ಬೆಂಕಿ ಹೆಚ್ಚಿ ತಾಯಿಯನ್ನೇ ಹತ್ಯೆಗೈದ ಮಗ: ಆರೋಪಿ ಪರಾರಿ
ಕಾಸರಗೋಡು: ಮಂಜೇಶ್ವರ ತಾಲೂಕಿನ ವರ್ಕಾಡಿಯಲ್ಲಿ ಮಗನೊಬ್ಬ ಬೆಂಕಿ ಹಚ್ಚಿ ತಾಯಿಯನ್ನು ಕೊಂದಿರುವ ಘಟನೆ ಗುರುವಾರ ಮುಂಜಾನೆ ನಡೆದಿದೆ.
ಮಗನಿಂದಲೇ ಹತ್ಯೆಯಾದ ತಾಯಿಯನ್ನು ವರ್ಕಾಡಿ ನಲ್ಲಂಗಿಯ ದಿ.ಲೂಯಿಸ್ ಮೊಂತೆರೋರವರ ಪತ್ನಿ ಹಿಲ್ಡಾ(60) ಎಂದು ಗುರುತಿಸಲಾಗಿದೆ. ಮಲ್ವಿನ್ ತಾಯಿಯನ್ನು ಕೊಲೆಗೈದ ಆರೋಪಿ.
ಮಲಗಿದ್ದ ತಾಯಿಗೆ ಬೆಂಕಿ ಹಚ್ಚಿ ಕೊಂದ ಬಳಿಕ ತಾಯಿಗೆ ಹುಷಾರಿಲ್ಲ ಎಂದು ನೆರೆಮನೆಯ ಲೋಲಿಟಾರವರನ್ನು ಮನೆಗೆ ಕರೆಸಿದ್ದು, ಅವರಿಗೆ ಗಂಭೀರ ಗಾಯಗಳಾಗಿವೆ ಎನ್ನಲಾಗಿದೆ.





