ಜ್ಯುವೆಲರಿ ಶಾಪ್ ಮಾಲೀಕನಿಗೆ ಗನ್ ತೋರಿಸಿ ದರೋಡೆ: ದರೋಡೆಕೋರರ ಬಂಧನಕ್ಕೆ ಐದು ವಿಶೇಷ ತಂಡ ರಚನೆ
ಕಲಬುರಗಿ: ಹಾಡಹಗಲೇ ಜ್ಯುವೆಲೆರಿ ಶಾಪ್ ಗೆ ನುಗ್ಗಿ ಗನ್ ತೋರಿಸಿ ಅಂಗಡಿ ಮಾಲೀಕನ ಕೈ ಕಾಲು ಕಟ್ಟಿ ಹಾಕಿ ಎರಡು ಕೆಜಿಗೂ ಅಧಿಕ ಬಂಗಾರ ದರೋಡೆ ಮಾಡಿರುವ ಘಟನೆ ಕಲಬುರಗಿ ನಗರದ ಸರಾಫ್ ಬಜಾರ್ ನಲ್ಲಿ ಶುಕ್ರವಾರ ನಡೆದಿದೆ.
ಮಾಲೀಕ್ ಜ್ಯುವೆಲೆರಿ ಶಾಪ್ ಗೆ ನುಗ್ಗಿದ ನಾಲ್ವರು ದುಷ್ಕರ್ಮಿಗಳು ಅಂಗಡಿ ಮಾಲೀಕನ ಕೈ ಕಾಲು ಕಟ್ಟಿ ಹಾಕಿ, ಗನ್ ತೋರಿಸಿ, ಹೆದರಿಸಿ ಎರಡು ಕೆಜಿಗೂ ಅಧಿಕ ಚಿನ್ನ ದರೋಡೆ ಮಾಡಿ ಪರಾರಿಯಾಗಿದ್ದಾರೆ. ಅಂಗಡಿಯಲ್ಲಿನ ಸಿಸಿಟಿವಿ ಡಿವಿಆರ್ ಆಫ್ ಮಾಡಿ ದರೋಡೆ ಮಾಡಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸ್ ಆಯುಕ್ತ ಡಾ.ಶರಣಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಮಾತನಾಡಿದ ಅವರು, ದರೋಡೆಕೋರರ ಬಂಧನಕ್ಕೆ ಐದು ವಿಶೇಷ ತಂಡಗಳನ್ನು ರಚನೆ ಮಾಡಿದ್ದು, ದರೋಡೆಕೋರರನ್ನು ಶಿಘ್ರವೇ ಬಂಧಿಸುವುದಾಗಿ ಹೇಳಿದ್ದಾರೆ.
ಈ ಬಗ್ಗೆ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.





