ಉಡುಪಿ: “ಬಲ್ಲಾಳ್ ಮೊಬೈಲ್ಸ್”ನಲ್ಲಿ ಒಪ್ಪೋ ರೆನೋ 14 ಸೀರೀಸ್ ಮೊಬೈಲ್ ಬಿಡುಗಡೆ
ಉಡುಪಿ ಜು.09(ಉಡುಪಿ ಟೈಮ್ಸ್ ವರದಿ): ನಗರದ ಕಲ್ಪನಾ ಚಿತ್ರಮಂದಿರದ ಬಳಿ ಇರುವ ಗ್ರಾಹಕ ಸ್ನೇಹಿಯಾದ ಹೆಸರಾಂತ ಮಲ್ಟಿ ಬ್ರಾಂಡೆಡ್ ಮೊಬೈಲ್ ಶೋರೂಮ್ “ಬಲ್ಲಾಳ್ ಮೊಬೈಲ್ಸ್”ನಲ್ಲಿ ಒಪ್ಪೋ ರೆನೋ 14 ಸೀರೀಸ್ ಮೊಬೈಲ್ ಸೋಮವಾರ ಬಿಡುಗಡೆಗೊಂಡಿತು.
ನೂತನ ಮೊಬೈಲ್ ಅನ್ನು ಗ್ರಾಹಕರಾದ ಲವೀನಾ ಡಿಕೋಸ್ಟ, ಮಂಜುನಾಥ್, ಜಾಫೆ, ಅಜಿತ್, ಮುರಳಿ ಎಂ, ಶಿವುಕುಮಾರ್, ನಿತಿನ್ ಭಟ್ ಬಿಡುಗಡೆ ಗೊಳಿಸಿದರು. ಈ ಸಂದರ್ಭಕ್ಕೆ ಒಪ್ಪೋ ಮೊಬೈಲ್‌ನ ಕಂಪೆನಿಯ ಎಎಸ್‌ಎಂ ಪ್ರೀತಂ ಶೆಟ್ಟಿ, ಸಂಸ್ಥೆಯ ಮಾಲಕರಾದ ಸಂದೇಶ್ ಬಲ್ಲಾಳ್ ಉಪಸ್ಥಿತರಿದ್ದರು.

ಈ ವಿಶೇಷ ಕೊಡುಗೆಯು ಜೂನ್ 16 ರಿಂದ ಪ್ರಾರಂಭಗೊಂಡಿದ್ದು ಜುಲೈ 16ರವರೆಗೆ ಇರಲಿದೆ. ಈ ಕೊಡುಗೆಯಲ್ಲಿ 20,000 ಮೇಲಿನ ಮೊತ್ತದ ಮೊಬೈಲ್ ಖರೀದಿಗೆ ಒಂದು ಕೊಡೆ ಹಾಗೂ ಇತರ ಮೊಬೈಲ್ ಸಲಕರಣೆಗಳಾದ ಇಯರ್ ಫೋನ್, ಸ್ಮಾರ್ಟ್ ವಾಚ್, ಕ್ಯಾರಿ ಬ್ಯಾಗ್, ಇಯರ್ ಬಡ್ಸ್ ಹಾಗೂ ಇತರ ಉಪಕರಣಗಳು ಉಚಿತವಾಗಿ ಸಿಗಲಿದೆ. ಇದರ ಜೊತೆಗೆ ಎಕ್ಸ್‌ಚೇಂಜ್ ಆಫರ್ ಮತ್ತು ಕ್ಯಾಶ್ ಬ್ಯಾಕ್ ಆಫರ್ ಕೂಡ ಇಲ್ಲಿ ಸಿಗುತ್ತಿದ್ದು, ಝೀರೋ ಡೌನ್ ಪೇಮೆಂಟ್ ನಲ್ಲಿ ನಿಮ್ಮ ಇಷ್ಟದ ಮೊಬೈಲನ್ನು ಖರೀದಿಸಿ ಸುಲಭ ಕಂತುಗಳಲ್ಲಿ ಇಎಂಐ ಮೂಲಕ ಹಣ ಪಾವತಿಸುವ ಅವಕಾಶ ಕೂಡ ಇದೆ.
ಇಲ್ಲಿ ವಿವಿಧ ವಿಶ್ವಾಸಾರ್ಹನೀಯ ಬ್ರ್ಯಾಂಡ್‌ಗಳ ಸ್ಮಾರ್ಟ್ ಫೋನ್, ಐ ಫೋನ್‌ಗಳು ಲಭ್ಯವಿದ್ದು ಈ ಮಾನ್ಸೂನ್ ನಲ್ಲಿ ಹೊಸ ಮೊಬೈಲ್ ಖರೀದಿಸಬೇಕು ಎನ್ನುವವರು ನಗರದ ಕಲ್ಪನಾ ಥಿಯೇಟರ್ ಬಳಿ ಇರುವ ಬಲ್ಲಾಳ್ ಮೊಬೈಲ್‍ಗೆ ಭೇಟಿ ನೀಡಿ ಅಥವಾ ಹೆಚ್ಚಿನ ಮಾಹಿತಿಗಾಗಿ 9886245522 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.





