ಯಶೋಧ ಆಟೋ ಚಾಲಕರ ಮತ್ತು ಮಾಲಕರ ಸಂಘದ ವಾರ್ಷಿಕ ಸಭೆ
ಉಡುಪಿ: ಇತ್ತೀಚೆಗೆ ಯಶೋಧ ಆಟೋ ಚಾಲಕರ ಮತ್ತು ಮಾಲಕರ ಸಂಘದ ವಾರ್ಷಿಕ ಸಭೆಯು ಉಡುಪಿಯ ಕೃಷ್ಣಮಠ ಪಾರ್ಕಿ೦ಗ್ ಏರಿಯಾದಲ್ಲಿರುವ ಮಥುರ ಕಂಫರ್ಟ್ ಮಿನಿ ಹಾಲ್ ನಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಯಶೋಧ ಆಟೋ ಯುನಿಯನ್ ನ ಜಿಲ್ಲಾಧ್ಯಕ್ಷರಾದ ಕೆ.ಕೃಷ್ಣಮೂರ್ತಿ ಆಚಾರ್ಯ ಕಿನ್ನಿಮುಲ್ಕಿ ವಹಿಸಿದ್ದರು.
ವೇದಿಕೆಯಲ್ಲಿ ಆಟೋ ಯೂನಿಯನ್ ನ ಜಿಲ್ಲಾ ಉಪಾಧ್ಯಕ್ಷರಾದ ಮಹೇಶ್ ಮಲ್ಪೆ, ಯಶೋಧ ಆಟೋ ಯುನಿಯನ್ ನ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಪ್ರವೀಣ್ ಕು೦ಜಿಬೆಟ್ಟು, ಜಿಲ್ಲಾ ಜೊತೆ ಕಾರ್ಯದರ್ಶಿ ಹರೀಶ್ ಅಮೀನ್, ಜಿಲ್ಲಾ ಕೋಶಾಧಿಕಾರಿ ಸದಾಶಿವ ಪೂಜಾರಿ, ಜಿಲ್ಲಾ ಸದಸ್ಯರಾದ ದಿವಾಕರ್ ಪೂಜಾರಿ, ಸತೀಶ್ ಕೇದಾರ, ಹರೀಶ್ ಕಾಂಚನ್, ರವಿ ಸೇರಿಗಾರ್ ಜಿಲ್ಲಾ ಕಾನೂನು ಸಲಹೆಗಾರಾದ ಶ್ರೀನಿವಾಸ್ ಹೆಬ್ಬಾರ್ ಉಪಸ್ಥಿತರಿದ್ದರು.

ಸಭೆಯಲ್ಲಿ 2024- 2025ರ ಸಾಲಿನ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರವನ್ನು ಮoಡನೆ ಮಾಡಲಾಯಿತು. ಚಾಲಕರ ಮಕ್ಕಳಿಗೆ ಉಚಿತವಾಗಿ ನೋಟ್ ಬುಕ್ ವಿತರಣೆ ಮಾಡಲಾಯಿತು. ಸಭೆಯಲ್ಲಿ ನೂತನ ತಾಲೂಕು ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿಯನ್ನು ಮತ್ತು ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಯಶೋಧ ಆಟೋ ಯುನಿಯನ್ ನ ನೂತನ ಅಧ್ಯಕ್ಷರಾಗಿ ಉದಯ ಪ೦ದುಬೆಟ್ಟು, ಉಪಾಧ್ಯಕ್ಷರುಗಳಾಗಿ ಸತೀಶ್ ಉದ್ಯಾವರ, ಸಂತೋಷ್ ಎಸ್.ಕೆ ಎಮ್, ಸದಾನಂದ ಶೇರಿಗಾರ್ ಕಿನ್ನಿಮುಲ್ಕಿ, ಶೈಲೇಶ್ ಹಂಪನಕಟ್ಟೆ, ಕೃಷ್ಣರಾಜ್ ಪೆರಂಪಳ್ಳಿ, ಸಿರಿಲ್ ನೊರಾನ್ಹಾ ಅಂಬಾಗಿಲ ಕಾರ್ಯಾಧ್ಯಕ್ಷರು ಗೋಪಾಲ್ ಕೃಷ್ಣ ಶೆಟ್ಟಿ ರಥಬೀದಿ, ಪ್ರಧಾನ ಕಾರ್ಯದರ್ಶಿ, ಶ್ರೀನಿವಾಸ್ ಕಪೆಟ್ಟು, ಜೊತೆ ಕಾರ್ಯದರ್ಶಿ ಗಣೇಶ್ ಉದ್ಯಾವರ, ಕೋಶಾಧಿಕಾರಿ ನವೀನ್ ಅಂಚನ್, ಉದಯ್ ನಾಯಕ್ ಕರಂಬಳ್ಳಿ, ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಸುಧಾಕರ್ ಪರ್ಕಳ, ಸಂತೋಷ್ ಪಿತ್ರೋಡಿ , ಸಂದೀಪ್ ಅಮೀನ್ ಕಿನ್ನಿಮುಲ್ಕಿ , ಯೋಗೇಶ್ ಕಿನ್ನಿಮುಲ್ಕಿ, ಸುರೇಶ ಮಲ್ಪೆ, ಶ್ರೀಧರ್ , ಮಥುರಾ ಸ್ಟಾಂಡ್ ಕ್ರೀಡಾ ಕಾರ್ಯದರ್ಶಿ ಪ್ರವೀಣ್ ಆಚಾರ್ಯ, ಪ್ರಸಾದ್ ಕಿನ್ನಿಮುಲ್ಕಿ , ಗಣೇಶ್ ಸುವರ್ಣ, ಗಂಗಾಧರ್ ಪಿತ್ರೋಡಿ , ಸಾಯಿನಾಥ್ ಕಿನ್ನಿಮುಲ್ಕಿ ನಿಸಾರ್ , ರಮೇಶ್ ವಂದನ ರಜಾಕ್ ಗರಡಿಮಜಲ್ ಸಂಘಟನಾ ಕಾರ್ಯದರ್ಶಿಗಳಾಗಿ ರುಕ್ಮಯ್ ಬ್ರಹ್ಮಗಿರಿ, ದಿನೇಶ್ ಪೂಜಾರಿ, ಪ್ರಸಾದ್ ತಂತ್ರಿ, ಶಶಿಕಾಂತ್, ದಿನೇಶ್, ಶಮೀರ್, ಪುರುಷೋತ್ತಮ್ ನಾಯಕ್, ವಿಶ್ವನಾಥ್ ಪೂಜಾರಿ, ಜಯಪ್ರಕಾಶ್, ಯಲ್ಲಪ್ಪ, ಪ್ರವೀಣ್ ಭಂಡಾರಿ, ರಾಜೇಶ್, ಯಜ್ಞೇಶ್ ಬ್ರಹ್ಮಗಿರಿ , ನಾಗೇಶ್ , ಸುರೇಶ ಹೆಗ್ಡೆ ‘ಉದಯ್ ಕುಂದರ್ , ಕಾರ್ತಿಕ್ ಕಿನ್ನಿಮುಲ್ಕಿ ದಿನೇಶ್ ಮಧ್ವಾನಗರ ಆಯ್ಕೆಯಾದರು.
ಯಶೋಧ ಆಟೋ ಯೂನಿಯನ್ ನ ಸರ್ವಸದಸ್ಯರ ಸಮ್ಮುಖದಲ್ಲಿ ಯಶೋಧ ಆಟೋ ಯೂನಿಯನ್ ನ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಕಾರ್ಯಕ್ರಮ ನಿರೂಪಣೆಯನ್ನು ಸದಾಶಿವ ಪೂಜಾರಿ ನೆರವೇರಿಸಿದರು.





