ಮಳೆಗಾಲದಲ್ಲಿ ಕೂದಲಿನ ಆರೈಕೆ ಹೀಗಿರಲಿ..!
ಹೆಚ್ಚಿನ ಜನರಿಗೆ ಮಳೆಗಾಲ ಶುರುವಾಯಿತೆಂದರೆ ಕೂದಲಿನ ಬಗ್ಗೆ ಚಿಂತೆ ಇರುತ್ತದೆ. ಮಳೆಗಾಲದಲ್ಲಿ ಅತಿಯಾದ ನೀರು ಕೂದಲಿಗೆ ತಾಗುವುದರಿಂದ ಕೂದಲುಗಳು ಉದುರುವುದು, ಹೊಟ್ಟಿನ ಸಮಸ್ಯೆ ಕೂಡ ಹೆಚ್ಚಾಗಿರುತ್ತದೆ. ಕೆಲವರು ಇದರಿಂದ ಬಚಾವಾಗಲು ಮೆಡಿಸನ್ ಗಳನ್ನು ಯೂಸ್ ಮಾಡುತ್ತಾರೆ. ಶಾಂಪು ಗಳನ್ನು ಬಳಸುತ್ತಾರೆ. ಆದರೆ ಇದರಿಂದ ಪ್ರಯೋಜನಕ್ಕಿಂತ ಕೂದಲಿಗೆ ಹಾನಿಯಾಗುವುದು ಹೆಚ್ಚು ಆದ್ದರಿಂದ ನಮ್ಮ ಕೂದಲನ್ನು ಕಾಪಾಡಿಕೊಳ್ಳಲು ನಮ್ಮ ಆಹಾರ ಪದ್ಧತಿಯನ್ನು ಸ್ವಲ್ಪ ಬದಲಾವಣೆ ಮಾಡಿಕೊಳ್ಳಬೇಕು.
ಕೂದಲಿಗೆ ಬೇಕಾಗುವಂತಹ ಪ್ರೋಟೀನ್ ಗಳಿರುವಂತಹ ಆಹಾರವನ್ನೇ ಸೇವನೆ ಮಾಡಬೇಕು. ಇದರಲ್ಲಿ ಮೆಂತೆಯ ಅತ್ಯುತ್ತಮವಾಗಿ ಕೆಲಸವನ್ನು ನಿರ್ವಹಿಸುತ್ತದೆ. ಏಕೆಂದರೆ ಮೆಂತೆಯಲ್ಲಿ ವಿಟಮಿನ್ ಇ ಹೇರಳವಾಗಿರುತ್ತದೆ. ಇದು ಕೂದಲನ್ನು ಉದುರುವುದನ್ನು ತಡೆಯುತ್ತದೆ. ಹಾಗಾದರೆ ಈ ಮೆಂತೆಯನ್ನು ಉಪಯೋಗಿಸುವುದು ಹೇಗೆ ಅಂತಾ ತಿಳಿಯಲು ಮುಂದಿನ ಮಾಹಿತಿ ಓದಿ..

ನೀವು ರಾತ್ರಿ ಒಂದು ಬೌಲ್ ನಲ್ಲಿ ಮೆಂತೆಯನ್ನು ನೆನೆಸಿಟ್ಟು ಬೆಳಗ್ಗೆ ಆ ನೀರನ್ನು ಕುಡಿಯಬೇಕು. ಈ ರೀತಿ ಮಾಡುವುದರಿಂದ ತಲೆ ಕೂದಲು ಉದುರುವುದು ಕಡಿಮೆಯಾಗುತ್ತದೆ ಒಮೆಗಾ ತ್ರಿ ಹಾಗೂ ಬಾದಾಮಿಯಲ್ಲಿ ಹೆಚ್ಚು ಪ್ರೋಟೀನ್ ಅಂಶಗಳಿರುತ್ತದೆ. ಇವುಗಳ ಸೇವನೆಯಿಂದ ಕೂದಲಿಗೆ ಸಂಬಂಧಿಸಿದ ಸಾಮಾನ್ಯ ಸಮಸ್ಯೆಗಳು ನಿವಾರಣೆಯಾಗುತ್ತದೆ.





