ಚರ್ಮ ಸಂಬಂಧಿ ಖಾಯಿಲೆಯಿಂದ ದೂರ ಇರಲು ಬಳಸಿ ಪಾರಿಜಾತ ಹೂವಿನ ಎಲೆ..!
ಸುಗಂಧ ಪುಷ್ಪಗಳಲ್ಲಿ ಒಂದಾದ ಪಾರಿಜಾತ ಹೂವು ಎಲ್ಲರಿಗೂ ಚಿರಪರಿಚಿತ. ರಾತ್ರಿಯ ವೇಳೆಯಲ್ಲಿ ಅರಳುವ ಈ ಹೂವಿನಲ್ಲಿ ಅಡಗಿದೆ ವಿಶೇಷ ಅರೋಗ್ಯವನ್ನು ನೀಡುವ ಔಷಧೀಯ ಗುಣಗಳು. ಜಾಂಡೀಸ್ ಮತ್ತು ಮಲಬದ್ಧತೆ ಸಮಸ್ಯೆಗೆ ಪಾರಿಜಾತ ಎಲೆಯ ಔಷಧ ಬಳಸುತ್ತಾರೆ. ಕೀಲುನೋವು, ತಲೆಹೊಟ್ಟು, ಮೂಲವ್ಯಾಧಿ, ಚರ್ಮರೋಗ, ನಾನಾರೀತಿಯ ಜ್ವರಗಳಿಗೆ ಪಾರಿಜಾತವನ್ನು ಔಷಧವಾಗಿ ಬಳಸುತ್ತಾರೆ.
6-7 ಎಲೆಗಳನ್ನು ತೆಗೆದು ಜಜ್ಜಿ ಕುದಿಸಿ ಕಷಾಯ ರೂಪದಲ್ಲಿ ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆ ಸರಿಯಾಗಿ ಕೆಲಸ ನಿರ್ವಹಿಸುತ್ತದೆ. ಇದರ ಬೀಜದ ಪುಡಿಯನ್ನು ಚರ್ಮ ಸಂಬಂಧಿ ಸಮಸ್ಯೆಗೆ ಬಳಸುತ್ತಾರೆ.
ಇದರ ಕಷಾಯ ಸೇವನೆಯಿಂದ ಕೀಲುನೋವು ದೂರವಾಗುತ್ತದೆ. ಈ ಪಾರಿಜಾತ ಹೂವಿನ ವಾಸನೆಯನ್ನು ಸವಿದರೆ ಸಾಕು ನಮ್ಮ ದೇಹದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ.ಮನೆಯಂಗಳದಲ್ಲಿರುವ ಪಾರಿಜಾತ ಗಿಡವನ್ನು ಹಾದು ಬರುವ ಸುಗಂಧವೂ ಹಲವು ರೀತಿಯಲ್ಲಿ ನಮ್ಮ ದೇಹಕ್ಕೆ ಉಪಕಾರಿ.





