಂದರು.

ಉದ್ಯಮಿ ದಿನೇಶ್ ಹೆಗ್ಡೆ ಮೊಳಹಳ್ಳಿ ಅವರು ಪ್ರಥಮ ಮಾಸಿಕ ಠೇವಣಿ, ಪ್ರಥಮ ಗೃಹಲಕ್ಷ್ಮೀ ಠೇವಣಿ ಬಿಡುಗಡೆಗೊಳಿಸಿ ಶುಭಾಶಂಶನೆಗೈದರು. ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಡಾ ದೇವಿಪ್ರಸಾದ್ ಶೆಟ್ಟಿ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ದಿನಕರ ಹೇರೂರು

ಪ್ರಮುಖರಾದ ಲಾವಣ್ಯಾ ಬಲ್ಲಾಳ್, ಸೊಸೈಟಿ ನಿರ್ದೇಶಕರಾದ ನೀರೆ ಕೃಷ್ಣ ಶೆಟ್ಟಿ, ಪ್ರಭಾಕರ ಶೆಟ್ಟಿ, ಅನಿಲ್ ಪೂಜಾರಿ ಮಾಳ, ಸುರೇಶ್ ಶೆಟ್ಟಿ ಬನ್ನಂಜೆ, ಭರತ್ ಕುಮಾರ್ ಶೆಟ್ಟಿ ಕಾಳಾವರ, ಪ್ರಶಾಂತ್ ಜತ್ತನ್ನ, ಶಾನವಾಜ್ ಕುಕ್ಕಿಕಟ್ಟೆ, ಚಂದ್ರಿಕಾ ಶೆಟ್ಟಿ, ಆದರ್ಶ, ಸುರೇಂದ್ರ ರಾವ್, ಪಿ. ಶ್ರೀನಿವಾಸ ಅಮೀನ್, ಸಂಧ್ಯಾಾ ತಿಲಕ್‌ರಾಜ್, ಜಯರಾಮ ನಾಯ್‌ಕ್‌, ಗೀತಾ ವಾಗ್ಲೆ ಉಪಸ್ಥಿತರಿದ್ದರು. ಸೊಸೈಟಿ ಅಧ್ಯಕ್ಷ ಕೆ.ಅಣ್ಣಯ್ಯ ಶೇರಿಗಾರ್ ಸ್ವಾಗತಿಸಿ ಪ್ರಸ್ತಾವನೆಗೈದರು. ಉಪಾಧ್ಯಕ್ಷ ಶಿವಾಜಿ ಎಸ್. ಸುವರ್ಣ ವಂದಿಸಿದರು. ಸತೀಶ್ ಕೊಡವೂರು ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!