ಪೇಪರ್ ನಲ್ಲಿ ಸುತ್ತಿದ ಆಹಾರ ಸೇವಿಸುವುದು ಬಹಳ ಅಪಾಯಕಾರಿ..!

ಕೆಲವೊಮ್ಮೆ ಮನೆಯಲ್ಲಿ ತಯಾರಿಸುವ ಆಹಾರ ಕೆಲವರಿಗೆ ಇಷ್ಟವಾಗುವುದಿಲ್ಲ. ಅಥವಾ ಕೆಲವರಿಗೆ ಸಂಜೆ ಸ್ನಾö್ಯಕ್ಸ್ಗೆ ತಿಂಡಿ ತಿನ್ನಬೇಕೆಂಬ ಬಯಕೆ ಆಗುತ್ತದೆ. ಈ ವೇಳೆ ಹೋಟೆಲ್‌ಗೆ ಹೋಗಿ ಒಬ್ಬೊಬ್ಬರೇ ತಿನ್ನುವ ಬದಲಾಗಿ ಮನೆಯವರಿಗೂ ಇರಲಿ ಅಂತಾ ಪಾರ್ಸೆಲ್ ಅನ್ನು ತರುವವರೇ ಹೆಚ್ಚು. ಈ ವೇಳೆ ಹೋಟೆಲ್‌ನವರು ತಿಂಡಿಗಳನ್ನು ಪೇಪರ್‌ನಲ್ಲಿ ಸುತ್ತಿಕೊಡುತ್ತಾರೆ. ಈ ರೀತಿ ಪೇಪರ್‌ನಲ್ಲಿ ಸುತ್ತಿ ಕೊಡುವ ಆಹಾರವನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ.

ಸಾಮಾನ್ಯವಾಗಿ ಪೇಪರ್ ಗೆ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಇಂಕ್ ಗಟ್ಟಿಯಾಗಿರಲು ಕೂಡ ರಾಸಾಯನಿಕ ಬಳಸಲಾಗುತ್ತದೆ. ಈ ರಾಸಾಯನಿಕ ಆಹಾರಕ್ಕೆ ಸೇರುತ್ತದೆ. ಅದರಲ್ಲೂ ಬಿಸಿ ಆಹಾರವನ್ನು ಪೇಪರ್ ಗೆ ಹಾಕಿದಾಗ ಬಯೋಆಕ್ಟಿವ್ ಅಂಶಗಳು ಸಕ್ರಿಯವಾಗಿರುತ್ತವೆ.
ಪದೇ ಪದೇ ಪೇಪರ್‌ನಲ್ಲಿರುವ ರಾಸಾಯನಿಕ ಹೊಟ್ಟೆ ಸೇರುವುದರಿಂದ ಕ್ಯಾನ್ಸರ್ ನಂತಹ ಅಪಾಯಕಾರಿ ಖಾಯಿಲೆ ಕಾಡುತ್ತದೆ. ಹಾಗಾಗಿ ಎಚ್ಚರವಾಗಿರಿ ಎಂದು ಹೇಳಲಾಗುತ್ತದೆ. ಆದಷ್ಟು ಪೇಪರ್ ಬಳಕೆ ಕೈಬಿಟ್ಟು ಬೇರೆ ವಿಧಾನ ಅನುಸರಿಸುವುದು ಉತ್ತಮ ಎಂದು ತಜ್ಞರು ಹೇಳುತ್ತಾರೆ.

Leave a Reply

Your email address will not be published. Required fields are marked *

error: Content is protected !!