ಉಡುಪಿ: ಜ್ಯೋತಿ ವೈಂಡಿಂಗ್ ಶಾಪ್ ಮಾಲಕ ಗಣೇಶ್ ಪೈ ಇನ್ನಿಲ್ಲ
ಉಡುಪಿ, ಜೂ.25(ಉಡುಪಿ ಟೈಮ್ಸ್ ವರದಿ) ನಗರದ ತೆಂಕಪೇಟೆಯ ಜ್ಯೋತಿ ವೈಂಡಿಂಗ್ ಅಂಗಡಿಯ ಮಾಲಕ ಗಣೇಶ್ ಪೈ(42) ಅಲ್ಪಕಾಲದ ಅಸೌಖ್ಯದಿಂದ ಕಳೆದ ರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಬೀಡಿನಗುಡ್ಡೆಯ ಪಿಲಿಚಂಡಿ ಮಾರ್ಗದ ನಿವಾಸಿ ಗಣೇಶ್ ಪೈ ಅವರು ಕಳೆದ ಕೆಲವು ದಿನಗಳ ಹಿಂದೆ ಲಿವರ್ ಕಾಯಿಲೆಗೆ ತುತ್ತಾಗಿದ್ದರು. ಬುಧವಾರ ದೇಹದ ಸ್ಥಿತಿ ಗಂಭೀರವಾಗಿ ಚಿಕಿತ್ಸೆಗೆ ಫಲಕಾರಿಯಾಗದೆ ಮೃತಪಟ್ಟರು ಎಂದು ತಿಳಿದುಬಂದಿದೆ.
ಮೃತರು ಪತ್ನಿ, ಓರ್ವ ಪುತ್ರಿ, ತಾಯಿ, ಸಹೋದರಿ ಹಾಗೂ ಸಹೋದರರನ್ನು ಅಗಲಿದ್ದಾರೆ.





