ಗುರುಪೂರ್ಣಿಮೆ: ಹಿರೇಬೆಟ್ಟು ರಾಮ ಮಡಿವಾಳ, ವಿಶ್ವನಾಥ ನಾಯಕ್ ಅವರಿಗೆ ಸನ್ಮಾನ
ಉಡುಪಿ: ಗುರುಪೂರ್ಣಿಮೆಯ ಪ್ರಯುಕ್ತ ಜ್ಞಾನದ ದೀವಿಗೆಯನ್ನು ನೀಡಿ ಬದುಕಿಗೆ ದಾರಿ ತೋರಿದ ಗುರುಗಳನ್ನು ಜಿಲ್ಲೆಯಾದ್ಯಂತ ಗೌರವಿಸುವ ಅಭಿಯಾನದ ಭಾಗವಾಗಿ ಹಿರೇಬೆಟ್ಟು ಗ್ರಾಮದ ರಾಮ ಮಡಿವಾಳ ಹಾಗೂ ವಿಶ್ವನಾಥ ನಾಯಕ್ ಅವರನ್ನು ಇಂದು ಗೌರವಿಸಲಾಯಿತು.

ಹಿರೇಬೆಟ್ಟು ಗ್ರಾಮದ ಧಾರ್ಮಿಕ, ದೈವ ದೇವರ ಕಾರ್ಯದಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಳ್ಳುವ ರಾಮ ಮಡಿವಾಳ ಅವರನ್ನು ಗುರುತಿಸಿ ವೇದಿಕೆಯಲ್ಲಿ ಗೌರವಿಸಲಾಯಿತು. ಹಾಗೆಯೇ ನಿವೃತ್ತ ಮುಖ್ಯೋಪಾಧ್ಯಾಯರಾದ ವಿಶ್ವನಾಥ ನಾಯಕ್ ಅವರನ್ನು ಕೂಡ ಇದೇ ವೇಳೆ ಗೌರವಿಸಲಾಯಿತು.
ಈ ಸಂಧರ್ಭದಲ್ಲಿ ಜಿಲ್ಲಾ ಬಿಜೆಪಿ ಮಾಧ್ಯಮ ಪ್ರಮುಖರಾದ ಶ್ರೀನಿಧಿ ಹೆಗ್ಡೆ, ಜಿಲ್ಲಾ ಬಿಜೆಪಿ ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾದ ಶ್ರೀಕಾಂತ್ ಕಾಮತ್, ಮಾಜಿ ಹಿರೇಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗುರುನಂದನ್ ನಾಯಕ್, ಬಿಜೆಪಿ ಪ್ರಮುಖರಾದ ಸುಂದರ್ ಮೂಲ್ಯ, ವೀರೇಂದ್ರ ಪೂಜಾರಿ ಹಾಗೂ ದೀಪಕ್ ಪೂಜಾರಿ ಉಪಸ್ಥಿತರಿದ್ದರು.





