ಯುಎಇ ಗೋಲ್ಡನ್‌ ವೀಸಾ ಷರತ್ತು ಸರಳೀಕರಿಸಿದ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ಸರ್ಕಾರ

ದುಬೈ: ವ್ಯಾಪಾರ ಪರವಾನಗಿ, ಆಸ್ತಿ ಖರೀದಿ ಇಲ್ಲದೇ ಭಾರತೀಯರಿಗೆ ಯುಎಇ ಗೋಲ್ಡನ್‌ ವೀಸಾ ಕೊಡಲು ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ಸರ್ಕಾರ ಆರಂಭಿಸಿದೆ. ಭಾರತೀಯರು ಈವರೆಗೆ ಯುಎಇ ಗೋಲ್ಡನ್‌ ವೀಸಾ ಪಡೆಯಲು ಕನಿಷ್ಠ ಎರಡು ಮಿಲುಯನ್‌ ದಿರ್ಹಮ್ಸ್‌ ಅಂದರೆ ಭಾರತೀಯ ರೂಪಾಯಿ ಮೌಲ್ಯದ 4.66 ಕೋಟಿ ಆಸಸ್ತಿಯಲ್ಲಿ ಹೂಡಿಕೆ ಮಾಡಬೇಕಿತ್ತು. ಅಥವಾ ಆ ದೇಶದ ವ್ಯಾಪಾರದಲ್ಲಿ ದೊಡ್ಡ ಮೊತ್ತದ ಹೂಡಿಕೆ ಮಾಡಿರಬೇಕೆಂಬ ಷರತ್ತು ಇತ್ತು. ಆದರೆ ಇದೀಗ ಯುಎಇ ಸರ್ಕಾರ ಕೆಲವು ಷರತ್ತುಗಳ ಅನ್ವಯ ವೀಸಾ ಪಡೆಯಲು ಅವಕಾಶ ನೀಡಿದೆ.

ಈ ಹೊಸ ವೀಸಾ ವಿತರಣೆಗೆ ಮೊದಲ ಹಂತದಲ್ಲಿ ಭಾರತ ಮತ್ತು ಬಾಂಗ್ಲಾದೇಶವನ್ನು ಆಯ್ಕೆ ಮಾಡಲಾಗಿದ್ದು, ಈ ಹೊಸ ವೀಸಾ ಪಡೆಯಲು ಭಾರತೀಯರು ಸುಮಾರು ಒಂದು ಲಕ್ಷ ದಿರ್ಹಮ್‌ ಅಂದರೆ ಭಾರತೀಯ ಮೌಲ್ಯದ ಸುಮಾರು 23.30 ಲಕ್ಷ ಶುಲ್ಕವನ್ನು ಪಾವತಿಸುವ ಮೂಲಕ ಯುಎಇಯ ಗೋಲ್ಡನ್‌ ವೀಸಾ ಪಡೆಯಬಹುದಾಗಿದೆ. ಭಾರತದಲ್ಲಿ ಪ್ರಾಯೋಗಿಕ ನಾಮನಿರ್ದೇಶನ ಆಧಾರಿತ ಗೋಲ್ಡನ್‌ ವೀಸಾ ಪ್ರಕ್ರಿಯೆಯನ್ನು ಪರೀಕ್ಷಿಸಲು ರಾಯದ್‌ ಗ್ರೂಪ್‌ ಎಂಬ ಕಲ್ಸಲ್ಟೆನ್ಸಿ ಸಂಸ್ಥೆಯನ್ನು ಆಯ್ಕೆ ಮಾಡಲಾಗಿದ್ದು, ಮೂರು ತಿಂಗಳಲ್ಲಿ ೫ಸಾವಿರಕ್ಕೂ ಹೆಚ್ಚು ಭಾರತೀಯರು ಈ ನಾಮನಿರ್ದೇಶನ ಆಧಾರಿತ ವೀಸಾಕ್ಕೆ ಅರ್ಜಿ ಸಲ್ಲಿಸಬಹುದು ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!