ಮೈ ಕೈ ನೋವು ನಿಮ್ಮನ್ನ ಕಾಡ್ತಿದ್ರೆ ಈ ಸಿಂಪಲ್ ಟಿಪ್ಸ್ ಅನ್ನು ಉಪಯೋಗಿಸಿ..!

ಇಂದಿನ ಆಧುನಿಕ ದಿನಮಾನದಲ್ಲಿ ಮನುಷ್ಯನ ದೇಹಕ್ಕೆ ಬೇಕಾಗುವಷ್ಟು ವ್ಯಾಯಾಮ ಸಿಗದೇ ಆತ ಅನೇಕ ಸಮಸ್ಯೆಗಳಿಂದ ಬಳಲುತ್ತಿರುತ್ತಾನೆ. ದಿನದ 24ಗಂಟೆ ಪೂರ್ತಿಯಾಗಿ ಕುಳಿತುಕೊಂಡೇ ಕೆಲಸ ಮಾಡುವುದರಿಂದ ಆತನ ಮೈ ಜಡ್ಡುಕಟ್ಟಿದಂತಾಗಿದೆ. ಮೈ ಕೈ ನೊವಿನ ಸಮಸ್ಯೆ ಆತನನ್ನು ಕಾಡುತ್ತಿರುತ್ತದೆ. ಈ ವೇಳೆ ಆತ ಕೆಲವೊಂದು ಬಾಮ್‌ಗಳ ನೆರವಿಗೆ ಹೋಗುತ್ತಾನೆ. ಇಲ್ಲವಾದಲ್ಲಿ ಮೈ ಕೈ ನೋವಿನ ಮಾತ್ರೆಯನ್ನು ತೆಗೆದುಕೊಂಡು ನೋವನ್ನು ಸುಲಭವಾಗಿ ನಿವಾರಣೆ ಮಾಡಿಕೊಳ್ಳುವುದರ ಕಡೆಗೆ ಹೆಚ್ಚಿನ ಗಮನವನ್ನು ಹರಿಸುತ್ತಾನೆ. ಕೆಲವೊಮ್ಮೆ ಮನೆಮದ್ದಿನೊಂದ ಕೂಡ ಮೈ ಕೈ ನೋವನ್ನು ನಿವಾರಿಸಿಕೊಳ್ಳಬಹುದಾಗಿದೆ. ಹಾಗಾದ್ರೆ ಯಾವುದು ಆ ಮನೆಮದ್ದು ಅಂತಾ ಯಚಿಸ್ತಿದೀರಾ..? ಮುಂದಿನ ಮಾಹಿತಿ ಓದಿ…

ಇದಕ್ಕೆ ಬೇಕಾಗುವ ಪದಾರ್ಥ ಕೂಡ ಕಡಿಮೆ. ಎರಡು ನಿಂಬೆ ಹಣ್ಣಿನ ಸಿಪ್ಪೆ, ಸ್ವಲ್ಪ ಆಲಿವ್ ಆಯಿಲ್ ಹಾಗೂ ಒಂದು ಬಾಟಲಿ ಸಾಕು ನಿಮ್ಮ ಮೈ ಕೈ ನೋವನ್ನು ನಿವಾರಣೆ ಮಾಡಲು. ನಿಂಬೆ ಹಣ್ಣಿನ ಸಿಪ್ಪೆಗೆ ಸ್ವಲ್ಪ ಆಲಿವ್ ಆಯಿಲ್ ಹಾಕಿ ಬಾಟಲಿಯಲ್ಲಿ ಮುಚ್ಚಿಡಿ. ಮುಚ್ಚಳ ಗಟ್ಟಿಯಾಗಿರುವಂತೆ ನೋಡಿಕೊಳ್ಳಿ. ಎರಡು ವಾರಗಳ ನಂತರ ಅದನ್ನು ಹೊರಗೆ ತೆಗೆಯಿರಿ. ಈ ಮಿಶ್ರಣವನ್ನು ಒಂದು ರೇಷ್ಮೆ ಬಟ್ಟೆಯಲ್ಲಿ ಕೀಲು ನೋವಿರುವ ಜಾಗಕ್ಕೆ ಹಚ್ಚಿ ನಂತರ ಬ್ಯಾಂಡೇಜ್ ಮಾಡಿಕೊಳ್ಳಿ. 24 ಗಂಟೆಗಳ ತನಕ ಬ್ಯಾಂಡೇಜ್ ಹಾಗೆ ಇರಲಿ. ಹೀಗೆ ಮಾಡುವುದರಿಂದ ನಿಧಾನವಾಗಿ ನೋವು ಕಡಿಮೆಯಾದ ಅನುಭವ ನಿಮಗಾಗುತ್ತದೆ.

Leave a Reply

Your email address will not be published. Required fields are marked *

error: Content is protected !!