ಹೆಚ್ಚು ಹೆಚ್ಚು ವಾಕಿಂಗ್ ಮಾಡಿ ನಿಮ್ಮ ಆರೋಗ್ಯವನ್ನು ಉತ್ತಮವಾಗಿರಿಸಿ…!
ಇಂದಿನ ನಮ್ಮ ಬದುಕು ಕೆಲಸ ಕೆಲಸವೆಂದು ಬರೀ ಒತ್ತಡದಿಂದ ಕೂಡಿರುತ್ತದೆ. ಇಲ್ಲಿ ನಮ್ಮ ಆರೋಗ್ಯದ ಮೇಲೆ ಯಾವುದೇ ತರಹದ ಕಾಳಜಿ ಇರುವುದಿಲ್ಲ. ಇದು ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮವನ್ನು ಬೀರುತ್ತದೆ. ಇದರಿಂದ ಹಲವಾರು ರೀತಿಯ ಕಾಯಿಲೆಗಳು ನಮ್ಮನ್ನು ಆವರಿಸುತ್ತದೆ. ಆದ್ದರಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ನಾವು ಏನಾದರೂ ಒಂದು ಪರಿಹಾರವನ್ನು ಕಂಡುಕೊಳ್ಳಲೇಬೇಕಾಗುತ್ತದೆ. ಅದರಲ್ಲಿ ಮುಖ್ಯವಾಗಿರುವುದು ನಾವು ಬೆಳಗಿನ ಜಾವ ಎದ್ದು ವಾಕಿಂಗ್ ಹೋಗುವುದು. ಈ ವಾಕಿಂಗ್ ಹೋಗುವುದರಿಂದ ನಮ್ಮ ದೇಹವು ಬಲಿಷ್ಠವಾಗಿರುತ್ತದೆ ಹಾಗೂ ಕೆಲಸ ಮಾಡಲು ನಮಗೆ ಶಕ್ತಿಯನ್ನು ನೀಡುತ್ತದೆ.

ದಿನಂಪ್ರತಿ ಒಂದು ಅರ್ಧ ಗಂಟೆ ವಾಕಿಂಗ್ ಮಾಡುವುದರಿಂದ ನಮ್ಮ ಮನಸ್ಸು ಫ್ರೆಶ್ ಆಗಿರುತ್ತದೆ. ಇದರಿಂದ ಡಯಾಬಿಟಿಸ್ ಬಿಪಿ ಮೊದಲಾದಂತಹ ರೋಗಗಳು ಸಹ ನಿಯಂತ್ರಣಕ್ಕೆ ಬರುತ್ತದೆ. ಈ ರೀತಿ ವಾಕಿಂಗ್ ಮಾಡುವುದರಿಂದ ನಾವು ದಿನವಿಡೀ ಫ್ರೆಶ್ ಆಗಿರುತ್ತದೆ. ಎಲ್ಲಾ ಕೆಲಸಗಳನ್ನು ಚೆನ್ನಾಗಿ ಮಾಡುತ್ತೇವೆ. ಆದ್ದರಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ವಾಕಿಂಗ್ ಬಹುಮುಖ್ಯ. ದಿನಾಲು ನಾವು ವಾಕಿಂಗ್ ಮಾಡುವುದರಿಂದ ಒಳ್ಳೆಯ ಆರೋಗ್ಯವನ್ನು ಪಡೆಯಬಹುದು.

ಆರೋಗ್ಯ ಚೆನ್ನಾಗಿದ್ದರೆ ಎಲ್ಲವೂ ಚೆನ್ನಾಗಿರುತ್ತೆ. ಆದ್ದರಿಂದ ನಾವು ದಿನನಿತ್ಯ ಎಷ್ಟೇ ಕೆಲಸದ ಒತ್ತಡದಲ್ಲಿದ್ದರೂ ಸಹ ಬೆಳಗಿನ ಜಾವದ ವಾಕಿಂಗ್ ಅನ್ನು ಮರೆಯಬಾರದು. ಏಕೆಂದರೆ ಬೆಳಗಿನ ಜಾವ ವಾಕಿಂಗ್ ನಮ್ಮ ಕೆಲಸದ ಮೇಲೆ ಪರಿಣಾಮ ಬೀರುತ್ತದೆ. ನಾವು ವಾಕಿಂಗ್ ಮಾಡುವುದರಿಂದ ನಮ್ಮ ದೇಹವು ಆಕ್ಟಿವ್ ಆಗಿರುತ್ತದೆ. ಇದರಿಂದ ನಾವು ಉತ್ತಮವಾಗಿ ಕೆಲಸ ಮಾಡಬಹುದು.





