ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿ ಲಾಭದ ಆಮಿಷ: 68.30ಲಕ್ಷ ರೂ ವಂಚನೆ

ಉಡುಪಿ: ಷೇರು ಮಾರುಕಟೆಯಲ್ಲಿ ಹೂಡಿಕೆ ಮಾಡಿ ಹೆಚ್ಚಿನ ಲಾಭಾಂಶದ ಆಮಿಷವೊಡ್ಡಿ ಬರೋಬ್ಬರಿ 68.30ಲಕ್ಷ ರೂ ವಂಚಿಸಿರುವ ಘಟನೆ ಉಡುಪಿ ಸೆನ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಅಜಿತ್‌ ಕುಮಾರ್‌ ಎನ್ನುವವರರನ್ನು ಯಾರೋ ಅಪರಿಚಿತರು 372 scbi investing lab ಎಂಬ ವಾಟ್ಸ್‌ಪ್‌ ಗ್ರೂಪ್‌ಗೆ ಸೇರ್ಪಡೆ ಮಾಡಿದ್ದು, ಆ ಗ್ರೂಪ್‌ ನಲ್ಲಿ ಅಜಿತ್‌ ಅವರಿಗೆ ಷೇರು ಮಾರ್ಕೆಟ್‌ನಲ್ಲಿ ಹಣ ಹೂಡಿಕೆ ಮಾಡುವಂತೆ ಹಾಗೂ ಅದರಿಂದ ಹೆಚ್ಚಿನ ಲಾಭಂಶ ನೀಡುವುದಾಗಿ ಮೆಸೇಜ್‌ ಕಳುಹಿಸಿದ್ದಾರೆ. ಅದರಂತೆ ಅಪರಿಚಿತರು ವಾಟ್ಸ್‌ಫ್‌ ಗ್ರೂಪ್‌ನಲ್ಲಿ ತಿಳಿಸಿದ ಬ್ಯಾಂಕ್‌ ಖಾತೆಗಳಿಗೆ ನೆಪ್ಟ್‌ ಮತ್ತು ಆರ್‌.ಟಿ.ಜಿಎಸ್‌ಮುಖಾಂತರ ದಿನಾಂಕ 12/06/2025 ರಿಂದ 23/06/2025 ರವರೆಗೆ ಒಟ್ಟು 68,30,000 ರೂ. ಹಣವನ್ನು ವರ್ಗಾವಣೆ ಮಾಡಿದ್ದಾರೆ. ಅದರೆ ಅಪರಿಚಿತ ವ್ಯಕ್ತಿಗಳು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ ಹಣವನ್ನಾಗಲೀ ಅಥವಾ ಲಾಭಾಂಶನ್ನಾಗಲಿ ನೀಡದೇ ವಂಚನೆ ಮಾಡಿದ್ದಾರೆ.
ಈ ಬಗ್ಗೆ ಉಡುಪಿ ಸೆನ್‌ ಅಪರಾಧ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 31/2025 ಕಲಂ: 66(ಸಿ) 66(ಡಿ)ಐ.ಟಿ. ಆಕ್ಟ್ ಮತ್ತು 318(4) ‌BNS ರಂತೆ ಪ್ರಕರಣ ದಾಖಲಿಸಲಾಗಿದೆ. ‌

Leave a Reply

Your email address will not be published. Required fields are marked *

error: Content is protected !!