ಬಾಳೆಹಣ್ಣಿನ ಫೇಸ್ ಪ್ಯಾಕ್ ಬಳಸಿ ಮುಖದ ನೆರಿಗೆ ನಿವಾರಿಸಿ
ಇಂದಿನ ಆಧುನಿಕ ಜಗತ್ತಿನಲ್ಲಿ ಮನುಷ್ಯನ ದೈನಂದಿನ ಆಹಾರ ಕ್ರಮದಲ್ಲಾಗಲೀ, ಆರೋಗ್ಯ ಕಾಳಜಿ ತೆಗೆದುಕೊಳ್ಳುವುದರಲ್ಲಾಗಲೀ ಒಂದಿಷ್ಟೂ ಸಮಯವಿರುವುದಿಲ್ಲ. ಹೀಗಾಇ ಮನುಷ್ಯ ಬಹು ಬೇಗನೇ ಅನಾರೋಗ್ಯಕ್ಕೆ ತುತ್ತಾಗುವುದರ ಜೊತೆಗೆ ಯವ್ವನದಲ್ಲೇ ಮುದುಕರಂತೆ ಕಾಣುತ್ತಾರೆ.
ಸರಿಯಾಗಿ ಆಹಾರ ಸೇವನೆ ಮಾಡದಿದ್ದರೆ. ನೀರನ್ನು ಸರಿಯಾಗಿ ಕುಡಿಯದಿದ್ದರೆ ಮುಂತಾದ ಹಲವು ಕಾರಣಗಳಿಂದ ಮುಖದಲ್ಲಿ ನೆರಿಗೆಗಳು ಮೂಡುತ್ತವೆ. ಇದರಿಂದ ವಯಸ್ಸಾದವರಂತೆ ಕಾಣುತ್ತಾರೆ. ಈ ನೆರಿಗೆಗಳನ್ನು ಹೋಗಲಾಡಿಸಲು ಮನೆಯಲ್ಲಿಯೇ ತಯಾರಿಸಿದ ಈ ಫೇಸ್ ಪ್ಯಾಕ್ ಬಳಸುವುದರಿಂದ ಈ ಸಮಸ್ಯೆಯನ್ನು ನಿವಾರಿಸಬಹುದಾಗಿದೆ.

2 ಚಮಚ ಬಾಳೆಹಣ್ಣಿನ ತಿರುಳು, 1 ಟೇಬಲ್ ಸ್ಪೂನ್ ಮೊಸರು, 1 ಚಮಚ ನಿಂಬೆ ರಸ ಮೂರನ್ನು ಚೆನ್ನಾಗಿ ಮಿಕ್ಸ್ ಮಾಡಬೇಕು. ಈ ಫೇಸ್ ಪ್ಯಾಕ್ ಅನ್ನು ಮುಖಕ್ಕೆ ಹಚ್ಚಿ, 20 ನಿಮಿಷ ಬಿಟ್ಟು ತಣ್ಣೀರಿನಲ್ಲಿ ವಾಶ್ ಮಾಡಬೇಕು. ಈ ಫೇಸ್ ಪ್ಯಾಕ್ ಅನ್ನು ರಾತ್ರಿಯ ವೇಳೆ ವಾರದಲ್ಲಿ 2 ಬಾರಿ ಈ ಫೇಸ್ ಪ್ಯಾಕ್ ಬಳಸುವುದರಿಂದ ಮುಖದಲ್ಲಿ ಉಂಟಾಗುವ ನೆರಿಗೆಗಳು ಕಡಿಮೆಯಾಗುತ್ತವೆ.





