ಧರ್ಮಸ್ಥಳದ ಅಪರಾಧ ಕೃತ್ಯಗಳ ಬಗ್ಗೆ ಮಾಹಿತಿ ನೀಡಿದ ಸಾಕ್ಷಿಗೆ ರಕ್ಷಣೆ ನೀಡಿ: ಅನ್ನಪೂರ್ಣ ದೇವಿ
ಹೊಸ ದಿಲ್ಲಿ: ಧರ್ಮಸ್ಥಳ ಅಪರಾಧ ಕೃತ್ಯಗಳ ಬಗ್ಗೆ ವಿಸ್ತೃತ ತನಿಖೆ ನಡೆಸಿ, ಈ ಬಗ್ಗೆ ಮಾಹಿತಿ ನೀಡಿದ ಅನಾಮಧೇಯ ವ್ಯಕ್ತಿಗೆ ಕರ್ನಾಟಕ ಸರ್ಕಾರ ರಕ್ಷಣೆ ನೀಡಿ ತಕ್ಷಣ ತನಿಖೆ ನಡೆಸಬೇಕು ಎಂದು ಕೇಂದ್ರ ಮಕ್ಕಳ ಮತ್ತು ಮಹಿಳಾ ಕಲ್ಯಾಣ ಸಚಿವೆ ಅನ್ನಪೂರ್ಣ ದೇವಿ ಹೇಳಿದ್ದಾರೆ.
ಈ ಕುರಿತು ಟೈಮ್ಸ್ ನೌ ಸುದ್ದಿವಾಹಿನಿಯ ಜೊತೆ ಮಾತನಾಡಿದ ಅವರು, ಧರ್ಮಸ್ಥಳದಲ್ಲಿ ಈ ರೀತಿಯ ಘಟನೆಗಳು ದೀರ್ಘಕಾಲದವರೆಗೆ ನಡೆದಿರುವುದು ಅಚ್ಚರಿ ತಂದಿದೆ. 15 ರಿಂದ 2014 ರವರೆಗೆ ನಡೆದಿರುವ ಈ ಕೃತ್ಯದ ಕುರಿತು ಯಾರಿಗೂ ತಿಳಿಯದಿರುವುದು ನಿಜಕ್ಕೂ ಗಂಭೀರವಾದ ವಿಷಯ. ಈಗ ಅನಾಮಧೇಯ ವ್ಯಕ್ತಿ ಈ ಕುರಿತು ಮಾಹಿತಿ ಬಹಿರಂಗಗೊಳಿಸಿದ್ದಾರೆ. ಈ ಸಾಕ್ಷಿಗೆ ರಕ್ಷಣೆ ನೀಡಿ ಆದಷ್ಟು ಬೇಗ ಸಮಗ್ರ ತನಿಖೆ ನಡೆಸಬೇಕು ಎಂದು ಕರ್ನಾಟಕ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.





