ದೇಹಕ್ಕೆ ಅಗತ್ಯವಿರುವಷ್ಟು ನೀರನ್ನು ಕುಡಿಯದಿದ್ರೆ ಕಾಡುತ್ತೆ ಈ ಎಲ್ಲಾ ಸಮಸ್ಯೆ
ನೀರು, ಪ್ರತಿಯೊಂದು ಜೀವಿಯು ಬದಕಲು ಬೇಕಾದ ಮೂಲಭೂತ ಅವಶ್ಯಕತೆಗಳಲ್ಲಿ ಒಂದಾಗಿದೆ. ನೀರನ್ನು ಕುಡಿಯುವುದರಿಂದ ದೇಹವು ಆರೋಗ್ಯಯುತವಾಗಿರುತ್ತದೆ. ದೇಹದಲ್ಲಿ ನಿಶ್ಶಕ್ತಿ, ಆಯಾಸ, ನಿರ್ಜಲೀಕರಣದಂತಹ ಸಮಸ್ಯೆ ಉಂಟಾಗುವುದು ದೇಹದಲ್ಲಿ ನೀರಿನ ಅಂಶ ಕಡಿಮೆಯಾದಾಗ. ಪ್ರತಿಯೊಬ್ಬ ವ್ಯಕ್ತಿಯ ದೇಹಕ್ಕೂ ಅಗತ್ಯವಿರುವಷ್ಟು ನೀರಿನ ಅಂಶ ಇರುವುದು ಉತ್ತಮ.
ಪ್ರತಿಯೊಬ್ಬ ಮನುಷ್ಯನ ದೇಹಕ್ಕೆ ದಿನಕ್ಕೆ ಇಂತಿಷ್ಟು ನೀರಿನ ಪ್ರಮಾಣ ಸೇರಲೇಬೇಕು. ಇಲ್ಲದಿದ್ದರೆ ಆತನ ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿ ಅನಾರೋಗ್ಯ ಸಮಸ್ಯೆಯಿಂದ ಬಳಲಬೇಕಾಗುತ್ತದೆ. ಹೀಗಾದಾಗ ಹೆಚ್ಚಾಗಿ ಕಾಡುವ ಸಮಸ್ಯೆ ಅಂದ್ರೆ ಮೂತ್ರಕೋಶದಲ್ಲಿ ಉಂಟಾಗುವ ಕಲ್ಲಿನ ಸಮಸ್ಯೆ. ಇದು ಬಹುದೊಡ್ಡ ಸಮಸ್ಯೆಯಾಗಿ ನಮ್ಮನ್ನು ಕಾಡುತ್ತಿರುತ್ತದೆ. ಹೀಗಾಗಿ ಅಗತ್ಯವಿರುವಷ್ಟು ನೀರಿನ ಸೇವನೆಯನ್ನು ದಿನನಿತ್ಯ ಮಾಡುವುದು ಉತ್ತಮ ಅಭ್ಯಾಸವಾಗಿದೆ.

ನಾವು ದಿನನಿತ್ಯ ಅಗತ್ಯಕ್ಕಿಂತ ಹೆಚ್ಚಾಗಿಯೇ ನೀರು ಸೇವಿಸುತ್ತೇವೆ ಆದರೂ ಕೂಡ ನಮನ್ನು ಕೆಲವೊಂದು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹಾಗಾದ್ರೆ ಇದಕ್ಕೆ ಕಾರಣವೇನು ಅಂತಾ ಎಲ್ಲರಲ್ಲೂ ಪ್ರಶ್ನೆ ಮೂಡುತ್ತದೆ. ಇದರರ್ಥ ಮನಿಮ್ಮ ದೇಹಕ್ಕೆ ನೀವು ಕುಡಿಯುವ ನೀರು ಸಾಕಾಗುವುದಿಲ್ಲ ಎಂದು. ಹಾಗಾದ್ರೆ ದೇಹದಲ್ಲಿ ನೀರಿನಂಶ ಎಷ್ಟರ ಮಟ್ಟದಲ್ಲಿದೆ, ಒಂದು ವೇಳೆ ನೀರಿನಂಶ ಕಡಿಮೆ ಇದ್ದರೆ ಅದರಿಂದ ಉಂಟಾಗುವ ಸಮಸ್ಯೆಗಳು ಯಾಔಉವು ಅಂತಾ ತಿಳಿಸಿಕೊಳ್ತೀವಿ ನೋಡಿ..
ಮೂತ್ರ ಹಳದಿ ಬಣ್ಣಕ್ಕೆ ತಿರುಗುವುದು:ಈ ಲೇಖನದಲ್ಲಿ÷ ಮೊದಲೇ ಹೇಳಿದಂತೆ ದೇಹದಲ್ಲಿ ನೀರಿನಂಶ ಕಡಿಮೆಯಾದರೆ ಮೂತ್ರಕೋಶಕ್ಕೆ ಸಂಬAಧಿಸಿದ ಖಾಯಿಲೆ ಬಹುಬೇಗ ನಮ್ಮನ್ನು ಆವರಿಸಿಕೊಂಡು ಬಿಡುತ್ತದೆ. ಇದು ಡಿಹೈಡ್ರೇಶನ್ ನ ಅತ್ಯಂತ ಸಾಮಾನ್ಯ ಲಕ್ಷಣ. ದೇಹದಲ್ಲಿ ನೀರಿನ ಅಂಶ ಕಡಿಮೆಯಾದಾಗ ಕಿಡ್ನಿಯಿಂದ ಬರುವ ಎಲ್ಲಾ ತ್ಯಾಜ್ಯ ಕಡಿಮೆ ಮೂತ್ರದ ರೂಪದಲ್ಲಿ ಹೊರಬರುತ್ತದೆ. ಜೀವಾಣುಗಳ ಸಾಂದ್ರತೆಯ ಹೆಚ್ಚಳದಿಂದ ಮೂತ್ರದ ಬಣ್ಣ ಕಡು ಹಳದಿ ಬಣ್ಣಕ್ಕೆ ತಿರುಗುತ್ತದೆ.
ಪದೇ ಪದೇ ಹಸಿವಾಗುವುದು: ನಾವು ಸಾಕಷ್ಟು ನೀರು ಕುಡಿಯದೇ ಇದ್ದಲ್ಲಿ ನಮ್ಮ ದೇಹ ನಿರ್ಜಲೀಕರಣ ಉಂಟಾಗಿ, ಅದು ತುರ್ತುಕ್ರಮದ ಸ್ಥಿತಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸುತ್ತದೆ. ಯಕೃತ್ತು ತನ್ನ ಗ್ಲೈಕೋಜೆನ್ ಅನ್ನು ಹಿಡಿದಿಟ್ಟುಕೊಳ್ಳುತ್ತದೆ. ಇದರಿಂದ ನಿಮಗೆ ಪದೇ ಪದೇ ಹಸಿವಾಗುತ್ತದೆ.
ತಲೆನೋವು:ಒಬ್ಬ ವ್ಯಕ್ತಿ ತನ್ನ ದೇಹಕ್ಕೆ ಅಗತ್ಯವಿರುವಷ್ಟು ನೀರನ್ನು ಸೇವಿಸದೇ ಇದ್ದಾಗ ಆತನ ದೆಹದಲ್ಲಿನ ರಕ್ತ ಸಂಚಾರ ಕಡಿಮೆಯಾಗುತ್ತದೆ. ಇದರಿಂದ ಆತನ ಮೆದುಳಿಗೆ ಸಾಕಷ್ಟು ಆಮ್ಲಜನಕ ತಲುಪುವುದಿಲ್ಲ. ಪರಿಣಾಮ ತಲೆನೋವು ಹಾಗೂ ಒಂದು ರೀತಿಯ ಆಲಸ್ಯ ಕಾಣಿಸಿಕೊಳ್ಳುತ್ತದೆ.
ಆಯಾಸದ ಅನುಭವವಾಗುವುದು: ಕಡಿಮೆ ಕಡಿಮೆ ಪ್ರಮಾಣದಲ್ಲಿ ನೀರನ್ನು ಕುಡಿಯುವುದರಿಂದ ಮನುಷ್ಯನ ದೇಹ ರಕ್ತದಲ್ಲಿರುವ ನೀರನ್ನು ತೆಗೆದುಕೊಂಡು ತನ್ನ ಅಗತ್ಯ ಪೂರೈಸಿಕೊಳ್ಳುತ್ತದೆ. ಪರಿಣಾಮ ನಿಮ್ಮ ಹೃದಯ ತುಂಬಾ ವೇಗವಾಗಿ ಕೆಲಸ ಮಾಡಲಾರಂಭಿಸುತ್ತದೆ. ಅದರಿಂದ ನಿಮಗೆ ಆಯಾಸ ಕಾಣಿಸಿಕೊಳ್ಳುತ್ತದೆ.





