ಅವಿಭಜಿತ ದ.ಕ. ಜಿಲ್ಲಾ ವಿಶ್ವಕರ್ಮ ಪದಾಧಿಕಾರಿಗಳ ಸಮಾವೇಶ

ಉಡುಪಿ: ರಾಷ್ಟ್ರೀಯ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ ಉಡುಪಿ ಇದರ ಅಮೃತಮಹೋತ್ಸವದ ಅಂಗವಾಗಿ ಅವಿಭಜಿತ ಉಡುಪಿ ತಾಲೂಕಿನಲ್ಲಿ ಕಾರ್ಯನಿರ್ವ ಹಿಸುತ್ತಿರುವ ವಿಶ್ವಕರ್ಮ ಸಂಘಸಂಸ್ಥೆಗಳ ಪದಾಧಿಕಾರಿಗಳ ಸಮಾವೇಶವು ಇತ್ತೀಚೆಗೆ ಕುಂಜಿಬೆಟ್ಟಿನ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಜರಗಿತು.

ನಿವೃತ್ತ ತಹಶೀಲ್ದಾರ ಕೆ.ಮುರಳೀಧರ್ ಸಮಾವೇಶದ ಸರ್ವಾಧ್ಯಕ್ಷರಾಗಿದ್ದರು. ರಾಷ್ಟ್ರೀಯ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ.ವೆಂಕಟೇಶ ಆಚಾರ್ಯ ಅಧ್ಯಕ್ಷತೆಯಲ್ಲಿ ಜರಗಿದ ಸಮಾರಂಭ ವನ್ನು ಕಾರ್ಕಳ ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಶಿಲ್ಪಿರಾಮಚಂದ್ರ ಆಚಾರ್ಯ ಉದ್ಘಾಟಿ ಸಿದರು. ಸಹಚಿಂತನ ಮಾಸ ಪತ್ರಿಕೆಯ ಪ್ರಕಾಶಕ ಎಸ್.ವಿ.ಆಚಾರ್ಯರು ಮುಖ್ಯ ಅತಿಥಿಯಾಗಿದ್ದರು.

ರತ್ನಾಕರ ಆಚಾರ್ಯ ಸ್ವಾಗತಿಸಿದರು. ಬಿ.ಎ. ಆಚಾರ್ಯ ಮಣಿಪಾಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪ್ಪೂರು ಹರೀಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಕೆ.ನಾಗರಾಜ ಆಚಾರ್ಯ ವಂದಿಸಿದರು. ಉಡುಪಿ, ಕಾಪು ಮತ್ತು ಬ್ರಹ್ಮಾವರ ತಾಲೂಕುಗಳ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸುಮಾರು 35 ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಈ ಸಮಾವೇಶದಲ್ಲಿ ಭಾಗವಹಿಸಿದ್ದರು.

ಸಮಾರೋಪ ಸಮಾರಂಭ: ಸಮಾರೋಪ ಸಮಾರಂಭವು ಸರ್ವಾಧ್ಯಕ್ಷ ಮುರಳೀಧರ ಅಧ್ಯಕ್ಷತೆಯಲ್ಲಿ ಜರಗಿತು. ವಿಶ್ವಕರ್ಮ ಒಕ್ಕೂಟದ ಮಾಜಿ ಅಧ್ಯಕ್ಷ ಅಲೆವೂರು ಯೋಗೀಶ ಆಚಾರ್ಯ, ಶಿಕ್ಷಕಿ ಗೀತಾಚಂದ್ರ ಕಾರ್ಕಳ ಮುಖ್ಯ ಅತಿಥಿಗಳಾಗಿದ್ದರು.

ನಿರ್ಣಯ ಮಂಡನೆ: ಪ್ರತಿವರ್ಷ ಪದಾಧಿಕಾರಿಗಳ ಸಮಾವೇಶವನ್ನು ಬೇರೆ ಬೇರೆ ಸಂಘಗಳ ಆಶ್ರಯದಲ್ಲಿ ನಡೆಸಬೇಕು. ಮಕ್ಕಳನ್ನು ಶಾಲೆಗೆ ಸೇರಿಸುವಾಗ ಪದನಾಮ, ಆಚಾರ್ಯ ಎಂದೂ, ಜಾತಿಯನ್ನು ವಿಶ್ವಬ್ರಾಹ್ಮಣ/ವಿಶ್ವಕರ್ಮ ಎಂದು ನಮೂದಿಸಬೇಕು. ಜಾತಿಗಣತಿಯ ಸಂದರ್ಭದಲ್ಲಿ ಎಲ್ಲರೂ ವಿಶ್ವಬ್ರಾಹ್ಮಣ/ವಿಶ್ವಕರ್ಮ ಎಂದು ದಾಖಲಿಸಬೇಕು ಎಂಬ ಸಮಾವೇಶದ ನಿರ್ಣಯವನ್ನು ಬಿ.ಎ. ಆಚಾರ್ಯ ಮಣಿಪಾಲ ಸಭೆಯ ಮುಂದಿಟ್ಟರು.

ಹಿರಿಯ ಸಮಾಜ ಸೇವಕ ಕೃಷ್ಣಯ್ಯ ಆಚಾರ್ಯ ತೆಂಕನಿಡಿಯೂರು ಇವರನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ವೆಂಕಟೇಶ ಆಚಾರ್ಯ,ವಿಶ್ವಬ್ರಾಹ್ಮಣ ಯುವಕ ಸೇವಾದಳದ ಅಧ್ಯಕ್ಷ ನಾಗರಾಜ ಆಚಾರ್ಯ, ಗಾಯತ್ರಿ ಮಹಿಳಾ ಮಂಡಳಿಯ ಅಧ್ಯಕ್ಷೆ ಮುಕ್ತಾ ಜಗದೀಶ್ ಉಪಸ್ಥಿತರಿದ್ದರು.

ಕಾರ್ಯದರ್ಶಿ ಹರೀಶ್ ಕಾರ್ಯಕ್ರಮ ನಿರೂಪಿಸಿದರು. ವಿಶ್ವನಾಥ ಆಚಾರ್ಯ ವಂದಿಸಿದರು. ದಿವಾಕರ ಆಚಾರ್ಯ, ಪಿ.ವಿ.ಉಮೇಶ್ ಆಚಾರ್ಯ, ಕೆ.ಜೆ. ಗಣೇಶ್ ಆಚಾರ್ಯ, ಯೋಗೀಶ್ ಆಚಾರ್ಯ ಪೆರಂಪಳ್ಳಿ, ಪ್ರಕಾಶ್ ಎಂ.ಆಚಾರ್ಯ, ರಾಘವೇಂದ್ರ ಆಚಾರ್ಯ, ಅಲೆವೂರು ನಾಗರಾಜ ಆಚಾರ್ಯ, ಮುರಹರಿ ಆಚಾರ್ಯ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!