ಯೆಮೆನ್‌ ಪ್ರಜೆಯ ಕೊಲೆ ಪ್ರಕರಣ: ಭಾರತೀಯ ನರ್ಸ್‌ ನಿಮಿಷಾಗೆ ಜು.16ರಂದು ಗಲ್ಲು..!

ಯೆಮೆನ್:‌ ಯೆಮೆನ್‌ ಪ್ರಜೆಯ ಕೊಲೆ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಯೆಮನ್‌ ನಲ್ಲಿರುವ ಭಾರತೀಯ ನರ್ಸ್‌ ನಿಮಿಷಾ ಪ್ರಿಯಾ ಅವರನ್ನು ಜುಲೈ 16ರಂದು ಗಲ್ಲಿಗೇರಿಸಲಾಗುವುದು.
ಈ ಕುರಿತು ರಾಷ್ಟ್ರೀಯ ಖಾಸಗಿ ವಾಹನಿಯೊಂದಕ್ಕೆ ಮಾಹಿತಿ ನೀಡಿರುವ ವಿದೇಶಾಂಗ ಸಚಿವಾಲಯದ ಮೂಲಗಳು, ವಿಚಾರಣಾ ನ್ಯಾಯಾಲಯವು ಯೆಮೆನ್‌ ಪ್ರಜೆಯನ್ನು ಕೊಂದ ಆರೋಪದ ಮೇಲೆ ಆಕೆಯನ್ನು ದೋಷಿ ಎಂದು ತೀರ್ಪು ನೀಡಿದೆ. ಈ ನಿರ್ಧಾರವನ್ನು ಸುಪ್ರೀಂ ಜುಡಿಷಿಯಲ್‌ ಕೌನ್ಸಿಲ್‌ 2023ರ ನವೆಂಬರ್‌ ನಲ್ಲಿ ಎತ್ತಿಹಿಡಿದಿದ್ದು, ಕಳೆದ ವರ್ಷ ಯೆಮೆನ್‌ ಅಧ್ಯಕ್ಷರು ಕೇರಳದ ನಿಮಿಷಾ ಪ್ರಿಯಾ ಅವರ ಮರಣದಂಡನೆಯನ್ನು ಅನುಮೋದಿಸಿದ್ದಾರೆ.
ಘಟನೆ ಹಿನ್ನೆಲೆ
2008ರಲ್ಲಿ ನಿಮಿಷಾ ಪ್ರಿಯ ಯೆಮೆನ್‌ ಗೆ ತೆರಳಿದ್ದರು. ಹಲವಾರು ಆಸ್ಪತ್ರೆಗಳಲ್ಲಿ ಕೆಲಸ ಮಾಡಿ, ಅಂತಿಮವಾಗು ತಮ್ಮದೇ ಕ್ಲಿನಿಕ್‌ ಅನ್ನು ತೆರೆದರು. 2014ರಲ್ಲಿ ತಲಾಲ್‌ ಅಬ್ದೋ ಮಹ್ದಿ ಎನ್ನುವವರ ಪರಿಚಯವಾಗಿದ್ದು, ಯೆಮೆನ್‌ ನಲ್ಲಿ ಸ್ಥಳೀಯರೊಂದಿಗೆ ಪಾಲುದಾರಿಕೆ ಮಾಡಿಕೊಂಡು ವ್ಯವಹಾರವನ್ನು ಪ್ರಾರಂಭಿಸಿದರು. ಬಳಿಕ ಅಬ್ದೋ ಮಹ್ದಿ ಅವರೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದ ನಿಮಿಷಾ ಅವನ ವಿರುದ್ಧ ದೂರು ದಾಖಲಿಸಿದ್ದರು. ನಂತರ ಅವರನ್ನು 2016ರಲ್ಲಿ ಬಂಧಿಸಿ, ನಂತರ ಅವರನ್ನು ಬಿಡುಗಡೆ ಮಾಡಲಾಯಿತು. ಬಿಡುಗಡೆಯ ನಂತರ ಅಬ್ದೋ ನಿಮಿಷಾ ಅವರಿಗೆ ಬೆದರಿಕೆ ಹಾಕುವುದನ್ನು ಮುಂದುವರಿಸಿದ್ದಾರೆ. ಈ ಹಿನ್ನೆಲೆ ನಿಮಿಷಾ ಅವರು ಅಬ್ದೋ ಗೆ ನಿದ್ರಾಜನಕ ಚುಚ್ಚು ಮದ್ದನ್ನು ನೀಡಿದ್ದು, ಓವರ್‌ ಡೋಸೇಜ್‌ ನಿಂದಾಗಿ ಅಬ್ದೋ ಸಾವನ್ನಪ್ಪಿದ್ದಾನೆ. ಘಟನೆ ಬಳಿಕ ನಿಮಿಷಾ ಅವರು ದೇಶದಿಂದ ಪಲಾಯನ ಮಾಡಲು ಯತ್ನಿಸುತ್ತಿದ್ದಾಗ ಅವರನ್ನು ಬಂಧಿಸಲಾಯಿತು.

Leave a Reply

Your email address will not be published. Required fields are marked *

error: Content is protected !!