ಮದುವೆಯಾದ ಎರಡೇ ತಿಂಗಳಿಗೆ ಅತ್ತೆಯೊಂದಿಗೆ ಅಳಿಯ ಪರಾರಿ
ಚನ್ನಗಿರಿ: ಮದುವೆಯಾದ ಎರಡೇ ತಿಂಗಳಿಗೆ ಅಳಿಯನ ಜೊತೆ ಅತ್ತೆ ಪರಾರಿಯಾಗಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಮುದ್ದೇನಹಳ್ಳಿಯಲ್ಲಿ ನಡೆದಿದೆ.

ಓಡಿಹೋದವರನ್ನು ಅತ್ತೆ ಶಾಂತಾ(55), ಅಳಿಯ ಗಣೇಶ್(25) ಎಂದು ಗುರುತಿಸಲಾಗಿದೆ.
ಶಾಂತಾ ಮತ್ತು ನಾಗರಾಜ್ ದಂಪತಿ ಮಗಳು ಹೇಮಾಗೆ ಚನ್ನಗಿರಿ ತಾಲೂಕಿನಮರವಂಜಿ ಗ್ರಾಮದ ಗಣೇಶ್ ಎಂಬಾತನ ಜೊತೆ ಕಳೆದ ಎರಡು ತಿಂಗಳ ಹಿಂದೆ ಅದ್ದೂರಿಯಾಗಿ ಮದುವೆ ಮಾಡಿಸಿದ್ದಳು. ಮದುವೆಯ ನಂತರ ಶಾಂತಾಳ ವರಸೆ ಬದಲಾಗಿದ್ದು, ಗಣೇಶ್ ಜೊತೆ ಹೆಚ್ಚು ಒಡನಾಟ ಹೊಂದಿದ್ದಳು. ಮದುವೆಯಾದ ಹದಿನೈದೇ ದಿನಕ್ಕೆ ಗಣೇಶ್ ತನ್ನ ಅತ್ತೆಯೊಂದಿಗೆ ಅಕ್ರಮ ಸಂಬಂಧ ಹೊಂದಿರುವುದು ಹೇಮಾಳ ಗಮನಕ್ಕೆ ಬಂದಿದೆ. ಗಣೇಶ್ ಮೊಬೈಲ್ ನಲ್ಲಿ ತನ್ನ ತಾಯಿ ಶಾಂತ ಅಶ್ಲೀಲ ಸಂದೇಶ ಕಳುಹಿಸಿರುವುದನ್ನು ಕಂಡ ಹೇಮಾ ತನ್ನ ತಂದೆಗೆ ಅಶ್ಲೀಲ ಮೆಸೆಜ್‌ಗಳನ್ನು ತೋರಿಸಿದ್ದಾಳೆ. ಮೊಬೈಲ್ ನಲ್ಲಿದ್ದ ಫೋಟೋಗಳನ್ನು ತನ್ನ ತಂದೆ ಕಳುಹಿಸಿದ್ದಳು. ವಿಷಯ ಬೆಳಕಿಗೆ ಬರುತ್ತಿದ್ದಂತೆ ಎಚ್ಚೆತ್ತುಕೊಂಡ ಶಾಂತಾ ಹಣ ಆಭರಣಗಳೊಂದಿಗೆ ಪರಾರಿಯಾಗಿದ್ದಾಳೆ.
ಶಾಂತಾ ಹೇಮಾಳ ಮಲತಾಯಿಯಾಗಿದ್ದು, ಕಳೆದ 13 ವರ್ಷಗಳ ಹಿಂದೆ ನಾಗರಾಜ್ ಅವರು ಶಾಂತಾಳನ್ನು ಎರಡನೇ ಮದುವೆಯಾಗಿ ಮನೆಗೆ ಕರೆದುಕೊಂಡು ಬಂದಿದ್ದರು. ನಾಗರಾಜ್ ಅವರ ಮೊದಲ ಪತ್ನಿಗೆ ಮೂವರು ಮಕ್ಕಳಿದ್ದು, ಹಿರಿಯ ಮಗಳು ಹೇಮಾ ತಂದೆ ನಾಗರಾಜ್ ಜೊತೆ ವಾಸವಾಗಿದ್ದಳು.
ಈ ಬಗ್ಗೆ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ತನ್ನ ತಾಯಿ ಮತ್ತು ಪತಿಯನ್ನು ಹುಡುಕಿಕೊಡುವಂತೆ ಹೇಮಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.





